ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ಕಾರ್ಯಾಗಾರ

Published 13 ಸೆಪ್ಟೆಂಬರ್ 2023, 7:07 IST
Last Updated 13 ಸೆಪ್ಟೆಂಬರ್ 2023, 7:07 IST
ಅಕ್ಷರ ಗಾತ್ರ

ಮೈಸೂರು: ಜಯಲಕ್ಷ್ಮಿಪುರಂನಲ್ಲಿರುವ ಅಥರ್ವ ಮಲ್ಟಿ ಸ್ಪೆಷಲಿಟಿ ಆಯುರ್ವೇದಿಕ್ ಅಂಡ್ ಹೀಲಿಂಗ್ ಸೆಂಟರ್‌ನಲ್ಲಿ ಗಣಪತಿ ಹಬ್ಬದ ಅಂಗವಾಗಿ ವಿನ್ಯಾಸ ಈವೆಂಟ್ಸ್ ಸಂಸ್ಥೆಯಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆ ಕಾರ್ಯಾಗಾರ ನಡೆಯಿತು.

ಸಂಸ್ಥೆಯ ಪದಾಧಿಕಾರಿ ಜ್ಯೋತಿ ರೇಚಣ್ಣ ಮಾತನಾಡಿ, ‘ನಗರದಲ್ಲಿ ಪಿಒಪಿ ಗಣಪತಿ ಮೂರ್ತಿಗಳಿಂದ ಆಗುತ್ತಿರುವ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಪಿಒಪಿ ಗಣಪತಿ ಮೂರ್ತಿಗಳಿಂದ ಜಲಮೂಲಗಳು ಕಲುಷಿತಗೊಳ್ಳುತ್ತಿವೆ. ಇವುಗಳ ಬದಲಿಗೆ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು' ಎಂದು ಹೇಳಿದರು.

ಶಾಲಾ- ಕಾಲೇಜುಗಳ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸ್ಥಳೀಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಡಾ.ಅಪರ್ಣ ಉನ್ನಿ, ಸಂಪಾದಕಿ ಸಹನಾ, ಕಾರ್ತಿಕ್ ಉಪಮನ್ಯು, ನಾಗೇಶ್, ಪುಷ್ಪಲತಾ ಕೋಕಿಲ, ರುಕ್ಮಿಣಿ, ಪೂರ್ಣಿಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT