ಭಾನುವಾರ, 13 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
24/09/2023 - 30/09/2023
ವಾರ ಭವಿಷ್ಯ | ಅಕ್ಟೋಬರ್‌ 1ರಿಂದ 7ರವರೆಗೆ: ಈ ರಾಶಿಯವರು ಹೊಸ ವಾಹನ ಖರೀದಿಸುವರು
Published 30 ಸೆಪ್ಟೆಂಬರ್ 2023, 23:32 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಸಂಪನ್ಮೂಲಗಳಿಗಾಗಿ ಸಾಕಷ್ಟು ಹುಡುಕಾಟ ನಡೆಸುವಿರಿ. ಇತರರ ಕೆಲಸಗಳ ಯಶಸ್ಸಿಗಾಗಿ ಸಲಹೆ ನೀಡುವ ಅವಕಾಶ ದೊರೆಯುತ್ತದೆ. ಈ ಹಿಂದೆ ನಿಲ್ಲಿಸಿದ್ದ ವಿದ್ಯಾಭ್ಯಾಸಗಳನ್ನು ಪುನಹ ಆರಂಭಿಸಲು ಸೂಕ್ತ ಆಲೋಚನೆ ಮಾಡುವಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಮಟ್ಟಕ್ಕೆ ಇದ್ದೇ ಇರುತ್ತದೆ. ಸದ್ಯದಲ್ಲೇ ಕೌಟುಂಬಿಕ ಸಮಸ್ಯೆಗಳು ಎದುರಾದರೂ ನಂತರ ತಿಳಿಯಾಗುತ್ತದೆ.ಹೊಸವ್ಯವಹಾರದಲ್ಲಿಭಾಗವಹಿಸಲು ಅವಕಾಶವನ್ನು ಪಡೆಯುವ ಯತ್ನದಲ್ಲಿ ಯಶಸ್ವಿ ಯಾಗುವಿರಿ. ನಿಮ್ಮ ಹಿರಿಯರಿಗೆ ಆರೋಗ್ಯ ಸಮಸ್ಯೆ ಎದುರಾಗಬಹುದು.ಕಲ್ಲುಗಣಿಗಾರಿಕೆ ಮಾಡುವವರಿಗೆ ಬೇಡಿಕೆ ಹೆಚ್ಚಾಗಿ ವ್ಯವಹಾರಗಳು ಹೆಚ್ಚಾಗುತ್ತವೆ. ಸರ್ಕಾರದಿಂದ ಬರಬೇಕಾಗಿದ್ದ ಸಹಾಯಧನಗಳು ನಿಧಾನವಾದರೂ ಬರುತ್ತವೆ. ಆರೋಗ್ಯದ ಬಗ್ಗೆ ಎಚ್ಚರ ಇರಲಿ.
ವೃಷಭ
ವಿದೇಶದಲ್ಲಿ ಸಂಸ್ಕೃತಿಯನ್ನು ಪ್ರಚಾರ ಮಾಡು ವವರಿಗೆ ಮಾನ್ಯತೆ ಮತ್ತು ಗೌರವ ದೊರೆಯುತ್ತದೆ. ಹಣಕಾಸಿನ ಸ್ಥಿತಿಯುಸಾಕಷ್ಟುಉತ್ತಮಗೊಳ್ಳುವುದು. ತಾಯಿಯ ಹಿತನುಡಿಗಳು ನಿಮಗೆ ಒಳಿತನ್ನು ಮಾಡು ತ್ತವೆ. ವಿನಾಕಾರಣ ವಾದ ವಿವಾದಗಳನ್ನು ಬೇರೆಯ ವರ ಜೊತೆ ಮಾಡದಿರಿ. ನಿಮ್ಮ ವ್ಯವಹಾರದಲ್ಲಿ ಸಾಮಾನ್ಯ ಅಭಿವೃದ್ಧಿಯನ್ನು ಖಂಡಿತ ಕಾಣಬಹುದು. ಮನೆಬಳಕೆಯ ಹೊಸ ವಸ್ತುಗಳನ್ನು ಖರೀದಿ ಮಾಡು ವಿರಿ. ವಿಪರೀತ ಕೆಲಸದ ನಡುವೆ ದೇಹಾಲಸ್ಯ ಆಗ ಬಹುದು,ಈ ಸಂದರ್ಭದಲ್ಲಿಮಿತ್ರರಸಹಾಯದೊರೆತು ಕೆಲಸ ಪೂರ್ಣವಾಗುವುದು. ನ್ಯಾಯಾಲಯದಲ್ಲಿನ ವ್ಯವಹಾರಗಳಿಗೆ ಅಡತಡೆ ಬರುವ ಸಾಧ್ಯತೆಗಳಿವೆ. ನೂತನ ವಾಹನ ಖರೀದಿಯ ಅವಕಾಶಗಳಿದ್ದರೂ ಹಣಕಾಸಿನ ಸ್ಥಿತಿಯನ್ನು ಅರಿತು ನಡೆಯುವುದು ಒಳ್ಳೆಯದು.
ಮಿಥುನ
ವೈಯಕ್ತಿಕ ವ್ಯವಹಾರಗಳ ಹೋರಾಟದಲ್ಲಿ ಪ್ರಗತಿಯನ್ನು ಕಾಣುವಿರಿ. ಮನೆಯವರ ಆರೋಗ್ಯದ ಬಗ್ಗೆ ಎಚ್ಚರ ವಹಿಸಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತಿ ಅಗತ್ಯ. ಕೆಲವರಿಗೆ ಅಧ್ಯಯನದ ನಿಮಿತ್ತ ದೂರ ಪ್ರಯಾಣ ಮಾಡಬೇಕಾದ ಸಂದರ್ಭವಿರುತ್ತದೆ. ಆರ್ಥಿಕ ಸಬಲತೆಗಾಗಿ ಹೊಸ ಹೊಸ ದಾರಿಗಳನ್ನು ಹುಡುಕುವಿರಿ.ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸವೊಂದು ಈಗ ಕೈಗೂಡುವುದು.ಹಣದ ಒಳ ಹರಿವು ಸಾಮಾನ್ಯವಾಗಿರುತ್ತದೆ.ಉದ್ಯೋಗಕ್ಷೇತ್ರದಲ್ಲಿ ಉತ್ತಮವಾರ್ತೆಯನ್ನು ಕೇಳುವಿರಿ.ಅತಿಯಾದ ಜಿಪುಣ ತನಮಾಡಿ ಕುಟುಂಬದವರ ಎದುರು ಮುಜುಗರಕ್ಕೆ ಒಳಗಾಗುವಿರಿ. ಕೆಲಸಗಳ ಒತ್ತಡದ ನಡುವೆಯೂ ಇನ್ನೊಬ್ಬರಿಗೆ ಸಹಾಯ ಮಾಡಿ ಸಂತೋಷ ಪಡುವಿರಿ. ಸ್ವಂತ ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿರಲಿ.
ಕರ್ಕಾಟಕ
ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು. ಇತರರ ಅಭಿವೃದ್ಧಿಯ ಬಗ್ಗೆ ಚಿಂತೆ ಮಾಡದೆ ನಿಮ್ಮ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿರಿ. ಕ್ರೀಡಾ ಪಟುಗಳಿಗೆ ಅವರ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮಅವಕಾಶ ದೊರೆಯಬಹುದು. ಹಣದ ಒಳಹರಿವು ಉತ್ತಮವಾಗಿದ್ದು ನಿಮ್ಮ ಅಗತ್ಯ ವನ್ನು ಪೂರೈಸುವಷ್ಟು ಇರುತ್ತದೆ. ವಿವಾದಿತ ವಿಷಯ ವೊಂದನ್ನು ಮಾತುಕತೆಯ ಮೂಲಕ ಬಗೆ ಹರಿಸಿ ಕೊಳ್ಳಲು ಅವಕಾಶ ದೊರೆಯುತ್ತದೆ.ಕೋರ್ಟುಹಾಗೂ ಕಛೇರೀ ವ್ಯವಹಾರಗಳಲ್ಲಿ ಮುನ್ನಡೆಯನ್ನು ಖಂಡಿತ ಕಾಣಬಹುದು. ಹತ್ತಿ ಬಟ್ಟೆಯನ್ನು ತಯಾರು ಮಾಡಿ ಮಾರುವವರಿಗೆ ವ್ಯವಹಾರದ ವಿಸ್ತರಣೆ ಇರುತ್ತದೆ. ಸಂಗೀತಗಾರರಿಗೆ ಹೊಸ ವೇದಿಕೆಗಳು ದೊರಕುವುದರ ಜೊತೆಗೆ ಹೆಚ್ಚಿನ ಸಂಪಾದನೆ ಆಗುತ್ತದೆ.
ಸಿಂಹ
ನಿಮ್ಮ ಬುದ್ಧಿವಂತಿಕೆಯಿಂದ ಉದ್ಯೋಗದಲ್ಲಿ ಸ್ಥಾನ ಬದಲಾವಣೆಯನ್ನು ಪಡೆಯುವಿರಿ ಹಣಕಾಸಿನ ಅನುಕೂಲ ನಿರೀಕ್ಷೆಯಂತೆ ಹೆಚ್ಚಾಗುತ್ತದೆ. ನಿಮ್ಮ ಸಮಾಜದ ಪ್ರಮುಖರೊಂದಿಗೆ ಬಾಂಧವ್ಯವನ್ನು ವೃದ್ಧಿ ಸಿಕೊಳ್ಳಲು ಪ್ರಯತ್ನಪಡುವಿರಿ.ವಿವಾಹಆಕಾಂಕ್ಷಿಗಳಿಗೆ ಸಂಬಂಧಗಳು ಕೂಡಿ ಬರುವ ಸಾಧ್ಯತೆಗಳಿವೆ. ವಾಹನ ಚಾಲನೆಯನ್ನು ಜಾಗರೂಕತೆಯಿಂದ ಮಾಡಿರಿ. ಪಾಲು ದಾರಿಕೆ ವ್ಯವಹಾರದಲ್ಲಿ ನಿಮ್ಮ ಮಾತಿಗೆ ಹೆಚ್ಚು ಬೆಲೆ ಬರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚಿನಶ್ರದ್ಧೆ ಬರುತ್ತದೆ. ಆರಕ್ಷಕ ಇಲಾಖೆಯಲ್ಲಿ ಕೆಲಸ ಮಾಡುವವ ರಿಗೆ ಪ್ರಮುಖ ಕೇಸಿನಲ್ಲಿ ಅಪರಾಧಿಗಳನ್ನು ಕಂಡು ಹಿಡಿದು ಹೆಸರು ಗಳಿಸುವ ಸಾಧ್ಯತೆಗಳಿವೆ. ಮಹಿಳಾ ರಾಜಕಾರಣಿಗಳಿಗೆ ಜನ ಬೆಂಬಲ ಕಡಿಮೆಯಾಗುವ ಲಕ್ಷಣಗಳಿವೆ., ಕೆಲವರಿಗೆ ಗುಹ್ಯ ರೋಗಗಳು ಕಾಣಿಸ ಬಹುದು. ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಪ್ರಗತಿಯನ್ನು ಕಾಣಬಹುದು.
ಕನ್ಯಾ
ಧೃಡ ಸಂಕಲ್ಪದಿಂದ ಮಾಡಿದ ಕೆಲಸಗಳು ಪೂರ್ಣಗೊಳ್ಳುವವು. ಕೃಷಿ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ಮೂಡಿ ಅದರಲ್ಲಿ ತೊಡಗಿಕೊಳ್ಳುವಿರಿ. ನೃತ್ಯ ಕಲಾವಿದರುಗಳಿಗೆ ಹೆಚ್ಚಿನ ಕೆಲಸಗಳು ದೊರೆತು ಸಂಪಾದನೆ ಹೆಚ್ಚುತ್ತದೆ. ಹಿರಿಯರಬಗ್ಗೆ ಗೌರವತೋರು ವದರಿಂದ ನಿಮಗೆ,ಒಳ್ಳೆಯದು. ಅನಾವಶ್ಯಕವಾಗಿ ಖರ್ಚು ಮಾಡುವುದನ್ನು ಕಡಿಮೆ ಮಾಡಬೇಕು,ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಇತರರನ್ನು ಹೀಗಳೆಯುವುದು ನಿಮಗೆ ನಷ್ಟಕೊಡುವುದು. ಹೊಟ್ಟೆ ಯೊಳಗೆ ತೊಂದರೆಇರುವವರು ವೈದ್ಯಕೀಯ ಚಿಕಿತ್ಸೆಗೆ ಒಳಗಾಗುವುದು ಉತ್ತಮ. ದೂರ ಪ್ರಯಾಣದಲ್ಲಿ ಸಂಕಟಗಳು ಎದುರಾಗಬಹುದು. ಭೂಮಿಯ ವ್ಯವ ಹಾರದಿಂದ ಹೆಚ್ಚಿನಲಾಭ ಇರುತ್ತದೆ. ವಿದೇಶಗಳಿಗೆ ಬಟ್ಟೆ ಮತ್ತು ಆಭರಣಗಳನ್ನು ರಫ್ತು ಮಾಡುವವರಿಗೆ ವ್ಯವಹಾರ ವಿಸ್ತರಿಸುತ್ತದೆ.
ತುಲಾ
ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಂದರ್ಭವಿದೆ. ವಿದ್ಯಾರ್ಥಿಗಳು ಹೆಚ್ಚು ಶ್ರಮಪಟ್ಟರು ಫಲಿತಾಂಶ ಕಡಿಮೆ ಇರುತ್ತದೆ. ರಾಜಕಾರಣಕ್ಕೆ ಸೇರ ಬೇಕೆನ್ನುವವರು ಸ್ಥಾನಮಾನಗಳ ಬಗ್ಗೆ ಸರಿಯಾಗಿ ತಿಳಿದುಸೇರುವುದು ಉತ್ತಮ. ಗೃಹನಿರ್ಮಾಣಮಾಡು ವವರಿಗೆ ಆರ್ಥಿಕಸಂಕಷ್ಟಗಳು ಬರುವಸಾಧ್ಯತೆ ಇದೆ. ಹೂಡಿಕೆ ವ್ಯವಹಾರಗಳಿಂದ ಹೆಚ್ಚಿನ ಹಣ ಬರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಇರುತ್ತದೆ. ಕೆಲವು ಸಮಸ್ಯೆಗಳನ್ನು ಕುಳಿತು ಆಲೋಚನೆ ಮಾಡಿ ದಲ್ಲಿ ಪರಿಹಾರದ ದಾರಿ ಶೀಘ್ರವಾಗಿ ದಾರಿ ನಿಮಗೆ ದೊರೆಯುತ್ತದೆ. ಹೊಸದಾಗಿ ಕೃಷಿಭೂಮಿಯನ್ನು ಕೊಳ್ಳಲು ಹೋಗುವುದುಬೇಡ. ಒರಟುತನದ ಮಾತು ಗಳಿಂದ ಜನರ ಸಂಬಂಧಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಚ್ಚರ ವಹಿಸಿರಿ.
ವೃಶ್ಚಿಕ
ವಿದ್ಯುತ್ ಉಪಕರಣಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣ ಬಹುದು. ಬಗೆಹರಿದಂತಿದ್ದ ವ್ಯಾಜ್ಯಗಳು ಪುನಃ ತಲೆ ದೋರುವ ಸಂದರ್ಭವಿದೆ. ನಯವಂಚಕರಿಂದ ನಿಮ್ಮ ಹಣಕರಗುವಸಾಧ್ಯತೆಇದೆ. ಸ್ವಲ್ಪಎಚ್ಚರವಾಗಿರಿ.ನಿಮ್ಮ ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿಯನ್ನು ಕಂಡರೂ ಸಾಮಾಜಿಕ ಜೀವನದಲ್ಲಿ ಪಾರದರ್ಶಕವಾಗಿರುವುದು ಒಳ್ಳೆಯದು. ಸಂದೇಹಾಸ್ಪದ ವ್ಯಕ್ತಿಗಳಿಂದ ದೂರವಿರು ವುದು ಬಹಳ ಒಳ್ಳೆಯದು. ಸಾಹಸಕಲಾವಿದರುಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಬುದ್ದಿವಂತಿಕೆ ಯಿಂದ ವ್ಯವಹಾರದಲ್ಲಿ ಕೆಲವು ಉತ್ತಮ ನಿರ್ಣಯ ಗಳನ್ನು ಕೊಳ್ಳುವಿರಿ. ಸಾರಿಗೆ ವ್ಯವಹಾರ ಮಾಡುವವ ರಿಗೆ ಆದಾಯ ಕಡಿಮೆ ಇರುತ್ತದೆ. ವಿದೇಶಿಹಣವನ್ನು ವರ್ಗಾವಣೆ ಮಾಡುವವರಿಗೆ ಕಾನೂನಿನ ತೊಡಕು ಗಳು ಬರಬಹುದು. ಧನ ಆದಾಯವು ನಿರೀಕ್ಷೆಯಷ್ಟಿ ರುತ್ತದೆ.
ಧನು
ಹೊಸ ವಾಹನದ ಖರೀದಿಯನ್ನು ಮಾಡುವ ಸಾಧ್ಯತೆಗಳಿವೆ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ದಿನಸಿ ವ್ಯಾಪಾರಿ ಗಳಿಗೆ ವ್ಯವಹಾರ ವೃದ್ಧಿಸಿ ಹೆಚ್ಚು ಆದಾಯ ಹೆಚ್ಚುತ್ತದೆ. ಸಮಾಜದ ಸಂಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಸಹಕಾರ ನೀಡುವಿರಿ. ಸಮಾಜದಿಂದ ನಿಮ್ಮ ಕೆಲಸಕ್ಕೆ ಗೌರವ ದೊರೆಯುತ್ತದೆ. ನ್ಯಾಯವಾದಿಗಳಿಗೆ ವಾದಗಳಲ್ಲಿ ಜಯ ದೊರೆತು ಗೌರವ ಹೆಚ್ಚುತ್ತದೆ. ಕಬ್ಬಿಣ ಮತ್ತು ಉಕ್ಕನ್ನು ಮಾರಾಟಮಾಡುವ ವ್ಯಾಪಾರಸ್ಥರಿಗೆ ಹೆಚ್ಚು ವ್ಯಾಪಾರವಾಗಿ ಆದಾಯ ಹೆಚ್ಚುತ್ತದೆ. ಶೇರುಪೇಟೆ ವ್ಯವಹಾರ ಮಾಡುವ ಕೆಲವರು ಆದಾಯವನ್ನು ನಿರೀಕ್ಷಿಸಬಹುದು. ಹೆಣ್ಣು ಮಕ್ಕಳಿಗೆ ತಾಯಿಯ ಕಡೆ ಯಿಂದ ಉಡುಗೊರೆದೊರೆಯಬಹುದು. ಕುಟುಂಬದ ವ್ಯವಹಾರಗಳಲ್ಲಿ ನಿಮಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ
ಮಕರ
ಸ್ವಯಂ ಉದ್ಯೋಗ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆಯನ್ನು ಕಾಣಬಹುದು. ಊಟ ತಿಂಡಿಗಳನ್ನು ಅಲ್ಪ ಪ್ರಮಾಣದಲ್ಲಿ ತಯಾರಿಸಿ ಮಾರಾಟ ಮಾಡುವ ವರಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. ಹಳೆಯಲೇಖಕರು ಹೊಸ ಅವಿಷ್ಕಾರಗಳೊಂದಿಗೆ ಹೊಸತನವನ್ನು ಕಾಣು ವರು. ತಾಯಿಯೊಡನೆಕಾವೇರಿದ ಮಾತುಗಳು ಆಗ ಬಹುದು. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ವರ ಆದಾಯದಲ್ಲಿಏರಿಕೆ ಇರುತ್ತದೆ. ನಿಮ್ಮ ವೃತ್ತಿಯಲ್ಲಿ ನಿಧಾನ ಗತಿಯ ಅಭಿವೃದ್ಧಿಯನ್ನು ಕಾಣಬಹುದು. ಸರ್ಕಾರಿ ಗುತ್ತಿಗೆದಾರರಿಗೆ ಮಾಡಿದ್ದ ಕಾಮ ಗಾರಿಯ ಹಣ ಬರಬಹುದು. ಹಣದ ಒಳಹರಿವು ಮಂದಗತಿ ಯಲ್ಲಿರುತ್ತದೆ. ಧಾರ್ಮಿಕ ವಿದ್ಯಗಳಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಹೈನುಗಾರಿಕೆ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ.
ಕುಂಭ
ಕೆಲವು ರಾಜಕೀಯ ಪಟುಗಳಿಗೆ ಸೂಕ್ತ ಸ್ಥಾನ ಮಾನ ಸಿಗುವ ಸಾಧ್ಯತೆ ಇದೆ. ಹಣಕಾಸಿನ ಅನುಕೂಲ ದಲ್ಲಿ ತುಸು ಏರಿಕೆಯನ್ನು ಕಾಣಬಹುದುವಿದೇಶಗಳಲ್ಲಿ ಧರ್ಮಬೋಧನೆ ಮಾಡುವವರಿಗೆ ಹೆಚ್ಚಿನ ಅನುಕೂಲ ಗಳು ದೊರೆಯುತ್ತವೆ. ಕೆಲವು ಸ್ತ್ರೀಯರಿಗೆ ಸಣ್ಣಪುಟ್ಟ ಆರೋಗ್ಯ ವತ್ಯಾಸಗಳಾಗಬಹುದು.ಯುವಕರ ಅತಿ ಯಾದ ಆತ್ಮವಿಶ್ವಾಸವು ಅವರನ್ನು ನಗೆಪಾಟಲಿಗೆ ದೂಡುವ ಸಾಧ್ಯತೆ ಇದೆ.ಬೆಂಕಿಯೊಡನೆಕೆಲಸಮಾಡು ವವರು ಎಚ್ಚರವಾಗಿರುವುದು ಒಳ್ಳೆಯದು. ಸ್ಥಿರಾಸ್ತಿ ಖರೀದಿಮಾಡುವ ಆಲೋಚನೆ ಸದ್ಯಕ್ಕೆಬೇಡ.ಶೃಂಗಾರ ಸಾಧನಗಳನ್ನು ತಯಾರಿಸಿಮಾರಾಟಮಾಡುವವರ ವ್ಯವಹಾರ ಹೆಚ್ಚಾಗುತ್ತದೆ.ವಿದೇಶದಲ್ಲಿ ಸ್ಥಿರಾಸ್ತಿಯನ್ನು ಮಾಡ ಬೇಕೆನ್ನುವವರು ಸ್ವಲ್ಪ ಕಾಯುವುದು ಉತ್ತಮ. ಮಕ್ಕಳ ಅಭಿವೃದ್ಧಿಯ ಬಗ್ಗೆ ಸಂತೋಷದ ಸಮಾಚಾರ ಗಳನ್ನು ಕೇಳುವಿರಿ.
ಮೀನ
ಸಂಗೀತಗಾರರಿಗೆ ಪ್ರೋತ್ಸಾಹ ದೊರಕುತ್ತದೆ. ಹಣದ ಒಳಹರಿವು ಸ್ವಲ್ಪಮಟ್ಟಿಗೆ ಉತ್ತಮತೆಯನ್ನು ಕಾಣುತ್ತದೆ. ಸಹೋದರಿಯರಿಂದ ಹೆಚ್ಚಿನ ಸಹಕಾರ ಗಳು ದೊರೆಯುತ್ತವೆ. ತೆರಿಗೆ ತಜ್ಞರಿಗೆ ಕೆಲವು ಸಂಕಷ್ಟ ಗಳು ಎದುರಾಗಬಹುದು. ಹೆಣ್ಣು ಮಕ್ಕಳ ಅಭಿವೃದ್ಧಿ ಉತ್ತಮವಾಗಿರುತ್ತದೆ. ಉನ್ನತ ವ್ಯಾಸಂಗ ಮಾಡುವ ವರು ತಮ್ಮ ವಿಷಯ ಆಯ್ಕೆಯಲ್ಲಿ ಸ್ಪಷ್ಟತೆ ಇರಲಿ. ಸಂಗಾತಿಯ ಸಹಕಾರದಿಂದ ಸ್ವಯಂ ವೃತ್ತಿಯಲ್ಲಿ ಅಭಿವೃದ್ಧಿಯನ್ನು ಸಾಧಿಸುವಿರಿ. ಕಟ್ಟಡಕಟ್ಟುವ ಕಾರ್ಮಿಕರಿಗೆ ಹೆಚ್ಚಿನ ಕೆಲಸ ದೊರೆತು ಸಂಪಾದನೆ ಹೆಚ್ಚುತ್ತದೆ. ಮೂಳೆ ತಜ್ಞರಿಗೆ ಆದಾಯ ಹೆಚ್ಚುತ್ತದೆ. ವಾಣಿಜ್ಯ ಬೆಳೆ ಬೆಳೆಯುವ ರೈತರಗಿಂತ ದಲ್ಲಾಳಿಗಳಿಗೆ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಒಡಹುಟ್ಟಿದವರ ನಡುವಿನ ಸಂಬಂಧಗಳು ಸ್ವಲ್ಪ ಸುಧಾರಿಸುತ್ತದೆ.
ADVERTISEMENT
ADVERTISEMENT