ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

Last Updated 20 ಮಾರ್ಚ್ 2023, 14:41 IST
ಅಕ್ಷರ ಗಾತ್ರ

ಮೈಸೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯಲ್ಲಿ ನಗರದ ವ್ಯಾಪ್ತಿಯಲ್ಲಿ ಖಾಲಿ ಇರುವ 24 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಏ.17ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ:0821–2491962 ಸಂಪರ್ಕಿಸಬಹುದು.

ಉಚಿತ ತಪಾಸಣೆ ಶಿಬಿರ

ಮೈಸೂರು: ಇಲ್ಲಿನ ಲಕ್ಷ್ಮೀಪುರಂನ ಪ್ರೀತಿ ಕ್ಯಾನ್ಸರ್ ಕೇಂದ್ರದಿಂದ ಕ್ಯಾನ್ಸರ್‌ ತಪಾಸಣೆ ಉಚಿತ ಶಿಬಿರವನ್ನು ಮಾರ್ಚ್‌ 25ರಂದು ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ:0821–4259259 ಸಂಪರ್ಕಿಸಬಹುದು.

ವಧು–ವರರ ಸಮಾವೇಶ

ಮೈಸೂರು: ಬಸವೇಶ್ವರ ವಧು–ವರರ ವಿವಾಹ ವೇದಿಕೆಯಿಂದ ಏ.2ರಂದು ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ ಗನ್‌ಹೌಸ್ ಸಮೀಪದ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ವೀರಶೈವ– ಲಿಂಗಾಯತ ವಧು –ವರರ ಸಮಾವೇಶ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 96862 05346 ಸಂಪರ್ಕಿಸಬಹುದು ಎಂದು ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಜಿ.ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮ

ಮೈಸೂರು: ನರಸಿಂಹರಾಜ ವಿಪ್ರ ಸಂಘವು ಮೇ 7ರಂದು ರಾಜೇಂದ್ರ ನಗರ (ಕೆಸರೆ)ದ ಗಾಯತ್ರಿ ಮಂದಿರದಲ್ಲಿ ಬ್ರಾಹ್ಮಣ ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮ ಆಯೋಜಿಸಲಾಗಿದೆ.

ಹೆಸರು ನೋಂದಣಿಗೆ ಏ.5 ಕೊನೆಯ ದಿನಾಂಕವಾಗಿದೆ. ಮಾಹಿತಿಗೆ ಮೊ.ಸಂಖ್ಯೆ: 99168 87034 ಸಂಪರ್ಕಿಸಬಹುದು ಎಂದು ಅಧ್ಯಕ್ಷ ಬಿ.ವಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳಿಗೆ ಬೇಸಿಗೆ ಶಿಬಿರ

ಮೈಸೂರು: ವಿದ್ಯಾರಣ್ಯಪುರಂನ ಚಾರು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಏ.2ರಿಂದ ಏ.20ರವರೆಗೆ ಮಕ್ಕಳಿಗೆ ‘ಆಡೋಣ ಬಾ...’ ಬೇಸಿಗೆ ರಂಗ ಶಿಬಿರ ಆಯೋಜಿಸಲಾಗಿದೆ.

8ರಿಂದ 15 ವರ್ಷದವರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ 89711 44897 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಗಾಯನ ಸ್ಪರ್ಧೆ

ಮೈಸೂರು: ಇಲ್ಲಿ ನಾಟ್ಯಾಸ್ ಪ್ರದರ್ಶನ ಕಲೆಗಳ ಅಕಾಡೆಮಿಯಿಂದ ಯುಗಾದಿ ಉತ್ಸವ ಹಾಗೂ ಮಹಿಳಾ ದಿನದ ಅಂಗವಾಗಿ ಜಯಲಕ್ಷ್ಮಿಪುರಂನ ಬಿಎಂ ಹ್ಯಾಬಿಟೇಟ್ ಮಾಲ್‌ನಲ್ಲಿ ಮಾರ್ಚ್‌ 22ರಂದು ಸಂಜೆ 5ಕ್ಕೆ ದೇಸಿ ಕೋಗಿಲೆ ಗಾಯನ ಸ್ಪರ್ಧೆ, ದೇಸಿ ಸುಂದರಿ ಫ್ಯಾಷನ್ ಶೋ, ರಂಗೋಲಿ ಸ್ಪರ್ಧೆ ಮತ್ತು ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ:99644 91957 ಸಂಪರ್ಕಿಸಬಹುದು ಎಂದು ಕಾರ್ಯದರ್ಶಿ ಎನ್.ಸಂತೋಷ್ ತಿಳಿಸಿದ್ದಾರೆ.

ಚಿಕಿತ್ಸಾ ಶಿಬಿರ

ಮೈಸೂರು: ಆಲನಹಳ್ಳಿಯ ಜೆಎಸ್‌ಎಸ್‌ ಆಯುರ್ವೇದ ಆಸ್ಪತ್ರೆಯಲ್ಲಿ ಮಂಡಿ, ಕೀಲು ನೋವು ಚಿಕಿತ್ಸಾ ಶಿಬಿರವನ್ನು ಮಾರ್ಚ್‌ 25ರವರೆಗೆ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 6362582116 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT