ಹಿರೀಸಾವೆ: ‘ಚನ್ನರಾಯಪಟ್ಟಣ ತಾಲ್ಲೂಕಿನ ಸೆಸ್ಕ್ ವಿಭಾಗದಲ್ಲಿರುವ ಲೈನ್ ಮ್ಯಾನ್ಗಳ (ಪವರ್ ಮ್ಯಾನ್) ಉತ್ತಮ ಕರ್ತವ್ಯ ನಿರ್ವಹಣೆಯಿಂದ, ವಿದ್ಯುತ್ ಸಮಸ್ಯೆ ಬಗ್ಗೆ ದೂರುಗಳು ಕಡಿಮೆಯಾಗಿವೆ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಹಿರೀಸಾವೆಯಲ್ಲಿ ಸೆಸ್ಕ್ ಆಡಳಿತ ಕಚೇರಿ ನಿರ್ಮಾಣಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿ, ‘ವಿದ್ಯುತ್ ಕಂಬಗಳ ಸಮಸ್ಯೆ ಇದ್ದರೆ, ಅದನ್ನು ಗುರುತಿಸಿ, ಅಧಿಕಾರಿಗಳಿಗೆ ತಿಳಿಸಿ ಕಂಬಗಳನ್ನು ಹಾಕಬೇಕು. ಕಳೆದ ಸಾಲಿನಲ್ಲಿ 50 ಹೊಸದಾಗಿ ಸಂಪರ್ಕ ಮಾರ್ಗಗಳನ್ನು (ಲಿಂಕ್ ಲೈನ್) ಮಾಡಲಾಗಿದೆ. ಕಲ್ಕರೆ ಸಮೀಪ 220 ಕೆವಿ ವಿದ್ಯುತ್ ಸ್ವೀಕರಿಸುವ ಕೇಂದ್ರ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಎಂಬಿ ಕಾವಲು ಬಳಿಯ ವಿದ್ಯುತ್ ವಿತರಣಾ ಕೇಂದ್ರ ಕಾಮಗಾರಿ ಪ್ರಗತಿಯಲ್ಲಿದ್ದು, ಮೂರು ತಿಂಗಳಲ್ಲಿ ಪೂರ್ಣವಾಗಲಿದೆ, ಇದರಿಂದ ಬಾಳಗಂಚಿ ಪಂಚಾಯಿತಿ ವ್ಯಾಪ್ತಿಯ ಜನರಿಗೆ, ರೈತರಿಗೆ ಅನುಕೂಲವಾಗಲಿದೆ’ ಎಂದರು.

‘ವಿದ್ಯುತ್ ಪರಿವರ್ತಕಗಳು (ಟಿಸಿ) ಸುಟ್ಟಹೋದರೆ, 24 ಗಂಟೆಯೊಳಗೆ ಬದಲಾಯಿಸುವಂತೆ ಸೆಸ್ಕ್ ನ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ವಿಷಯದಲ್ಲಿ ಸಮಸ್ಯೆಯಾದರೆ, ರೈತರು ದೂರವಾಣಿ ಮೂಲಕ ತಿಳಿಸಿದರೆ ಪರಿಹರಿಸಲಾಗುವುದು. ಹಿರೀಸಾವೆಗೆ ಸೆಸ್ಕ್ ಎಇಇ ಕಚೇರಿ ಮತ್ತು ಜುಟ್ಟನಹಳ್ಳಿ, ಮಟ್ಟನವಿಲೆಗೆ ಶಾಖಾ ಕಚೇರಿ ತೆರೆಯುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ’ ಎಂದು ಹೇಳಿದರು.

ಶಾಖಾಧಿಕಾರಿ ವೆಂಕಟೇಶ್, ಸೆಸ್ಕ್ ಸಿವಿಲ್ ಎಂಜಿನಿಯರ್ ಚೆಲುವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣ, ಪಿಎಸಿಸಿಬಿ ಅಧ್ಯಕ್ಷ ಮಹೇಶ್, ನಿರ್ದೇಶಕರಾದ ಬೋರಣ್ಣ, ಬೋರೇಗೌಡ, ಮುಖಂಡರಾದ ಹೇಮಂತ್, ವೆಂಕಟೇಶ್, ಪ್ರಭಾಕರ್, ಮಂಜುನಾಥ್, ದಿನೇಶ್, ರೋಡ್ ಮಂಜುನಾಥ್, ಸುನಿಲ್ ಮತ್ತು ಸೆಸ್ಕ್ ಸಿಬ್ಬಂದಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.