‘ಓದಿನೊಂದಿಗೆ ಆರೋಗ್ಯ ಕಾಳಜಿ ಇರಲಿ’
‘ವಿದ್ಯಾರ್ಥಿಗಳು ಓದಿನ ಜೊತೆಗೆ ಆರೋಗ್ಯದ ಕಾಳಜಿಯೂ ಇರಬೇಕು’ ಎಂದು ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ತಿಳಿಸಿದರು. ‘ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲೂ ಹೆದರಬಾರದು. ಧೈರ್ಯದಿಂದ ಪರಿಸ್ಥಿತಿ ಎದುರಿಸಬೇಕು. ಸಮಸ್ಯೆಗಳಿಗೆ ಸಿಲುಕಿ ಕೊಳ್ಳದವರು ಈ ಜಗತ್ತಿನಲ್ಲಿ ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಸಮಸ್ಯೆಗಳಿಗೆ ಸಿಲುಕಿಕೊಂಡಿರುತ್ತಾರೆ. ಆದರೆ ಅದರಿಂದ ಹೊರಬಂದು ಸಾಧನೆ ಮಾಡುವುದೇ ಜೀವನದ ದೊಡ್ಡ ಜಯ’ ಎಂದರು.