ಮೈಸೂರು: ಜಿಲ್ಲಾ ತೋಟಗಾರಿಕಾ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘಕ್ಕೆ ಬುಧವಾರ ಚುನಾವಣೆ ನಡೆದಿದ್ದು, 14 ಮಂದಿ ಪದಾಧಿಕಾರಿಗಳಾಗಿ ಆಯ್ಕೆಯಾದರು.

ಕರ್ಜನ್ ಪಾರ್ಕ್ನಲ್ಲಿರುವ ಕಚೇರಿಯಲ್ಲಿ ಬೆಳಿಗ್ಗೆ ಮತದಾನ ಪ್ರಕ್ರಿಯೆ ನಡೆಯಿತು. ಮಧ್ಯಾಹ್ನದ ಬಳಿಕ ಮತ ಎಣಿಕೆ ಕಾರ್ಯವು ಆರಂಭಗೊಂಡಿತು. ಒಟ್ಟು 14 ಸ್ಥಾನಗಳಿದ್ದು, ಇದರಲ್ಲಿ ಹುಣಸೂರು ತಾಲ್ಲೂಕಿನಿಂದ (ಸಾಮಾನ್ಯ) ಸೂರ್ಯಕುಮಾರ್ ಹಾಗೂ ಬಿ ತರಗತಿ ಸಹಕಾರ ಸಂಘಗಳ ಕ್ಷೇತ್ರದಿಂದ ಎಚ್.ಎಸ್. ಚಂದ್ರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 12 ಸ್ಥಾನಗಳಿಗೆ ಮತದಾನ ನಡೆಯಿತು.

ಸಾಮಾನ್ಯ ಕ್ಷೇತ್ರ ವಿಭಾಗದಲ್ಲಿ ಮೈಸೂರು ತಾಲ್ಲೂಕಿನಿಂದ ಜೆ. ಮಹದೇವ (596 ಮತ), ನಂಜನಗೂಡು ತಾಲ್ಲೂಕಿನಿಂದ ಬಿ.ಎನ್. ಪ್ರಭುಸ್ವಾಮಿ (621 ಮತ), ತಿ. ನರಸೀಪುರದಿಂದ ವೈ.ಜಿ. ಮಹೇಂದ್ರ (656 ಮತ), ಪಿರಿಯಾಪಟ್ಟಣದಿಂದ ಎಸ್.ಕೆ. ಶಿವಣ್ಣ (576), ಕೆ.ಆರ್. ನಗರದಿಂದ ಎಂ.ವಿ. ಸಂಜಯ್ (847), ಎಚ್.ಡಿ. ಕೋಟೆ ತಾಲ್ಲೂಕಿನಿಂದ ಬಿ.ಪಿ. ಬೋರೇಗೌಡ (640) ಚುನಾಯಿತರಾದರು.

ಹಿಂದುಳಿದ ವರ್ಗ ಪ್ರವರ್ಗ ಎ ಕ್ಷೇತ್ರದಿಂದ ಟಿ. ರಾಮೇಗೌಡ (574), ರಘು (774), ಮಹಿಳಾ ಮೀಸಲು ಕ್ಷೇತ್ರದಿಂದ ಎಸ್.ಜಿ. ನಳಿನಿ (538), ಎಸ್. ನೇತ್ರಾವತಿ ( 512) ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಡಿ. ಪದ್ಮನಾಭ (511), ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಆರ್. ಸರ್ವೇಶ (597) ಆಯ್ಕೆಯಾದರು.

ಒಟ್ಟು 40 ಅಭ್ಯರ್ಥಿಗಳು ಕಣದಲ್ಲಿದ್ದರು. 1608 ಸದಸ್ಯರ ಪೈಕಿ 1439 ಮಂದಿ ಮತ ಚಲಾಯಿಸಿದರು. ಚುನಾವಣಾ ಅಧಿಕಾರಿಯಾಗಿ ಜೆ.ಎಂ. ಜಯಲಕ್ಷ್ಮಿ ಕಾರ್ಯನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.