ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿಚುಂಚನಶ್ರೀಗಳನ್ನು ಬಿಜೆಪಿ ಸಿಎಂ ಮಾಡಲು ಹೊರಟಿದೆ: ಪ್ರೊ. ಮಹೇಶ್‌ಚಂದ್ರ

Last Updated 6 ಡಿಸೆಂಬರ್ 2022, 12:59 IST
ಅಕ್ಷರ ಗಾತ್ರ

ಮೈಸೂರು: ‘ಕರ್ನಾಟಕದಲ್ಲಿ ರಾಜಕೀಯ ಚಿತ್ರಣವನ್ನು ಬದಲಾಯಿಸಲು ಹೊರಟಿರುವ ಬಿಜೆಪಿಯು ಜಾತಿ ರಾಜಕಾರಣಕ್ಕೆ ಮುಂದಾಗಿದ್ದು, ಆದಿಚುಂಚನಗಿರಿಯ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಪಕ್ಷದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ಹೊರಟಿದೆ’ ಎಂದು ಪ್ರೊ. ಮಹೇಶ್‌ಚಂದ್ರ ಗುರು ತಿಳಿಸಿದರು.

‘ಸ್ವಾಮೀಜಿ ಅವರನ್ನು ಮುಂದಿಟ್ಟುಕೊಂಡು, ಒಕ್ಕಲಿಗರ ಮತ ಪಡೆದು, ಸಾಮಾಜಿಕ ನ್ಯಾಯವನ್ನು ಧೂಳೀಪಟ ಮಾಡಲು ಎನ್‌ಡಿಎ ನಾಯಕರು ಮುಂದಾಗಿದ್ದಾರೆ. ಇಲ್ಲಿ ಜಾತಿ ರಾಜಕೀಯ ನಡೆಯುವುದಿಲ್ಲ. ಕುವೆಂಪು, ಬಸವಣ್ಣ, ದೇವರಾಜ ಅರಸು ನಾಡು ಇದಾಗಿದ್ದು, ಈ ಬಗ್ಗೆ ಎಚ್ಚರವಹಿಸಬೇಕು’ ಎಂದು ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ ತಿಳಿಸಿದರು.

‘ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಆಧ್ಯಾತ್ಮ, ಸಂಸ್ಕೃತಿ, ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಯಲು ಬಿಡಿ. ಅದರಿಂದ, ಒಕ್ಕಲಿಗ ಸಮುದಾಯಕ್ಕೆ ಮಾತ್ರವಲ್ಲದೇ, ರೈತ ಬಾಂಧವರಿಗೂ ಒಳ್ಳೆಯದಾಗುತ್ತದೆ. ಮೂರನೇ ದರ್ಜೆಯ ರಾಜಕೀಯವನ್ನು ಮಾಡಬೇಡಿ. ಇದು ರಾಜಕೀಯ ಸಂಚು ಆಗಿದ್ದು, ಈ ಬಗ್ಗೆ ಎಚ್ಚರವಹಿಸಬೇಕು’ ಎಂದು ಸಲಹೆ ನೀಡಿದರು.

‘ಉತ್ತರಪ್ರದೇಶದಲ್ಲಿ ಮಾಡಿದ ಯೋಗಿ ಮೂಲಕ ಮಾಡಿದ ಪ್ರಯೋಗವನ್ನು ರಾಜ್ಯದಲ್ಲಿಯೂ ಪ್ರಯೋಗಿಸಲು ಯತ್ನಿಸುತ್ತಿದ್ದಾರೆ. ಇದನ್ನು ತಡೆಯುವ ಅಗತ್ಯವಿದೆ. ಸ್ವಾಮೀಜಿಗಳಿಗೆ ರಾಜಕೀಯ ಬೇಡ’ ಎಂದು ಈ ವೇಳೆ ಮನವಿ ಮಾಡಿದರು.

ಪುಸ್ತಕ ತಯಾರಿ: ‘ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತಂತೆ ‘ದಿ ಹಿಡನ್‌ ಅಜೆಂಡಾ ಆಫ್‌ ಆರ್‌ಎಸ್‌ಎಸ್‌’ ಹೆಸರಿನ 200 ಪುಟದ ಇಂಗ್ಲಿಷ್‌ ಪುಸ್ತಕ ಬರೆಯುತ್ತಿದ್ದು, ಆದಷ್ಟು ಬೇಗ ಬಿಡುಗಡೆಗೊಳಿಸಲಾಗುವುದು’ ಎಂದು ಮಹೇಶ್‌ಚಂದ್ರ ಗುರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT