ತಿ.ನರಸೀಪುರ: ಜಿಲ್ಲೆಯ ದೊಡ್ಡ ಜಾತ್ರೆ ಎಂಬ ಖ್ಯಾತಿಯ ಐತಿಹಾಸಿಕ ಮುಡುಕುತೊರೆ ಜಾತ್ರಾ ಮಹೋತ್ಸವವು ಸಾಂಪ್ರದಾಯಿಕ ಹಾಗೂ ಧಾರ್ಮಿಕ ಪೂಜಾ ಕಾರ್ಯಕ್ರಮ ಅಂಕುರಾರ್ಪಣೆಯೊಂದಿಗೆ ಪ್ರಾರಂಭವಾಗಿದ್ದು, ದೇವಾಲಯದ ಕಾಮಗಾರಿ ಪ್ರಗತಿಯಲ್ಲಿರುವುದರಿಂದ
ಮೆರವಣಿಗೆ ಉತ್ಸವ, ರಥೋತ್ಸವಗಳಿಲ್ಲದೇ ಸಾಂಪ್ರಾದಾಯಿಕ ಜಾತ್ರೆಯ ಪೂಜಾ ಕಾರ್ಯಗಳು ಮಾತ್ರ ದೇವಾಲಯದ ವ್ಯಾಪ್ತಿಯಲ್ಲಿ ನಡೆಯುತ್ತಿವೆ.

ಶ್ರೀ ಭ್ರಮರಾಂಭ ಸಮೇತ ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಕಳೆದ ವರ್ಷದಂತೆಯೇ ಈ ಭಾರಿಯು ದನಗಳ ಜಾತ್ರೆ ಮತ್ತು ಭಕ್ತರು ನಡೆಸುವ ಅರವಟ್ಟಿಗೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತರಿಗೆ ದರ್ಶನಕ್ಕೆ ಮತ್ತು ಸೇವೆಗಳಿಗೆ ಈ ಭಾರಿಯು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ದನಗಳ ಪರಿಷೆ ವಿಶೇಷ ವಾಗಿದ್ದು ಈಗಾಗಲೇ ಹಳೇ ಮೈಸೂರು ಪ್ರಾಂತ್ಯದ ಚಾಮರಾಜನಗರ, ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ ಭಾಗಗಳಿಂದ ಎತ್ತುಗಳು ಜಾತ್ರೆಗೆ ಆಗಮಿಸಿವೆ. ಹಳ್ಳಿಕಾರ್ ತಳಿ ಸೇರಿದಂತೆ ₹10 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಎತ್ತುಗಳು ಬಂದಿದ್ದು, ಇದರೊಡನೆ ಬಂಡೂರು ಕುರಿಗಳು ಇದ್ದು, ಖರೀದಿ ಪ್ರಕ್ರಿಯೆ ಕೂಡ ಆರಂಭವಾಗಿದೆ. ಎತ್ತುಗಳನ್ನು ನೋಡಲು ಜನರು ವಿವಿಧೆಡೆ ಗಳಿಂದ ಆಗಮಿಸುತ್ತಿದ್ದಾರೆ.

ತಾಲ್ಲೂಕು ಹಾಗೂ ಜಿಲ್ಲಾಡಳಿತ ದನಗಳ ಪರಿಷೆಗೆ ಪೂರಕವಾಗಿ ಕುಡಿಯುವ ನೀರು, ತಾತ್ಕಲಿಕ ಆರೋಗ್ಯ ಕೇಂದ್ರ, ವಿದ್ಯುತ್ ದೀಪ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಿದ್ದು, ಜಾತ್ರಾ ಮಹೋತ್ಸವದ ಉತ್ಸವಗಳ ರದ್ದಿನ ನಡುವೆಯೂ ದನಗಳ ಜಾತ್ರೆ ಮಾತ್ರ ವಿಶೇಷ ಆಕರ್ಷಣೆಯಾಗಿದೆ.

ಮುಡುಕುತೊರೆ ಜಾತ್ರೆಯೆಂದರೆ ದನಗಳ ಪರಿಷೆ ಬಹಳ ವಿಶೇಷ. ಸುಮಾರು ₹9 ಲಕ್ಷ ಮೌಲ್ಯದ ಎರಡು ಜೊತೆ ಹಳ್ಳಿಕಾರ್ ಎತ್ತುಗಳನ್ನು ಇಲ್ಲಿ ತಂದಿದ್ದೇವೆ. ಸಾಕಷ್ಟು ಹಳ್ಳಿಕಾರ್ ತಳಿಗಳಿವೆ. ಈ ಬಾರಿ ವ್ಯಾಪಾರ ನಿರೀಕ್ಷಿತ ಮಟ್ಟದಲ್ಲಿ ಕಾಣುತ್ತಿಲ್ಲ. ನಮಗೂ ಇಲ್ಲಿ ಸಾಕಷ್ಟು ಖರ್ಚು ಬರುತ್ತದೆ ಎಂದು ಮಂಡ್ಯ ನಗರದಿಂದ ಬಂದಿರುವ ಹಳ್ಳಿಕಾರ್ ಎತ್ತುಗಳ ಮಾಲೀಕ ಕಿರಣ್ ತಿಳಿಸಿದರು. ಜಾತ್ರೆಯಲ್ಲಿ ರಾಸುಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ಆದರೂ ರೈತರನ್ನು ಪ್ರೋತ್ಸಾಹಿಸುವ ಮತ್ತಷ್ಟು ಕಾರ್ಯಕ್ರಮಗಳು ನಡೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ದೇವಾಲಯದ ವತಿಯಿಂದ ದನಗಳ ಜಾತ್ರೆಗೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಉತ್ತಮ ರಾಸುಗಳನ್ನು ಗುರುತಿಸಿ, ಬಹುಮಾನ ವಿತರಣೆ ಕೂಡ ಮಾಡಲಾಗುತ್ತದೆ. ಸಂಸದರಾದ ಸುನೀಲ್ ಬೋಸ್ ಅವರ ದಿನಾಂಕವನ್ನು ಪಡೆದು ಬಹುಮಾನ ವಿತರಿಸಲಾಗುವುದು. ಇದಲ್ಲದೇ ಒಂದು ರಾಸನ್ನು ಚಾಂಪಿಯನ್ ಎಂದು ಗುರುತಿಸಿ ಅದಕ್ಕೆ ಎಪಿಎಂಸಿಯಿಂದ ಬಹುಮಾನ ನೀಡಲಾಗುತ್ತದೆ ಎಂದು ಸಮೂಹ ದೇವಾಲಯಗಳ ವ್ಯವಸ್ಥಾಪನ ಸಮಿತಿಯ ಸದಸ್ಯ ಕೂರಬಾರಳನುಂಡಿ ಶಾಂತರಾಜು ತಿಳಿಸಿದರು

ಭಕ್ತರ ಹಾಗೂ ಸ್ಥಳೀಯ ನೆರೆ ಹೊರೆ ಗ್ರಾಮಗಳ ಜನರಿಗೆ ಮನರಂಜನೆ ಒದಗಿಸಲು ಜ.22 ರಿಂದ 31ರವರೆಗೆ ವಿವಿಧ ಕಲಾ ತಂಡಗಳಿಂದ ಪ್ರತಿದಿನ ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಗದಿ ಪಡಿಸಿದ್ದು, ಗುರುವಾರದಿಂದ ಕಾರ್ಯಕ್ರಮಗಳು ಆರಂಭವಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಸದಸ್ಯ ಆರ್ . ಮಾದೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.