ಮೈಸೂರು: ‘ಮಂಡ್ಯದಲ್ಲಿ ₹500 ಕೋಟಿ ವೆಚ್ಚದಲ್ಲಿ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್ಎಐ) ಸಂಸ್ಥೆಯ ಸಂಶೋಧನಾ ಕೇಂದ್ರ ಸ್ಥಾಪನೆಗೆ 100 ಎಕರೆ ಭೂಮಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ’ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಇಲ್ಲಿ ತಿಳಿಸಿದರು.

‘ಕೇಂದ್ರ ಬೃಹತ್ ಕೈಗಾರಿಕೆ ಸಚಿವಾಲಯ ಅಧೀನದ, ಅಂತರರಾಷ್ಟ್ರೀಯ ಗುಣಮಟ್ಟದ ಸಂಶೋಧನೆ ಮತ್ತು ತರಬೇತಿ ಕೇಂದ್ರ ಇದಾಗಿದೆ. ಆಟೊಮೊಬೈಲ್ ಕ್ಷೇತ್ರದ ಸಂಶೋಧನೆ, ಪ್ರಯೋಗಾಲಯ, ಎಂಜಿನಿಯರಿಂಗ್ ತಂತ್ರಜ್ಞಾನ, ಕೌಶಲ ತರಬೇತಿ ಒಳಗೊಂಡಿರಲಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ದಕ್ಷಿಣ ಭಾರತದಲ್ಲಿ ತಯಾರಾಗುವ ಎಲ್ಲ ಮಾದರಿಯ ವಾಹನಗಳು ಗುಣಮಟ್ಟ ತಪಾಸಣೆಗೆ ಇಲ್ಲಿಗೆ ಬರಲಿವೆ. ವಾಹನಗಳ ಹೊಗೆ ಉಗುಳುವ ಪ್ರಮಾಣ, ಸುರಕ್ಷತಾ ಕ್ರಮಗಳ ತಪಾಸಣೆ ಮಾಡಿ ಪ್ರಮಾಣೀಕರಿಸಲಿದೆ. ಸರ್ಕಾರ ಹಾಗೂ ಆಟೊಮೊಬೈಲ್ ಕ್ಷೇತ್ರದ ಕೈಗಾರಿಕೆಗಳ ನಡುವೆ ಸೇತುವೆಯಂತೆ ಕೆಲಸ ಮಾಡಲಿದೆ’ ಎಂದರು.

‘ಭೂಮಿ ಒದಗಿಸಲು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ರಾಜ್ಯ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜ.21 ರಂದು ಮಂಡ್ಯ ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದಾರೆ. ಸರ್ಕಾರವು ಜಮೀನು ಒದಗಿಸಿದ ಬಳಿಕ ಯೋಜನೆ ಸಂಬಂಧಿಸಿದ ಪ್ರಕ್ರಿಯೆ ಆರಂಭವಾಗಲಿವೆ’ ಎಂದರು.

‘ಯೋಜನೆಗೆ ಮೊದಲ ಹಂತದಲ್ಲಿ ಅಗತ್ಯವಿರುವ ₹500 ಕೋಟಿ ಅನುದಾನವನ್ನೂ ಕೇಂದ್ರ ಬಜೆಟ್ನಲ್ಲೇ ಘೋಷಿಸಿದೆ. ಕೇಂದ್ರ ಸ್ಥಾಪನೆಯಿಂದ ಕರ್ನಾಟಕದಲ್ಲಿ ಆಟೊಮೊಬೈಲ್ ಕ್ಷೇತ್ರದ ಪ್ರಗತಿ, ಮಂಡ್ಯ ಭಾಗದಲ್ಲಿ ಕೈಗಾರಿಕೆ ಬೆಳವಣಿಗೆ ಆಗಲಿದೆ. ನೇರವಾಗಿ ನೂರಾರು ಉದ್ಯೋಗ ಸೃಷ್ಟಿಯಾಗಲಿದೆ’ ಎಂದು ತಿಳಿಸಿದರು.

‘ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಏನು ಎಂದು ಪ್ರಶ್ನಿಸುವವರಿಗೆ ಇದೇ ನನ್ನ ಉತ್ತರ’ ಎಂದು ಹೇಳಿದರು. ‘ಕೇಂದ್ರ ಸರ್ಕಾರ ಕರ್ನಾಟಕವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಭದ್ರಾವತಿ ವಿಶ್ವೇಶ್ವರಾಯ ಉಕ್ಕು ಕಾರ್ಖಾನೆಗೆ ₹4500-5000 ಕೋಟಿ ಅನುದಾನ ನೀಡಲಾಗುತ್ತಿದೆ. ಎಚ್ಎಂಟಿ ಕಾರ್ಖಾನೆ ಪುನಶ್ಚೇತನಕ್ಕೆ ಮುಂದಾದರೆ, ಅರಣ್ಯ ಸಚಿವರು ಭೂಮಿ ಸರ್ಕಾರದ್ದೆಂದು ಕೋರ್ಟ್ಗೆ ಹೋಗಿದ್ದಾರೆ’ ಎಂದರು. ‘ನಾನು ಕೇಂದ್ರ ಸಚಿವನಾಗಿ ಒಂದೂವರೆ ವರ್ಷ ಕಳೆದರೂ ಈವರೆಗೆ ರಾಜ್ಯದ ಒಬ್ಬ ಸಚಿವ ಭೇಟಿ ಮಾಡಿ ಚರ್ಚಿಸಿಲ್ಲ. ಮೊದಲು ಕೇಂದ್ರದ ಜೊತೆ ಒಳ್ಳೆಯ ಸಂಬಂಧ ಬೆಳೆಸಿ. ನಿಮ್ಮ ನಡವಳಿಕೆ ಬದಲಿಸಿಕೊಳ್ಳಿ. ಎಲ್ಲಕ್ಕೂ ಕೇಂದ್ರದತ್ತ ಬೆಟ್ಟು ಮಾಡುವುದಾದರೆ ರಾಜ್ಯ ಸರ್ಕಾರ ಏಕೆ ಬೇಕು?' ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಹೇಳಿದ್ದು...

*‘ಕೇಂದ್ರ ಪುರಸ್ಕೃತ 53 ಯೋಜನೆಗಳ ಪೈಕಿ ಒಂದು ಯೋಜನೆಗೂ ಸರ್ಕಾರ ರಾಜ್ಯದ ಪಾಲು ಭರಿಸುತ್ತಿಲ್ಲ. ತನ್ನ ವೈಫಲ್ಯವನ್ನು ಮುಚ್ಚಲು ಕೇಂದ್ರದ ಬಜೆಟ್ ಅನ್ನು ಟೀಕೆ ಮಾಡಲಾಗಿದೆ.

*‘ಎತ್ತಿನಹೊಳೆ ಯೋಜನೆಯಲ್ಲಿ ಕಳಪೆ ಗುತ್ತಿಗೆದಾರರಿಗೆ ಅವಕಾಶ ನೀಡಿದ್ದರಿಂದ ₹2900 ಕೋಟಿ ಮೊತ್ತದ ಯಂತ್ರಗಳು ತುಕ್ಕು ಹಿಡಿದಿವೆ. ಯೋಜನಾ ವೆಚ್ಚ ₹33 ಸಾವಿರ ಕೋಟಿಗೆ ಏರಿದರೂ ಇನ್ನೂ ನೀರು ಹರಿದಿಲ್ಲ

*‘ಆಡಳಿತದಲ್ಲಿ ಸಿ.ಎಂ ಪುತ್ರನ ಹಸ್ತಕ್ಷೇಪ ಕುರಿತು ಸಚಿವರೇ ಆಕ್ಷೇಪಿಸುತ್ತಿದ್ದಾರೆ. ‘ಯತೀಂದ್ರ ಟ್ಯಾಕ್ಸ್’ ಮುಂದುವರಿದಿದೆ. ಕುಟುಂಬ ರಾಜಕಾರಣ ಕುರಿತು ಟೀಕಿಸುವ ಸಿದ್ದರಾಮಯ್ಯ ಈಗ ಏನು ಹೇಳುತ್ತಾರೆ?

*‘ಕಾಂಗ್ರೆಸ್ನವರಿಗೆ ಜೆಡಿಎಸ್, ದೇವೇಗೌಡ, ಕುಮಾರಸ್ವಾಮಿಯೇ ಟಾರ್ಗೆಟ್. ಚಾರಿತ್ರ್ಯವಧೆ ಯತ್ನ ಮುಂದುವರಿದಿದೆ. ನನ್ನ ನಾಲ್ಕು ಎಕರೆ ಕೃಷಿ ಭೂಮಿ ವಶಕ್ಕೆ ಎಸ್ಐಟಿ ರಚಿಸಿದ್ದರು. ಪ್ರಜ್ವಲ್ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳಗೆ ₹30 ಲಕ್ಷ ಬಹುಮಾನ ನೀಡಿದ್ದಾರೆ.

*‘ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ನಮ್ಮ ಜೊತೆಯಲ್ಲಿ ಇಲ್ಲ. ಅವರ ಬಗ್ಗೆ ಪದೇ ಪದೇ ಕೇಳಬೇಡಿ. ಆ ಕ್ಷೇತ್ರದಲ್ಲಿ ಸಾಕಷ್ಟು ಸಮರ್ಥ ರಿದ್ದಾರೆ. ಯಾರೇ ಅಭ್ಯರ್ಥಿ ಆದರೂ ನಮಗೆ ಬೆಂಬಲ ಇರಲಿದೆ.’

ಸದ್ಯ ರಾಜ್ಯದ ರಾಜಕೀಯ ವಾತಾವರಣ ನೋಡಿದರೆ ನಾನು ಇಲ್ಲಿರಬೇಕಿತ್ತು ಎನಿಸುತ್ತಿದೆ. ಸೂಕ್ತ ಸಮಯ ಬಂದಾಗ ಬರುತ್ತೇನೆ
ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.