ಮೈಸೂರು: ಚಿನ್ನದ ಮೇಲೆ ಸಾಲ ನೀಡಲು ಗಿರವಿ ಇಟ್ಟುಕೊಳ್ಳುವ ಚಿನ್ನಾಭರಣದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಬ್ಯಾಂಕ್ ಸಿಬ್ಬಂದಿ ವಂಚಿಸಿದ್ದಾರೆ ಎಂದು ಆರೋಪಿಸಿ ಹಿನಕಲ್ನ ಕೆನರಾ ಬ್ಯಾಂಕ್ಗೆ ಗಿರವಿದಾರರು ಮುತ್ತಿಗೆ ಹಾಕಿದರು.

‘ಗ್ರಾಹಕರಿಂದ ಚಿನ್ನ ಗಿರವಿ ಇಟ್ಟುಕೊಂಡು ಸಾಲ ನೀಡುವಾಗ ಇದ್ದ ತೂಕಕ್ಕೂ, ಅದನ್ನು ಬಿಡಿಸಿಕೊಳ್ಳವಾಗ ಇರುವ ತೂಕಕ್ಕೂ ವ್ಯತ್ಯಾಸವಿದೆ. ಸಾಲದ ರಸೀದಿಯಲ್ಲಿ 1 ರಿಂದ 2 ಗ್ರಾಂ ಕಡಿಮೆ ತೂಕ ಬರೆಯುತ್ತಾರೆ. ಬಿಡಿಸಿಕೊಳ್ಳುವಾಗ ರಸೀದಿಯಲ್ಲಿ ಬರೆದಷ್ಟು ಚಿನ್ನ ವಾಪಸ್ ಕೊಟ್ಟು, ಗಿರವಿ ಇಡುವಾಗ ಇದ್ದಂತಹ ತೂಕವನ್ನು ಮರೆಮಾಚಿ ವಂಚಿಸಲಾಗುತ್ತಿದೆ’ ಎಂದು ದೂರಿದರು.

ಸ್ಥಳಕ್ಕಾಗಮಿಸಿದ ವಿಜಯನಗರ ಪೊಲೀಸ್ ಠಾಣೆ ಸಿಬ್ಬಂದಿ ಗಿರವಿದಾರರನ್ನು ನಿಯಂತ್ರಿಸಿ, ಬ್ಯಾಂಕ್ನಲ್ಲಿ ಗಿರವಿದಾರರಿಂದ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.

Cut-off box - ‘ಸಿಸಿಟಿವಿ ಪರಿಶೀಲಿಸಿ ಕ್ರಮ’ ‘ಚಿನ್ನದ ಮೇಲೆ ಸಾಲ ನೀಡಲು ಅಡಮಾನ ಇಟ್ಟುಕೊಳ್ಳುವ ಚಿನ್ನದಲ್ಲಿ ಮೋಸವಾಗಿದೆ ಎಂದು ಗ್ರಾಹಕರು ದೂರುತ್ತಿದ್ದಾರೆ. ಈಗಾಗಲೇ ಸಿಬ್ಬಂದಿ ವಿಚಾರಿಸಿದ್ದು ಸೂಕ್ತ ತನಿಖೆ ನಡೆಸಲಾಗುವುದು. ಬ್ಯಾಂಕ್ನಿಂದ ಗ್ರಾಹಕರಿಗೆ ನಷ್ಟವಾಗಿದೆಯೇ ಇಲ್ಲವೇ ಎಂಬುದನ್ನು ತನಿಖೆ ನಡೆಸಿ ಸ್ಪಷ್ಟಪಡಿಸಲಾಗುವುದು. ಎಲ್ಲವೂ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು ಪರಿಶೀಲನೆ ನಡೆಸುತ್ತೇವೆ’ ಎಂದು ಬ್ಯಾಂಕ್ ಎಜಿಎಂ ರಾಜಶೇಖರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.