ಮಂಗಳವಾರ, ಮಾರ್ಚ್ 28, 2023
31 °C

ರಾಯರ ಮಠ: ಜ.31ರಿಂದ ಭಜನೆ, ಪ್ರವಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ), ಹಿಂದೂ ಧರ್ಮ ಪ್ರಚಾರ ಪರಿಷತ್ ಮತ್ತು ನಗರದ ಟಿ.ಕೆ.ಬಡಾವಣೆ 4ನೇ ಹಂತದ ಗುರು ರಾಘವೇಂದ್ರ ಸೇವಾ ಟ್ರಸ್ಟ್ ಸಹಯೋಗದಲ್ಲಿ ಭಜನೆ, ಪ್ರವಚನ ಮತ್ತು ಸಂಗೀತ ಕಾರ್ಯಕ್ರಮವನ್ನು ಜ.31ರಿಂದ ಆಯೋಜಿಸಲಾಗಿದೆ.

ಫೆ.3ರವರೆಗೆ ಟಿ.ಕೆ. ಬಡಾವಣೆ ರಾಯರ ಮಠದಲ್ಲಿ ನಿತ್ಯ ಸಂಜೆ 6ರಿಂದ 8ರವರೆಗೆ ಕಾರ್ಯಕ್ರಮ ನಡೆಯಲಿದೆ.

31ರ ಸಂಜೆ 6ರಿಂದ 7ರವರೆಗೆ ಹರೇ ಶ್ರೀನಿವಾಸ ಭಜನಾ ಮಂಡಳಿಯಿಂದ ಭಜನೆ, ಫೆ.1ರಂದು ಚಿನ್ಮಯ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಫೆ.2ರಂದು ವಿದುಷಿ ನಾಗಶ್ರೀ ಅವರಿಂದ ಹರಿನಾಮ ಸಂಕೀರ್ತನೆ ಕಾರ್ಯಕ್ರಮವಿದ್ದು, ಅವರಿಗೆ ಕಲಾವಿದ ಸುಜಯೀಂದ್ರ ರಾವ್ (ತಬಲಾ) ಮತ್ತು ರವಿಶಂಕರ್ (ಕೀಬೋರ್ಡ್)ನಲ್ಲಿ ಸಾಥ್ ನೀಡಲಿದ್ದಾರೆ. ಫೆ.3ರಂದು ವಿಶ್ವೇಶ ಕೃಷ್ಣ ಭಜನಾ ಮಂಡಳಿಯಿಂದ ದಾಸರ ಪದಗಳ ಗಾಯನ ಕಾರ್ಯಕ್ರಮವಿದೆ.

ಮೂರು ದಿನವೂ ರಾತ್ರಿ 7ರಿಂದ 8ರವರೆಗೆ ಪಂಡಿತ ಶ್ರೀಪಾದಾಚಾರ್ಯ ಅವರಿಂದ ‘ರಾಯರ ಅವತಾರ’ದ ಬಗ್ಗೆ ಪ್ರವಚನವಿದೆ. ಪ್ರವೇಶ ಉಚಿತ ಎಂದು ಆಯೋಜಕ ಸುಧೀಂದ್ರ ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ:99804 00535 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು