
‘ಸಂದೇಹವಿಲ್ಲದೆ ಮಾಹಿತಿ ಬಳಕೆ’ ದೇಶದ ಆರ್ಥಿಕ ಸ್ಥಿತಿಗತಿ ಮಾರುಕಟ್ಟೆ ವಿಶ್ಲೇಷಣೆ ಮತ್ತು ಸರ್ಕಾರದ ಯೋಜನೆಗಳ ಮಾಹಿತಿ ಒದಗಿಸುವಲ್ಲಿ ‘ಪ್ರಜಾವಾಣಿ’ ಅತ್ಯಂತ ವಿಶ್ವಾಸಾರ್ಹವಾಗಿದೆ. ಪತ್ರಿಕೆಯಲ್ಲಿನ ಮಾಹಿತಿಯನ್ನು ಸಂದೇಹವಿಲ್ಲದೇ ಬಳಸಬಹುದು ಎನ್ನುವುದೇ ಹೆಮ್ಮೆಯ ಸಂಗತಿಎನ್.ಮಂಜುನಾಥ ಕುವೆಂಪುನಗರ
ಜನಪರವಾದ ‘ಪ್ರಜೆಗಳ ವಾಣಿ’ ‘ಪ್ರಜಾವಾಣಿ’ಯು ಜನಪರ ಕೆಲಸ ಮಾಡುತ್ತಿರುವ ‘ಪ್ರಜೆಗಳ ವಾಣಿ’. ಯಾವುದೇ ಉತ್ಪ್ರೇಕ್ಷೆಯಿಲ್ಲದೆ ವಾಸ್ತವ ವರದಿ ನೀಡುತ್ತದೆ. ಇಲ್ಲಿ ಪ್ರಕಟವಾಗುವ ಸಾಧಕರ ಪರಿಚಯ ಅನೇಕರನ್ನು ಪ್ರೋತ್ಸಾಹಿಸಿದೆ. ವಿದ್ಯಾರ್ಥಿಗಳಿಗಂತೂ ಮಹತ್ವದ ಮಾಹಿತಿ ತಾಣರಾಮಚಂದ್ರ ಭಟ್ ಪ್ರಾಂಶುಪಾಲ ಸದ್ವಿದ್ಯಾ ಪ್ರೌಢಶಾಲೆ
‘ತವರಿನಿಂದಲೂ ಅನುಬಂಧ’ ತಾಯಿ ಮನೆಯಲ್ಲಿದ್ಧಾಗಿನಿಂದಲೂ ಪ್ರಜಾವಾಣಿ ಓದುತ್ತಿದ್ದು ಒಂದು ಅನುಂಬಂಧವಾಗಿ ನಮ್ಮಲ್ಲಿ ಬೆರೆತಿದೆ. ಪುರವಣಿಯಲ್ಲಿನ ಅಂಕಣಗಳೂ ಆಪ್ತವಾಗಿರುತ್ತದೆ. ವೈವಿಧ್ಯಮಯ ಸುದ್ದಿ ಮಾಧ್ಯಮ. ಜ್ಞಾಪಕ ಶಕ್ತಿ ಅರಿವನ್ನು ಮೂಡಿಸುವ ರಸಪ್ರಶ್ನೆ ಸ್ಪರ್ಧೆ ಉಪಯುಕ್ತ.ಬಿ.ಆರ್.ನಾಗರತ್ನಾ ಗೋಕುಲಂ
‘ಪತ್ರಿಕೆಯೊಂದಿಗೆ ಬೆರೆಯುವ ಅವಕಾಶ’ ಪತ್ರಿಕೆಯೂ ಇಂಥ ಕಾರ್ಯಕ್ರಮಗಳನ್ನೂ ಹೆಚ್ಚು ರೂಪಿಸಬೇಕು. ಓದುಗರಿಗೂ ಪತ್ರಿಕೆಯೊಂದಿಗೆ ಬೆರೆಯಲು ಹೆಚ್ಚು ಅವಕಾಶ ದೊರೆಯುತ್ತದೆ. ಸ್ಪರ್ಧೆಯಲ್ಲಿ ಭಾಗಿಯಾಗಿದ್ದು ಸಂತಸ ಮೂಡಿಸಿದೆ.ನಾಗಶ್ರೀ ಎಂ.ಎಸ್ ಹೆಬ್ಬಾಳ 3ನೇ ಹಂತ
‘ಪ್ರಜಾವಾಣಿ–ಮಿನಿ ಗ್ರಂಥಾಲಯ’ ‘ಪ್ರಜಾವಾಣಿ’ ಒಂದು ಮಿನಿ ಗ್ರಂಥಾಲಯ ಕ್ಷೇಮ ಕುಶಲ ತ್ರಂತ್ರಜ್ಞಾನ ಭೂಮಿಕಾ ಹೆಚ್ಚು ಉಪಯುಕ್ತವಾಗಿದೆ. ಪತ್ರಿಕೆ ಓದುವುದು ಒಂದು ಸಂಸ್ಕಾರ. ಸಾರ್ವಕಾಲಿಕ ಸತ್ಯಎಂ. ಗಣಪತಿ ಕಿಣಿ ಸೋಮನಾಥ ನಗರ
‘ವೈಯಕ್ತಿಕ ಅಭಿವೃದ್ಧಿಗೆ ಸಹಕರಿಸಿದ ಪತ್ರಿಕೆ’ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವಿಜ್ಞಾನ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಸಿದಂತೆ ಅನೇಕ ಲೇಖನಗಳನ್ನು ಬರೆದಿರುವೆ. ಪ್ರಕಟಿಸಿ ಗೌರವಧನ ನೀಡಿ ಬೆನ್ನು ತಟ್ಟಿದೆ ವೈಯಕ್ತಿಕ ಅಭಿವೃದ್ಧಿಗೆ ಸಹಕರಿಸಿದೆ. ಪತ್ರಿಕೆಯ ಗುಣಮಟ್ಟ ಪ್ರಶಂಸನೀಯಎಲ್.ಶಶಿಕುಮಾರ್ ವಿಧಿವಿಜ್ಞಾನ ಪ್ರಯೋಗಾಲಯದ ವೈಜ್ಞಾನಿಕ ಅಧಿಕಾರಿ
‘ಬೊಂಬೆಗಳ ಜೋಡಣೆ ಸುಲಭವಲ್ಲ’ ನವರಾತ್ರಿಯಲ್ಲಿ ಬೊಂಬೆಗಳ ಜೋಡಣೆ ಸುಲಭವಲ್ಲ. ಇದು ಸಾಕಷ್ಟು ಶ್ರಮ ಬೇಡುತ್ತದೆ. ಪತ್ರಿಕೆಯು ಸ್ಪರ್ಧೆ ಆಯೋಜನೆ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಈ ಬಾರಿ ಗ್ರಂಥಾಲಯ ಪರಿಕಲ್ಪನೆಯಲ್ಲಿ ಬೊಂಬೆ ಜೋಡಣೆ ಮಾಡಿದ್ದೆಎಂ.ಎಸ್.ಕೌಸಲ್ಯ ನಿವೇದಿತಾ ನಗರ
‘ನನಗೆ ಪ್ರಜಾವಾಣಿಯಷ್ಟೇ ಇಷ್ಟ’ ಒಬ್ಬೊಬ್ಬರಿಗೆ ಒಂದೊಂದು ಇಷ್ಟವಿರುತ್ತದೆ. ನನಗೆ ಮಾತ್ರ ಪ್ರಜಾವಾಣಿ ಓದುವುದೇ ಇಷ್ಟ. ಇಲ್ಲಿನ ಸುಡೊಕು ಅಭಿಮತ ಅಂಕಣ ಇಷ್ಟ. ಪತ್ರಿಕೆ ಇನ್ನಷ್ಟು ಹೆಚ್ಚು ಬೆಳಗಲಿ ಬಾಳಲಿಎಸ್.ಕೆ.ಮೋಹನ್‌ಕುಮಾರ್ ಸುಭಾಷ ನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.