ಮೈಸೂರು: ಎನ್ಐಇ ಕಾಲೇಜು ತಂಡವು ‘ವಿಟಿಯು– ಮೈಸೂರು ವಲಯ’ದ ಅಂತರ ಕಾಲೇಜು ಬ್ಯಾಸ್ಕೆಟ್ಬಾಲ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿತು.

ಕಾಲೇಜಿನ ಒಳಾಂಗಣ ಕ್ರೀಡಾ ಸಮುಚ್ಛಯದಲ್ಲಿ ಸೋಮವಾರ ನಡೆದ ಟೂರ್ನಿಯ ಫೈನಲ್ನಲ್ಲಿ ಆತಿಥೇಯ ತಂಡವು 64–20 ಪಾಯಿಂಟ್ ಅಂತರದಲ್ಲಿ ಮಹಾರಾಜ ತಾಂತ್ರಿಕ ಕಾಲೇಜು (ಎಂಐಟಿ) ತಂಡವನ್ನು ಮಣಿಸಿತು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ನಲ್ಲಿ ಎನ್ಐಇ ಕಾಲೇಜು ತಂಡ 41–28 ಅಂತರದಲ್ಲಿ ಪೊನ್ನಂಪೇಟೆಯ ಸಿಐಟಿ ಕಾಲೇಜು ತಂಡದ ವಿರುದ್ಧ ಜಯ ಸಾಧಿಸಿ, ಅಂತಿಮ ಘಟ್ಟಕ್ಕೆ ಪ್ರವೇಶಿಸಿತ್ತು. ಎಂಐಟಿ ತಂಡದವರು 49–48ರಿಂದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ತಂಡದವರನ್ನು ರೋಚಕವಾಗಿ ಮಣಿಸಿ ಫೈನಲ್ ತಲುಪಿದ್ದರು.

ಟೂರ್ನಿಗೆ ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಆಟಗಾರ ಶ್ರವಣ್ ಅರಸ್ ಚಾಲನೆ ನೀಡಿದರು.

ಎನ್ಐಇ ಆಡಳಿತ ಸಮಿತಿಯ ಕಾರ್ಯದರ್ಶಿ ಎನ್.ಸತ್ಯಕುಮಾರ್, ಉಪ ಪ್ರಾಂಶುಪಾಲ ಕೆ.ಸಿ.ಮಂಜುನಾಥ್, ವಿಟಿಯು ದೈಹಿಕ ಶಿಕ್ಷಣ ವಿಭಾಗದ ಪ್ರಾದೇಶಿಕ ನಿರ್ದೇಶಕ ಎಚ್.ಸಿ.ಸುದಿನ, ಕಾಲೇಜಿ ದೈಹಿಕ ಶಿಕ್ಷಣ ನಿರ್ದೇಶಕಿ ಆರ್.ಕಾವ್ಯಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.