ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯ ವೃತ್ತಿಯ ಪಾವಿತ್ಯತೆ ಉಳಿಸಿ: ವಿ.ರಂಗನಾಥ್

Published 1 ಜುಲೈ 2024, 16:17 IST
Last Updated 1 ಜುಲೈ 2024, 16:17 IST
ಅಕ್ಷರ ಗಾತ್ರ

ಮೈಸೂರು: ‘ವೃತ್ತಿಯ ಪಾವಿತ್ರ್ಯತೆ ಉಳಿಸಿ– ಬೆಳೆಸುವ ಜವಾಬ್ದಾರಿ ಯುವ ವೈದ್ಯರ ಮೇಲಿದೆ’ ಎಂದು ನಿವೃತ್ತ ತಹಶೀಲ್ದಾರ್‌ ವಿ.ರಂಗನಾಥ್ ಹೇಳಿದರು.

ಇಲ್ಲಿನ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ 
ವೈದ್ಯರಿಗೆ ‘ವೈದ್ಯೋ ನಾರಾಯಣ ಹರಿ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

‘ವೈದ್ಯ ವೃತ್ತಿ ಅತ್ಯಂತ ಪವಿತ್ರವಾದುದು’ ಎಂದರು.

ಡಾ.ಪ್ರಶಾಂತ್ ರಾಮ್, ಡಾ.ಉಷಾ ಎನ್., ಡಾ.ರಕ್ಷಿತಾ, ಡಾ.ಅವಿನಾಶ್, ಡಾ‌.ಆರ್.ಎನ್.ಸುರೇಶ್, ಡಾ.ಸ್ವಾಮಿ, ಡಾ.ಪೂರ್ಣಿಮಾ, ಡಾ.ಪ್ರಕಾಶ್ ಕೆ.ಪ್ರಭು, ಡಾ.ಎಚ್‌.ಎಲ್.ಪ್ರಸಾದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ರಶ್ಮಿ, ಅಜಯ್ ಶಾಸ್ತ್ರಿ, ಯೋಗೀಶ್, ಹರೀಶ್, ಗಣಪತಿ, ಸದಾಶಿವ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT