ಹೊಳೆನರಸೀಪುರ: ತುರ್ತು ಸಂದರ್ಭದಲ್ಲಿ ಮತ್ತೊಬ್ಬರ ರಕ್ತವನ್ನೇ ನೀಡಬೇಕು. ರಕ್ತಕ್ಕೆ ಬದಲು ಔಷಧಿ ನೀಡಲು ಸಾಧ್ಯವೇ ಇಲ್ಲದಿರುವ ಕಾರಣ ಜನರು ಹೆಚ್ಚೆಚ್ಚು ರಕ್ತದಾನ ಮಾಡಬೇಕು. ರಕ್ತದಾನ ಮಾಡಿ ಜನರ ಪ್ರಾಣ ಉಳಿಸಿ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನಾಗೇಂದ್ರ ವಿನಂತಿಸಿದರು.

ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ಹಾಸನ ಹಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ನಿಯಮಿತವಾಗಿ ರಕ್ತದಾನ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ರಕ್ತದಲ್ಲಿನ ಬಿಳಿ ಮತ್ತು ಕೆಂಪು ರಕ್ತ ಕಣಗಳ ಸಂಖ್ಯೆಯ ಸಮತೋಲನ ಚೆನ್ನಾಗಿರುತ್ತದೆ. ನಮ್ಮ ಹೆಮ್ಮೆಯ ಹಿಮ್ಸ್ ಆಸ್ಪತ್ರೆಗೆ ರಕ್ತದಾನ ಮಾಡಿದರೆ ಅದು ನಮ್ಮ ಜಿಲ್ಲೆಯ ಜನರಿಗೇ ಉಪಯೋಗವಾಗುತ್ತದೆ. ಅನೇಕರ ಪ್ರಾಣ ಉಳಿಸಿದ ಪುಣ್ಯವೂ ನಿಮಗೆ ಲಭ್ಯ ಆಗುತ್ತದೆ ಎಂದರು.

ಹಾಸನ ಹಿಮ್ಸ್ ರಕ್ತನಿಧಿ ಕೇಂದ್ರದ ಡಾ. ನಾಗಲಕ್ಷ್ಮೀ ಮಾತನಾಡಿ , ‘ಅಗತ್ಯ ಇರುವಷ್ಟು ರಕ್ತ ಸಂಗ್ರಹ ಆಗುತ್ತಿಲ್ಲ. ನಾವು ಎಲ್ಲ ಕಡೆ ರಕ್ತದಾನ ಶಿಬಿರ ಆಯೋಜಿಸಿ ನಿಮ್ಮವರಿಗಾಗಿ ನಮ್ಮ ಬ್ಲಡ್ ಬ್ಯಾಂಕಿನಲ್ಲಿ ರಕ್ತ ಸಂಗ್ರಹಿಸಿ ಇಡುತ್ತಿದ್ದೇವೆ. ರಕ್ತದಾನ ಮಾಡಿ ಎಂದರು. ಡಾ. ರೇಖಾ ಮಾತನಾಡಿ, ಜೂನ್ 14 ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಶಿಬಿರ ಆಯೋಜಿಸಲಾಗಿದೆ. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಆಸ್ಪತ್ರೆಯ ಸಿಬ್ಬಂದಿ ರಕ್ತದಾನ ಮಾಡುತ್ತಿದ್ದಾರೆ. ಸಾರ್ವಜನಿಕರು, ಯುವಕ ಯುವತಿಯರು ರಕ್ತದಾನ ಮಾಡಿ ಪ್ರಾಣ ಉಳಿಸಿ ಎಂದರು. ಡಾ. ದಿನೇಶ್, ಡಾ ಅಶ್ವತಿ, ಶುಶ್ರೂಶಕ ಅಧೀಕ್ಷಕಿ ಮೀನಾಕ್ಷಿ, ಆಸ್ಪತ್ರೆಯ ಭಾನುಶ್ರೀ, ಜ್ಯೋತಿ, ಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.