ನಂಜನಗೂಡು: ನಗರದ ಚಾಮಾಲಾಪುರದ ಹುಂಡಿ ಬಡಾವಣೆಯಲ್ಲಿ ಗುರುವಾರ ಗರ್ಭಿಣಿ ಹೆಂಡತಿಯ ಮೇಲೆ ಆಕೆಯ ಗಂಡ ಮಂಜುನಾಥ್ ಚಾಕುವಿನಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾನೆ.
ಚಾಮಾಲಾಪುರದ ಹುಂಡಿ ಬಡಾವಣೆಯ ನಿವಾಸಿ ಶೋಭಾ (21) ಮೃತಪಟ್ಟ ಮಹಿಳೆ.
ಗಂಡನೊಂದಿಗೆ ಮನಸ್ತಾಪ ಉಂಟಾಗಿ ತವರು ಮನೆಗೆ ಶೋಭಾ ಬಂದಿದ್ದಳು. ಅದೇ ಬಡಾವಣೆಯ ಆರೋಪಿ ಕಟ್ಟಡ ಕಾರ್ಮಿಕ ಮಂಜುನಾಥ್, ತನ್ನ ಹೆಂಡತಿಯನ್ನು ತನ್ನ ಜೊತೆಗೆ ಕಳುಹಿಸುವಂತೆ ಜಗಳ ತೆಗೆದಿದ್ದಾನೆ. ಆದರೆ ಶೋಭಾ ಮನೆಯವರು ಕಳುಹಿಸಲು ಒಪ್ಪದಿದ್ದಾಗ ಚಾಕುವಿನಿಂದ ಕುತ್ತಿಗೆ ಕೊಯ್ದಿದ್ದಾನೆ. 7 ತಿಂಗಳ ಗರ್ಭಿಣಿಯಾಗಿದ್ದ ಮಹಿಳೆ ತೀವ್ರ ರಕ್ತಸ್ರಾವವಾಗೊಂಡಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದಂಪತಿಗೆ 2 ವರ್ಷದ ಗಂಡು ಮಗುವಿದೆ
ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಮಂಜುನಾಥ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.