ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೋಟೆಲ್ ಉದ್ಯಮಕ್ಕೆ ಭದ್ರತೆ ಅಗತ್ಯ: ಗೋಪಾಲಕೃಷ್ಣ ಶೆಟ್ಟಿ

Published 3 ಆಗಸ್ಟ್ 2024, 15:56 IST
Last Updated 3 ಆಗಸ್ಟ್ 2024, 15:56 IST
ಅಕ್ಷರ ಗಾತ್ರ

ಮೈಸೂರು: ‘ಹೋಟೆಲ್‌ ಉದ್ಯಮಕ್ಕೆ ಸರ್ಕಾರದ ಭದ್ರತೆ ಅಗತ್ಯ’ ಎಂದು ರಾಜ್ಯ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಹೇಳಿದರು.

ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದಿಂದ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಎಲ್ಲರೂ ಸಂಘಟನಾತ್ಮಕವಾಗಿ ಇದ್ದಾಗ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಹುಡುಕಲು ಸಾಧ್ಯ. ಹೀಗಾಗಿ ಹೋಟೆಲ್‌ ಮಾಲಿಕರು ತಾಲ್ಲೂಕು ಮಟ್ಟದಲ್ಲೂ ಸಂಘಟನೆಗಳನ್ನು ವಿಸ್ತರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಹೊಟೇಲ್‌ ಉದ್ಯಮಕ್ಕೆ ತೊಂದರೆಯಾಗುವ ನಿಯಮಗಳ ತಿದ್ದುಪಡಿಗೆ ಸರ್ಕಾರವನ್ನು ಒತ್ತಾಯಿಸುತ್ತೇವೆ. ಜಿಲ್ಲಾ ಸಂಘಗಳೂ ಸಹಕಾರ ನೀಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ, ಪದಾಧಿಕಾರಿಗಳಾದ ಮಧುಕರ್ ಎಂ.ಶೆಟ್ಟಿ. ರವಿಶಾಸ್ತ್ರಿ, ಎಂ.ರಾಜೇಂದ್ರ, ಸುಧಾಕರ್ ಎಸ್. ಶೆಟ್ಟಿ, ಮೈಸೂರು ಹೋಟೆಲ್ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಎನ್.ವಿ. ಹೆಗಡೆ, ಉಗ್ರಯ್ಯ, ಎ.ಆರ್. ರವೀಂದ್ರ ಭಟ್, ಕೆ.ಪ್ರಕಾಶ್ ಶೆಟ್ಟಿ, ಸುಬ್ರಹ್ಮಣ್ಯ ತಂತ್ರಿ ಆರ್, ಕೆ.ಭಾಸ್ಕರ್ ಶೆಟ್ಟಿ, ಸತೀಶ್ ಪಾಂಡುರಂಗ, ಪ್ರಭಾಕರ್, ಆನಂದ ಶೆಟ್ಟಿ, ಅಶೋಕ್ ಜಿ, ಅನಿಲ ಕುಮಾರ್, ಹೇಮಂತ್ ಕುಮಾರ್, ಸುಜಿತ್ ಕುಮಾರ್
ರಾಮ್, ಮೋಹನ್, ಪಿ.ಎನ್‌.ಕುಂದರ್, ಎ.ಎಸ್.ಸತೀಶ್, ಶಿವಕುಮಾರ್, ಮಹೇಶ್ ಕಾಮತ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT