ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೆ ಆಹಾರ ಪದ್ಧತಿ ಹೃದಯಕ್ಕೆ ಹಿತ: ಡಾ.ವಿ.ಕೇಶವಮೂರ್ತಿ

Published : 22 ಸೆಪ್ಟೆಂಬರ್ 2024, 14:28 IST
Last Updated : 22 ಸೆಪ್ಟೆಂಬರ್ 2024, 14:28 IST
ಫಾಲೋ ಮಾಡಿ
Comments

ಸರಗೂರು: ಯುವಕರಲ್ಲಿ ಹೃದಯಘಾತ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ,  ದಿನನಿತ್ಯ ಹಳೆಯ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಡಾ.ವಿ.ಕೇಶವಮೂರ್ತಿ ತಿಳಿಸಿದರು.

ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ವರ್ತಕರ ಮಂಡಳಿ, ಲಯನ್ಸ್ ಕ್ಲಬ್, ಜೈನ್ ಮಿಲನ್, ರೋಟರಿ ಕ್ಲಬ್, ರಾಜಸ್ಥಾನ್ ಸಂಘ, ತಾಲ್ಲೂಕು ಮೆಡಿಕಲ್ ಅಸೋಸಿಯೇಷನ್  ಸಹಯೋಗದಲ್ಲಿ ನಡೆದ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತಾನಾಡಿದರು.

ಹೊಸ ಆಹಾರ ಪದ್ಧತಿ ಬೇಡ.  ನಮ್ಮ ಆಹಾರವನ್ನು ದಿನಕ್ಕೆ ಐದು ಬಾರಿ ತಿನ್ನಬೇಕು. ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಶೇ 20ರಷ್ಟು ಹೃದಯಘಾತ ತಡೆಗಟ್ಟಬಹುದು. ದಿನನಿತ್ಯ ಏಳು ಸಾವಿರ ದಿಂದ ಹತ್ತು ಸಾವಿರ ಹೆಜ್ಜೆ ನಡಿಗೆ ಇರಬೇಕು. ವ್ಯಾಯಾಮ  ನಿತ್ಯ ನಿರಂತರವಾಗಿರಬೇಕು  ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಸವಿತಾ  ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ ಮನೆಮನೆಯಲ್ಲೂ ಒಬ್ಬ ಜೀವರಕ್ಷಕ ಇರಬೇಕು.  ಹೃದಯಾಘಾತ ಆದಾಗ ಸಿಪಿಆರ್ ಕೊಟ್ಟು  ಜೀವ ರಕ್ಷಣೆಮಾಡುವಂತಹ ಒಬ್ಬ ರಕ್ಷಕ, ಹಾಸಿಗೆ ಹಿಡಿದಿರುವವರನ್ನು ಉಪಚರಿಸಲು  ಮನೆಗೊಒಬ್ಬ ಆರೋಗ್ಯ ಸೇವಕ  ಇರಬೇಕು ಎಂದರು.

ಶಿಬಿರದಲ್ಲಿ 645 ಮಂದಿ ರೋಗ ತಪಾಸಣೆ, ಚಿಕಿತ್ಸೆ ಪಡೆದು ಕೊಂಡರು. ವಿವೇಕಾನಂದ ಸ್ಮಾರಕ ಆಸ್ಪತ್ರೆಯ ನಿರ್ದೇಶಕ  ಡಾ. ರವೀಂದ್ರನಾಥ್ ಶ್ರಾಫ್ , ವರ್ತಕ ಮಂಡಳಿ ಅಧ್ಯಕ್ಷ ಎಸ್.ಎಂ. ಶ್ರೀನಿವಾಸ್ ಮಾತನಾಡಿದರು.

 ಲಯನ್ಸ್ ಅಕಾಡೆಮಿ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಬ್ರಹ್ಮದೇವಯ್ಯ, ಲಯನ್ಸ್ ಅಕಾಡೆಮಿ ಶಾಲೆಯ ಕಾರ್ಯದರ್ಶಿ ಎಸ್.ಎಸ್.ಪ್ರಭುಸ್ವಾಮಿ, ವರ್ತಕರ ಮಂಡಳಿ ಅಧ್ಯಕ್ಷ ಎಸ್.ಎಂ. ಶ್ರೀನಿವಾಸ್, ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಎಸ್.ಪ್ರತಾಪ್, ರಾಜಸ್ಥಾನ್ ಸಂಘ ಅಧ್ಯಕ್ಷ ಡಗಲರಾಮ್, ರೋಟರಿ ಕ್ಲಬ್ ಅಧ್ಯಕ್ಷ ಎಸ್.ಎನ್.ನಿರಂಜನ್, ತಾಲ್ಲೂಕು ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಶಿವಣ್ಣ, ಮೂತ್ರಪಿಂಡ ತಜ್ಞರು, ಕ್ಲಿಯರ್‌ಮೆಡಿರೇಟಿಯಂಟ್ ಆಸ್ಪತ್ರೆ ಡಾ.ಕಿರಣ್ ಕುಮಾರ್, ಉಪನಿರ್ದೇಶಕ ಡಾ.ಎಚ್.ಕೆ. ಶಂಕರ್, ವಿವೇಕಾನಂದ ಆಸ್ಪತ್ರೆ ವ್ಯವಸ್ಥಾಪಕಿ ಬಿ.ಜಿ. ಸಂಧ್ಯಾ , ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT