ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯರ ವಲಸೆ ಎಂಬುದು ಬ್ರಿಟಿಷರ ಸೃಷ್ಟಿ: ಡಾ.ಎಸ್‌.ಎಲ್‌.ಭೈರಪ್ಪ ಪ್ರತಿಪಾದನೆ

ಕಾದಂಬರಿಕಾರ ಡಾ.ಎಸ್‌.ಎಲ್‌.ಭೈರಪ್ಪ ಪ್ರತಿಪಾದನೆ
Last Updated 26 ಮಾರ್ಚ್ 2023, 1:55 IST
ಅಕ್ಷರ ಗಾತ್ರ

ಮೈಸೂರು: ‘ದೇಶದಲ್ಲಿ ಆಡಳಿತ ಸುಗಮವಾಗಿ ನಡೆಸಲು ಆರ್ಯರು ಹೊರಗಿನಿಂದ ಬಂದರು ಎಂಬ ವಾದವನ್ನು ಬ್ರಿಟಿಷರು ಹುಟ್ಟುಹಾಕಿದರು’ ಎಂದು ಕಾದಂಬರಿಕಾರ ಡಾ.ಎಸ್‌.ಎಲ್‌.ಭೈರಪ್ಪ ಪ್ರತಿಪಾದಿಸಿದರು.

ನಗರದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ಹಾಗೂ ಸಾಹಿತ್ಯ ಪ್ರಕಾಶನ ವತಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಅಜಕ್ಕಳ ಗಿರೀಶ ಭಟ್ ಅವರ ‘ಬಹುವಚನಕ್ಕೊಂದೇ ತತ್ತ್ವ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು,

‘ಕ್ವಿಟ್‌ ಇಂಡಿಯಾ ಚಳವಳಿ ತೀವ್ರವಾಗಿದ್ದಾಗ ಆರ್ಯರ ವಾದ ಮುನ್ನಲೆಗೆ ಬಂದಿತು. ಅದನ್ನೇ ಜವಹರಲಾಲ್‌ ನೆಹರೂ ಅವರು ಡಿಸ್ಕವರಿ ಆಫ್‌ ಇಂಡಿಯಾದಲ್ಲಿ ಹೇಳಿದರು’ ಎಂದರು.

‘ಸಾವರ್ಕರ್‌ ಹಾಗೂ ನೆಹರೂ ಇಬ್ಬರೂ ಜೈಲು ಅನುಭವಿಸಿದ್ದಾರೆ. ನೆಹರೂ ಐಷಾರಾಮಿಯ ನೈನಿತಾಲ್‌ ಜೈಲಿಗೆ ಕಳುಹಿಸಿದರೆ, ಸಾವರ್ಕರ್‌ ಅಂಡಮಾನ್ ಜೈಲಿನಲ್ಲಿ ದೀರ್ಘ ಕಾಲ ನರಕಯಾತನೆ ಅನುಭವಿಸಿದರು. ರಾಜಕೀಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬ್ರಿಟಿಷರಿಗೆ ಪತ್ರ ಬರೆದು ಬಿಡುಗಡೆಯಾದರು. ಅದನ್ನೇ ಕ್ಷಮೆಯಾಚಿಸಿದರು ಎಂದು ಟೀಕಿಸಲಾಗುತ್ತದೆ. ನೆಹರೂ ಹಾಗೂ ಸಾವರ್ಕರ್‌ ಅವರಿಗೆ ಹೋಲಿಕೆ ಸಾಧ್ಯವೇ’ ಎಂದು ಪ್ರಶ್ನಿಸಿದರು.

ಲೇಖಕ ರೋಹಿತ್‌ ಚಕ್ರತೀರ್ಥ, ‘ವಲಸಿಗರಾದ ಆರ್ಯರು ಸ್ಥಳೀಯರ ಮೇಲೆ ಆಕ್ರಮಣ ಮಾಡಿದರು ಎಂಬ ಸುಳ್ಳುಗಳನ್ನು ಬಿತ್ತಲಾಗಿದೆ. ಇದೀಗ ನಿಜವಾದ ಇತಿಹಾಸ ಏನು ಎಂಬುದು ಭಾರತೀಯರಿಗೆ ಅರ್ಥವಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ವಕೀಲ ಒ.ಶಾಮ ಭಟ್, ಮಹಾರಾಜ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್. ಮುರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT