ಮೈಸೂರು: ರಾಜ್ಯಪಾಲ ಥಾವರಚಂದ್ ಗೆಹಲೋತ್ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಮಸ್ವಾಮಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

‘ರಾಜ್ಯಪಾಲರ ಹುದ್ದೆ ಸಾಂವಿಧಾನಿಕ ಮಾನ್ಯತೆ ಹೊಂದಿದೆ. ಅವರ ಭಾಷಣದ ಸಂದರ್ಭದಲ್ಲಿ ನನ್ನ ಸರ್ಕಾರ ನನ್ನ ಸರ್ಕಾರದ ಸಾಧನೆ ಎಂದು ಭಾಷಣ ಮಾಡುವುದು ಸಂಪ್ರದಾಯ. ಸಚಿವ ಸಂಪುಟ, ಸಚಿವರ, ಪರಿಷತ್ ತೀರ್ಮಾನವಾದ ವಿಷಯ ಎಂದರೆ ಅದು ಏಳು ಕೋಟಿ ಜನರ ಭಾವನೆ ಇದ್ದಂತೆ. ಸರ್ಕಾರ ನಿಗದಿ ಮಾಡಿದ್ದ ಜಂಟಿ ಅಧಿವೇಶನದಲ್ಲಿ ಸರ್ಕಾರದ ಅಭಿವೃದ್ಧಿ ವಿಷಯವನ್ನು ಪ್ರಸ್ತಾಪಿಸಬೇಕಾದ ರಾಜ್ಯಪಾಲರು ಬಿಜೆಪಿಯವರ ಕೈಗೊಂಬೆಯಂತೆ ವರ್ತಿಸಿರುವುದು ನಾಡಿನ ಜನತೆಗೆ ಎಸಗಿರುವ ದ್ರೋಹ’ ಎಂದು ಎಂ.ಕೆ.ಸೋಮಶೇಖರ್ ದೂರಿದರು.

‘ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಸಂವಿಧಾನಕ್ಕೆ ಅಪಚಾರಗಳು ನಿರಂತರವಾಗಿ ನಡೆಯುತ್ತಿವೆ. ಇದರ ಬಗ್ಗೆ ಜನ ಜಾಗೃತರಾಗದಿದ್ದರೆ ಮುಂದೆ ಬಹಳಷ್ಟು ಆತಂಕಗಳು ಎದುರಾಗುತ್ತವೆ. ಸಂವಿಧಾನಕ್ಕೆ ಗೌರವ ಕೊಡದ ರಾಜ್ಯಪಾಲರನ್ನು ಕೂಡಲೇ ರಾಷ್ಟ್ರಪತಿಗಳು ವಾಪಸ್ಸು ಕರೆಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಎಚ್.ಎ. ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಸೋಮಶೇಖರ್, ಜೋಗಿ ಮಹೇಶ್, ಪಾಲಿಕೆ ಮಾಜಿ ಸದಸ್ಯರಾದ ಎಂ.ಶಿವಣ್ಣ, ಎಂ.ಸುನೀಲ್, ಶೋಭಾ ಸುನೀಲ್, ಆರ್.ಎಚ್. ಕುಮಾರ್, ಕಾಂಗ್ರೆಸ್ ಮುಖಂಡ ಶೇಖರ್, ಅಶೋಕಪುರಂ ವಾಸು, ಅರುಣ್ ಬುದ್ಧ, ಭಾಸ್ಕರ್, ಪಟಾಕಿ ಮಂಜುನಾಥ್ , ಶಂಕರ್ ಬಾಸ್, ಭಾಸ್ಕರ್ .ಎಲ್ ಗೌಡ, ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಮಹಮ್ಮದ್ ಫಾರೂಕ್, ವಿಜಯ್ ಕುಮಾರ್ ಭಾಗವಹಿಸಿದ್ದರು.