ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಯದ್ದು ಭ್ರಷ್ಟಾಚಾರ, ಕಾಂಗ್ರೆಸ್‌ನದ್ದು ಬದ್ಧತೆ ರಹಿತ ಆಡಳಿತ: ಚಂದ್ರು

Published 30 ಜುಲೈ 2023, 7:04 IST
Last Updated 30 ಜುಲೈ 2023, 7:04 IST
ಅಕ್ಷರ ಗಾತ್ರ

ಮೈಸೂರು: ‘ಬಿಜೆಪಿಯದ್ದು ಭ್ರಷ್ಟಾಚಾರದ ಆಡಳಿತವಾದರೆ, ಕಾಂಗ್ರೆಸ್‌ನದ್ದು ಒತ್ತಡ ಮತ್ತು ಬದ್ಧತೆ ರಹಿತ ಆಡಳಿತ’ ಎಂದು ಆಮ್‌ ಆದ್ಮಿ ಪಕ್ಷದ (ಆಪ್‌) ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿಯ ಶೇ 40ರ ಹಗರಣ, ಜೆಡಿಎಸ್‌ನ ಸಿದ್ಧಾಂತವಿಲ್ಲದ ರಾಜಕಾರಣವೇ ಕಾಂಗ್ರೆಸ್‌ಗೆ ವರವಾಗಿ, ಅಧಿಕಾರ ದೊರಕಿಸಿದೆ. ರಾಜ್ಯದ ಜನಕ್ಕೆ ಆಪ್‌ ಬಗ್ಗೆ ಒಲವಿದ್ದು, ನಾವುಗಳೇ ನಿಜವಾದ ಪರ್ಯಾಯ ಆಯ್ಕೆ. ಮತ್ತು ಮುಂಬರುವ ಚುನಾವಣೆಗಳಲ್ಲಿ ಪಕ್ಷವು ಸಮರ್ಥವಾಗಿ ಸ್ಪರ್ಧಿಸಲಿದೆ’ ಎಂದರು.

‘ನಮ್ಮ ಪಕ್ಷದ ದೆಹಲಿ ಮಾದರಿಯ ಉಚಿತ ಯೋಚನೆಗಳನ್ನು ಕದ್ದಿರುವ ರಾಜ್ಯ ಕಾಂಗ್ರೆಸ್‌, ಅದನ್ನು ಸಮರ್ಥವಾಗಿ ಜಾರಿ ಮಾಡದೇ ನಿಯಮಗಳನ್ನು ಹೇರುತ್ತಿದೆ. ವರ್ಗಾವಣೆ ಮುಂತಾದ ಒತ್ತಡ ತಂತ್ರ ಅನುಸರಿಸುತ್ತಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳೇ ನಮಗೆ ಸ್ಫೂರ್ತಿ. ನೂತನವಾಗಿ ರಾಜ್ಯಧ್ಯಕ್ಷನಾದ ನನ್ನ ಕರ್ತವ್ಯ ಪಕ್ಷವನ್ನು ಭದ್ರಪಡಿಸುವುದು, ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ’ ಎಂದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ, ರಾಜ್ಯ ಮಹಿಳಾ ಅಧ್ಯಕ್ಷೆ ಕುಶಲಾ ಸ್ವಾಮಿ, ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್, ರಾಜ್ಯ ಜಂಟಿ ಕಾರ್ಯದರ್ಶಿ ಮಾಲವಿಕಾ ಗುಬ್ಬಿವಾಣಿ, ಜಿಲ್ಲಾಧ್ಯಕ್ಷ ಎಲ್.ರಂಗಯ್ಯ, ಜಿಲ್ಲಾ ಮಾಧ್ಯಮ ಉಸ್ತುವಾರಿ ಜಿ.ಆರ್.ವಿದ್ಯಾರಣ್ಯ, ಸೋಸಲೆ ಸಿದ್ದರಾಜು, ಧರ್ಮಶ್ರೀ, ಉಷಾ ಸಂಪತ್‌ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT