ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡ್ಮಿಂಟನ್: ಅಮಿತ್‌ರಾಜ್‌ಗೆ ‘ಡಬಲ್ಸ್’ ಪ್ರಶಸ್ತಿ

Published : 6 ಸೆಪ್ಟೆಂಬರ್ 2024, 15:42 IST
Last Updated : 6 ಸೆಪ್ಟೆಂಬರ್ 2024, 15:42 IST
ಫಾಲೋ ಮಾಡಿ
Comments

ಮೈಸೂರು: ನಗರದ ಅಮಿತ್‌ರಾಜ್ ಇಲ್ಲಿನ ಕನಕದಾಸನಗರದ ‘ಹೆಲ್ತ್‌ಸಿಟಿ ಬ್ಯಾಡ್ಮಿಂಟನ್ ಅಂಗಳ’ದಲ್ಲಿ ಗುರುವಾರ ಮುಕ್ತಾಯಗೊಂಡ ರಾಜ್ಯಮಟ್ಟದ ‘ಯೋನೆಕ್ಸ್ ಸನ್‌ರೈಸ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌’ನ 17 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಟ್ರೋಫಿ ಗೆದ್ದರು.

ಡಬಲ್ಸ್ ಫೈನಲ್‌ನಲ್ಲಿ ಅಮಿತ್– ಹಾರ್ದಿಕ್‌ ದಿವ್ಯಾಂಶ್‌ ಜೋಡಿ ಶಿವಮೊಗ್ಗದ ಎಸ್‌.ಪವನ್– ಎಸ್‌.ಪುನೀತ್‌ ಅವರನ್ನು 16-21, 24-22, 21-17ರಿಂದ ಮಣಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಅಮಿತ್–ದಿಯಾ ಭೀಮಯ್ಯ ಜೋಡಿಯು ಬೆಂಗಳೂರಿನ ಧ್ಯಾನ್‌– ದಿಶಾ ಸಂತೋಷ್‌ ಜೋಡಿಯನ್ನು 23-21, 22-20ರಿಂದ ಸೋ‍ಲಿಸಿ ಟ್ರೋಫಿಗೆ ಮುತ್ತಿಕ್ಕಿತು. 

ಬಾಲಕರ ಸಿಂಗಲ್ಸ್‌ ವಿಭಾಗದಲ್ಲಿ ಬೆಂಗಳೂರಿನ ಎಸ್‌.ನಿಶ್ಚಲ್‌ 26-24, 21-10ರಿಂದ ಮೈಸೂರಿನ ಹಾರ್ದಿಕ್‌ ಅವರನ್ನು, ಬಾಲಕಿಯರ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಶೈನಾ ಮಣಿಮುತ್ತು 21-15, 21-19ರಿಂದ ಮೈಸೂರಿನ ದಿಯಾ ಭೀಮಯ್ಯ ಅವರನ್ನು ಸೋಲಿಸಿದರು. ಬಾಲಕಿಯರ ಡಬಲ್ಸ್‌ನಲ್ಲಿ ಬೆಂಗಳೂರಿನ ಆದಿತಿ ದೀಪಕ್‌ ರಾಜ್– ವೃದ್ಧಿ ಪೊನಮ್ಮ ಅವರು 21-9, 21-11ರಿಂದ ಕಲಂದಿಕಾ ಅರುಣ್‌ಕುಮಾರ್– ನೇಹಾ ಕೃಪೇಶ್‌ ವಿರುದ್ಧ ಗೆದ್ದರು.

15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಶೈನಾ ಮಣಿಮುತ್ತು, ಡಬಲ್ಸ್‌ನಲ್ಲಿ ನಿಧಿ– ಸೆಲ್ವಸಮೃದ್ಧಿ, ಮಿಶ್ರ ಡಬಲ್ಸ್‌ನಲ್ಲಿ ಮೆಹುಲ್‌ ಮಾನವ್‌ ಅರುಳ್‌ಮುರುಗನ್‌– ದಿಶಾ ರವಿಭಟ್‌, ಬಾಲಕರ ಸಿಂಗಲ್ಸ್‌ನಲ್ಲಿ ಮೈಸೂರಿನ ಶ್ಯಾಮ್‌ ಬಿಂಡಿಗನವಿಲೆ, ಡಬಲ್ಸ್‌ನಲ್ಲಿ ಪಿಯೂಷ್‌ ತ್ರಿಪಾಠಿ– ಶ್ಯಾಮ್‌ ಪ್ರಶಸ್ತಿ ಗೆದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT