ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್ ಬೌನ್ಸ್ ಪ್ರಕರಣ: ಕುಪ್ಪಳ್ಳಿ ರಿಶ್ವನಾಥ್ ಪರ ತೀರ್ಪು

Published 6 ಜನವರಿ 2024, 15:46 IST
Last Updated 6 ಜನವರಿ 2024, 15:46 IST
ಅಕ್ಷರ ಗಾತ್ರ

ಮೈಸೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ನಿವೃತ್ತ ಪ್ರಾಧ್ಯಾಪಕ ಕುಪ್ಪಳ್ಳಿ ರಿಶ್ವನಾಥ್ ಅವರ ಮೇಲ್ಮನವಿಯನ್ನು ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಪುರಸ್ಕೃತಗೊಳಿಸಿದ್ದು, ನಿರಪರಾಧಿ ಎಂದು ತೀರ್ಪು ನೀಡಿದೆ.

ರಿಶ್ವನಾಥ್ ಮನೆಯಲ್ಲಿ ಇಲ್ಲದಿದ್ದಾಗ ಅವರ ಪತ್ನಿಯಿಂದ ನಾಗರತ್ನಾ ಎಂಬುವವರು ಮೂರು ಚೆಕ್‌ ಪಡೆದು, ₹15 ಲಕ್ಷ ಮೊತ್ತ ಬರೆದುಕೊಂಡು ನಕಲಿ ಸಹಿ ಮಾಡಿದ್ದರು. ಈ ಮೊತ್ತ ಪಾವತಿಸಬೇಕೆಂದು ರಿಶ್ವನಾಥ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು.

ರಿಶ್ವನಾಥ್‌ ಇದರ ವಿರುದ್ಧ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯದ ಮೂಲಕ ನಾಗರತ್ನಾ ಅವರು ನಕಲಿ ಸಹಿ ಮಾಡಿದ್ದನ್ನು ಸಾಬೀತುಪಡಿಸಿದ್ದರು. ವಾದ ಆಲಿಸಿದ ನ್ಯಾಯಾಧೀಶ ಎಸ್‌.ಟಿ.ದೇವರಾಜ್‌ ಅವರು ತೀರ್ಪು ಪ್ರಕಟಿಸಿದ್ದಾರೆ.

ರಿಶ್ವನಾಥ್‌ ಪರವಾಗಿ ಟಿ.ಪ್ರಕಾಶ್ ಹಾಗೂ ಕೆ.ಎಲ್.ರತ್ನಾಕರ್ ಹಾಗೂ ಆರೋಪಿ ಪರವಾಗಿ ಕೆ.ಈಶ್ವರ್ ಭಟ್ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT