ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಲ್ಲಿ ಆಯೋಜಿಸಿದ್ದ ‘ದಸರಾ ವಸ್ತುಪ್ರದರ್ಶನ’ಕ್ಕೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈವರೆಗೆ 18 ಲಕ್ಷಕ್ಕೂ ಹೆಚ್ಚಿನ ಮಂದಿ ಭೇಟಿ ನೀಡಿ ಹೊಸ ದಾಖಲೆ ನಿರ್ಮಾಣವಾಗಿದೆ.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ (ಕೆಇಎ)ದಿಂದ ಆಯೋಜಿಸುವ ವಸ್ತುಪ್ರದರ್ಶನವು ನಾಡಹಬ್ಬ ಮುಗಿದ ನಂತರವೂ ಸರಾಸರಿ 3 ತಿಂಗಳವರೆಗೆ ಮುಂದುವರಿಯುವ ವಾರ್ಷಿಕ ಕಾರ್ಯಕ್ರಮ. ಇಲ್ಲಿಗೆ ಪ್ರವಾಸಿಗರು, ಸ್ಥಳೀಯರನ್ನು ಆಕರ್ಷಿಸಲೆಂದು ಪ್ರತಿ ಬಾರಿಯೂ ವಿಶೇಷಗಳನ್ನು ಜೋಡಿಸಲಾಗುತ್ತದೆ. ಈ ಬಾರಿಯೂ ಹಲವು ಆಕರ್ಷಣೆಗಳನ್ನು ಪ್ರಾಧಿಕಾರ ಪರಿಚಯಿಸಿತ್ತು.

ದಸರಾ ಉದ್ಘಾಟನೆಯ ದಿನವಾದ ಸೆ.22ರಂದು ಪ್ರಾರಂಭವಾದ ವಸ್ತುಪ್ರದರ್ಶನವನ್ನು ಡಿ.20ರವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಸಾರ್ವಜನಿಕರು ಹಾಗೂ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ್ದರಿಂದ ಮತ್ತು ಹೊಸ ವರ್ಷದ ಅಂಗವಾಗಿ ಹಿಂದಿನ ವರ್ಷಗಳಂತೆಯೇ ಮುಂದುವರಿಸಲಾಗಿದೆ. ‘ಗುತ್ತಿಗೆದಾರರ ಕೋರಿಕೆ ಮೇರೆಗೆ ಜ.5ರವರೆಗೆ ಅಂದರೆ ಒಟ್ಟು 16 ದಿನಗಳವರೆಗೆ ಮುಂದುವರಿಸಿ ಪ್ರವಾಸಿಗರು, ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಡಿ.20ರವರೆಗೆ ಇತ್ತು

ಡಿ.20ರವರೆಗೆ 15 ಲಕ್ಷ ಮಂದಿ ಭೇಟಿ ನೀಡಿದ್ದರು. ಅದಾದ ನಂತರ, ಕ್ರಿಸ್ಮಸ್ ರಜೆ, ವರ್ಷಾಂತ್ಯ ಹಾಗೂ ಹೊಸ ವರ್ಷಾಚರಣೆ ಅಂಗವಾಗಿ 3 ಲಕ್ಷಕ್ಕೂ ಅಧಿಕ ಸಂದರ್ಶಕರು ಭೇಟಿ ಕೊಟ್ಟಿರುವುದು ವರದಿಯಾಗಿದೆ. ಹಿಂದಿನ ವರ್ಷ 17 ಲಕ್ಷ ಮಂದಿ ಭೇಟಿ ನೀಡಿದ್ದರು. ಈ ಬಾರಿ ಇನ್ನೂ ಕೆಲವು ದಿನಗಳು ಇರುವುದರಿಂದಾಗಿ, ಮತ್ತಷ್ಟು ಪ್ರಮಾಣದಲ್ಲಿ ಸಂದರ್ಶಕರು ಬರುವ ನಿರೀಕ್ಷೆಯನ್ನು ಪ್ರಾಧಿಕಾರ ಹೊಂದಿದೆ.

‘ಸಂಗೀತ ಕಾರಂಜಿ’ಗೆ ಮಾಜಿ ಸಚಿವ ಅಜೀಜ್ ಸೇಠ್ ಹೆಸರಿಡಲಾಗಿದೆ. ₹ 10 ಕೋಟಿ ಅನುದಾನದಲ್ಲಿ ‘ಸಿದ್ದರಾಮಯ್ಯ ಅಂಕಣ’ ಹೆಸರಿನ ಶಾಶ್ವತ ಮಳಿಗೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೋದ ವರ್ಷಕ್ಕೆ ಹೋಲಿಸಿದರೆ, ವಯಸ್ಕರಿಗೆ ₹ 5 ಪ್ರವೇಶ ಶುಲ್ಕ ಏರಿಸಲಾಗಿದೆ. ಅಂದರೆ ಈಗ ₹ 40 ಪ್ರವೇಶ ಶುಲ್ಕವಿದೆ. ಮಕ್ಕಳಿಗೆ ಹಿಂದಿನಂತೆಯೇ ₹ 25 ಪ್ರವೇಶ ಶುಲ್ಕವಿದೆ. ಒಟ್ಟು 15 ಕೌಂಟರ್ಗಳನ್ನು ತೆರೆಯಲಾಗಿದೆ.

‘ಈ ಬಾರಿ, ₹ 20 ಕೋಟಿ ವೆಚ್ಚದಲ್ಲಿ ‘ಎ’ ಬ್ಲಾಕ್ ಅಭಿವೃದ್ಧಿಪಡಿಸಿ ಬೇಲೂರು–ಹಳೇಬೀಡು ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದ್ದು, ಹೊಸ ಆಕರ್ಷಣೆ ಎನಿಸಿತು. ಆವರಣದಲ್ಲಿನ ‘ಸಂಗೀತ ಕಾರಂಜಿ’ (425 ಅಡಿ ಉದ್ದ ಹಾಗೂ 45 ಅಡಿ ಅಗಲ)ಯನ್ನೂ ಹೊಸದಾಗಿ ವಿನ್ಯಾಸಗೊಳಿಸಿದ್ದು ಕೂಡ ಗಮನಸೆಳೆಯಿತು. ವಿದ್ಯುತ್ ದೀಪಾಲಂಕಾರವನ್ನು ವಿನೂತನವಾಗಿ ಮಾಡಲಾಗಿತ್ತು. ಮಕ್ಕಳಿಗೆ ಇಷ್ಟವಾಗುವ ಅಮ್ಯೂಸ್ಮೆಂಟ್ನಲ್ಲಿ ಜಾಸ್ತಿ ಆಯ್ಕೆಗಳಿದ್ದವು. ಇವೆಲ್ಲವೂ ಜನರಿಗೆ ಇಷ್ಟವಾದವು’ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ಖಾನ್ ಹಾಗೂ ಸಿಇಒ ರುದ್ರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸ ವಿನ್ಯಾಸದ ಕಾರಣ

154 ವಾಣಿಜ್ಯ ಮಳಿಗೆಗಳಿದ್ದು, 42 ಸರ್ಕಾರಿ ಇಲಾಖೆಗಳ ಮಳಿಗೆಗಳಿವೆ. ಅವುಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿತ್ತು. ಸರ್ಕಾರದ ಜನಪರ ಯೋಜನೆಗಳನ್ನು ಪರಿಚಯಿಸುವ ಕೆಲಸವನ್ನೂ ಮಾಡಲಾಗಿತ್ತು. ಗಾನಕೋಗಿಲೆ ಪಿ.ಕಾಳಿಂಗರಾವ್ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂದರ್ಶಕರನ್ನು ಸೆಳೆಯುವ ಪ್ರಯತ್ನವೂ ಮುಂದುವರಿಯಿತು.

ಪ್ರಾಧಿಕಾರವು, ವಸ್ತುಪ್ರದರ್ಶನ ಆಯೋಜನೆ ಹಾಗೂ ನಿರ್ವಹಣೆಗೆಂದು ಜಾಗತಿಕ ಟೆಂಡರ್ ಕರೆದಿತ್ತು. ಇದರಲ್ಲಿ ಫನ್ವರ್ಲ್ಡ್ ಸಂಸ್ಥೆಯು ಹೆಚ್ಚು ಕೋಟ್ ಮಾಡಿ ಅಂದರೆ ₹ 11.57 ಕೋಟಿ ಮೊತ್ತಕ್ಕೆ ಟೆಂಡರ್ ಪಡೆದುಕೊಂಡಿತ್ತು. 2024ರಲ್ಲಿ ₹10.03 ಕೋಟಿಗೆ ಟೆಂಡರ್ ಆಗಿತ್ತು. ಈ ಬಾರಿ ಟೆಂಡರ್ ಮೊತ್ತ ಹೆಚ್ಚಾದ್ದರಿಂದ ಪ್ರಾಧಿಕಾರಕ್ಕೆ ವರಮಾನವೂ ಬಂದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ರಾಜ್ಯದ ಮಹಿಳೆಯರಿಗೆ ‘ಶಕ್ತಿ’ ಯೋಜನೆಯಡಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿರುವುದು ಕೂಡ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದಕ್ಕೆ ಸಹಕಾರಿಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ವಸ್ತುಪ್ರದರ್ಶನದ ಆವರಣದಲ್ಲಿ ಈ ಬಾರಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ‘ಸಿದ್ಧಿ ಸಾಧಕ ಸಿದ್ದರಾಮಯ್ಯ- ನಮ್ಮ ಮುಖ್ಯಮಂತ್ರಿ’ ಛಾಯಾಂಕಣ ಸಂದರ್ಶಕರ ಹಾಗೂ ಅಭಿಮಾನಿಗಳ ಗಮನಸೆಳೆಯಿತು. ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನದ ವಿವಿಧ ಮಜಲುಗಳನ್ನು ಬಿಂಬಿಸುವ ವೈವಿಧ್ಯಮಯ ಫೋಟೊಗಳ ಲೋಕವನ್ನು ಕಂಡು ಸಂದರ್ಶಕರು ಖುಷಿಪಟ್ಟರು.

ಕ್ರಿಸ್ಮಸ್ ರಜೆ ಕಾರಣದಿಂದ ವರ್ಷಾಂತ್ಯದಲ್ಲಿ ದಸರಾ ವಸ್ತುಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಕರು ಭೇಟಿ ನೀಡಿದ್ದರು.
– ರುದ್ರೇಶ್, ಸಿಇಒ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ

ದಸರಾ ವಸ್ತುಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಖುಷಿ ತಂದಿದೆ. ವರ್ಷಪೂರ್ತಿ ಚಟುವಟಿಕೆಗಳನ್ನು ಕೈಗೊಂಡು ಜನರನ್ನು ಆಕರ್ಷಿಸಲು ಯೋಜಿಸಲಾಗಿದೆ.
– ಅಯೂಬ್ಖಾನ್, ಅಧ್ಯಕ್ಷ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.