ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿ ಬೆಟ್ಟ: ಪ್ಲಾಸ್ಟಿಕ್‌ ಬಳಕೆ, ದಂಡಾಸ್ತ್ರ ಇಂದಿನಿಂದ

Published 1 ಸೆಪ್ಟೆಂಬರ್ 2023, 5:30 IST
Last Updated 1 ಸೆಪ್ಟೆಂಬರ್ 2023, 5:30 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶದ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯು ಸೆ.1ರಿಂದ ದಂಡಾಸ್ತ್ರವನ್ನು ಪ್ರಯೋಗಿಸಲಿದ್ದು, ‘ಆಗಬೇಡಿ ನೀವು ಮಾಲಿನ್ಯಾಸುರ’ ಭಿತ್ತಿಪತ್ರಗಳನ್ನು ಬೆಟ್ಟದಲ್ಲಿ ಅಂಟಿಸಿ ಜಾಗೃತಿ ಮೂಡಿಸಿದೆ.

ಪ್ಲಾಸ್ಟಿಕ್‌ ತ್ಯಾಜ್ಯ ಬಿಸಾಡುವುದು, ಮದ್ಯಪಾನ, ವನ್ಯಜೀವಿಗಳಿಗೆ ತಿಂಡಿ– ತಿನಿಸು ನೀಡುವುದು ಹಾಗೂ ತೊಂದರೆ ನೀಡುವುದು ಸೇರಿದಂತೆ ಅರಣ್ಯದಲ್ಲಿ ನಿಯಮಬಾಹಿರ ಚಟುವಟಿಕೆಗಳನ್ನು ನಡೆಸಿದರೆ ₹500ರಿಂದ ₹10 ಸಾವಿರದವರೆಗೆ ದಂಡ ವಿಧಿಸಲು ‘ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗ’ದ ಡಿಸಿಎಫ್‌ ಡಾ.ಬಸವರಾಜು ಆದೇಶ ಹೊರಡಿಸಿದ್ದಾರೆ.

‘ನಗರ ಹಸಿರೀಕರಣ ವಲಯ ವ್ಯಾಪ್ತಿಯಲ್ಲಿ ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶವು ಬರಲಿದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಆ.7ರಂದು ರಾಜ್ಯ ಅರಣ್ಯ ಕಾಯ್ದೆ ಸೆಕ್ಷನ್ 76, 99 (1) ಅಡಿ ಹಾಗೂ ಅರಣ್ಯ ರಕ್ಷಣೆ ಹಾಗೂ ಅರಣ್ಯ ನಿಯಮಾವಳಿ 1969ರ ಅಡಿ ಅರಣ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರವು ನೀಡಿರುವ ಅಧಿಕಾರದ ಅಡಿಯಲ್ಲಿ ಜೀವವೈವಿಧ್ಯವನ್ನು ರಕ್ಷಿಸಲು ಆದೇಶ ಹೊರಡಿಸಲಾಗಿದೆ’ ಎಂದು ತಿಳಿಸಿದರು.

‘ಚಾಮುಂಡಿ ಬೆಟ್ಟದ ಅಂಗಡಿ, ಮಳಿಗೆಗಳ ವ್ಯಾಪಾರಸ್ಥರಿಗೆ ಇಲಾಖೆ ಸಿಬ್ಬಂದಿ ಭಿತ್ತಿಪತ್ರ ಹಾಗೂ ಕರಪತ್ರಗಳನ್ನು ನೀಡಿ ಅರಿವು ಮೂಡಿಸಿದ್ದಾರೆ. ಬೆಟ್ಟದ ರಸ್ತೆಗಳಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಕಳೆದ ಎರಡು ದಿನದಿಂದ ಕಾನೂನುಗಳ ಉಲ್ಲಂಘನೆಗೆ ಶೂನ್ಯ ದರ ರಶೀದಿ ವಿತರಿಸಲಾಗಿದೆ’ ಎಂದು ಹೇಳಿದರು.

‘ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಚಾಮುಂಡಿ ಬೆಟ್ಟದ ನಿವಾಸಿಗಳನ್ನು ಹೊರತುಪಡಿಸಿ ಇತರರ ಪ್ರವೇಶ ತಡೆಯಲು ಮುಖ್ಯದ್ವಾರ ಹೊರತು ಪಡಿಸಿ ಎಲ್ಲ ರಸ್ತೆಗಳ ದ್ವಾರಗಳಿಗೂ ಬೀಗ ಹಾಕಲಾಗುವುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT