ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಿಪಿಆರ್‌ನಿಂದ ಜೀವ ಉಳಿಸಬಹುದು’

Published 4 ಜೂನ್ 2024, 2:43 IST
Last Updated 4 ಜೂನ್ 2024, 2:43 IST
ಅಕ್ಷರ ಗಾತ್ರ

ಮೈಸೂರು: ‘ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್ (ಸಿಪಿಆರ್) ವಿಧಾನದಿಂದ ಹೆಚ್ಚಿನ ಸಂದರ್ಭಗಳಲ್ಲಿ ವ್ಯಕ್ತಿಯ ಜೀವ ಉಳಿಸಬದುದು’ ಎಂದು ಮೈಸೂರು ವೈದ್ಯಕೀಯ ಕಾಲೇಜಿನ ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ.ವಿ.ವೈ. ಶ್ರೀನಿವಾಸ್ ತಿಳಿಸಿದರು.

ಮೈಸೂರು ಅಂಚೆ ವಿಭಾಗ ಮತ್ತು ಲಯನ್ಸ್ ಜೀವಧಾರ ಸಂಸ್ಥೆಯ ಆಶ್ರಯದಲ್ಲಿ ವಿಶ್ವ ಸಿಪಿಆರ್ ಮತ್ತು ಎಇಡಿ ಜಾಗೃತಿ ಸಪ್ತಾಹದ ಅಂಗವಾಗಿ ಅಂಚೆ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಮೈಸೂರು ಅಂಚೆ ವಿಭಾಗದ ಸಿಬ್ಬಂದಿಗೆ ಏರ್ಪಡಿಸಿದ್ದ ಸಿಪಿಆರ್ ತರಬೇತಿ ಮತ್ತು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

‘ಸಮಯಕ್ಕೆ ಸರಿಯಾಗಿ ಸಿಪಿಆರ್‌ ಮಾಡಬೇಕು. ರಕ್ತದಾನದ ಕುರಿತು ಜನರಲ್ಲಿ ತಪ್ಪು ಕಲ್ಪನೆಗಳಿವೆ. ರಕ್ತದಾನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದಿಲ್ಲ; ಬದಲಿಗೆ ವೃದ್ಧಿಸುತ್ತದೆ’ ಎಂದು ಡಾ.ಪರಿಣಿತ ತಿಳಿಸಿದರು.

‘ದೇಶದಲ್ಲಿ ರಕ್ತದಾನದಲ್ಲಿ ಇಂದೋರ್‌ ಮೊದಲ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಆ ಸ್ಥಾನವನ್ನು ನಾವು ತಲುಪಬೇಕು ಎಂಬುದು ಸಂಸ್ಥೆಯ ಆಶಯ’ ಎಂದು ಜೀವಧಾರ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಗಿರೀಶ್ ಹೇಳಿದರು.

‘ಅಂಚೆ ಕಚೇರಿಯ ಸಿಬ್ಬಂದಿ ಸಾರ್ವಜನಿಕರೊಂದಿಗೆ ದಿನ ನಿತ್ಯ ಸಂಪರ್ಕದಲ್ಲಿ ಇರುವುದರಿಂದ ಅವರಿಗೆ ಸಿಪಿಆರ್ ತರಬೇತಿ ಕೊಟ್ಟಿದ್ದು ಹೆಚ್ಚು ಅನುಕೂಲ ಆಗುತ್ತದೆ’ ಎಂದು ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕಿ ಏಂಜಲ್ ರಾಜ್ ತಿಳಿಸಿದರು.

‘ಮುಂದೆ ವಿಭಾಗದ ಎಲ್ಲಾ ಪೋಸ್ಟ್ ಮ್ಯಾನ್‌ಗಳಿಗೆ ಸಿಪಿಆರ್ ತರಬೇತಿ ನೀಡಲಾಗುವುದು’ ಎಂದರು.

ಡಾ.ವಿವೇಕ್, ಜೀವಧಾರ ಲಯನ್ಸ್ ರಕ್ತ ಕೇಂದ್ರದ ಆಡಳಿತಾಧಿಕಾರಿ ರಶ್ಮಿ ರಾಜ್, ಸಹಾಯಕ ಅಂಚೆ ಅಧೀಕ್ಷಕ ಚೇತನ್ ಉತ್ತಪ್ಪ, ಶ್ರೀನಿವಾಸ್, ಅಂಚೆ ನಿರೀಕ್ಷಕ ಅನೂಪ್ ರಾಯ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT