ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ಕಾಮಗಾರಿ: ತನಿಖೆಗೆ ಸೂಚನೆ

ಸಂತೆ ಮೈದಾನದಲ್ಲಿ ಅರ್ಧಕ್ಕೆ ನಿಂತ ಮಾರುಕಟ್ಟೆ ಕಟ್ಟಡ ಪರಿಶೀಲಿಸಿದ ಡಿಸಿ
Published 21 ಸೆಪ್ಟೆಂಬರ್ 2023, 14:55 IST
Last Updated 21 ಸೆಪ್ಟೆಂಬರ್ 2023, 14:55 IST
ಅಕ್ಷರ ಗಾತ್ರ

ಹುಣಸೂರು: ನಗರದ ಸಂತೆ ಮೈದಾನದಲ್ಲಿ ಅತ್ಯಾಧುನಿಕ ಮಾರುಕಟ್ಟೆ ನಿರ್ಮಿಸುವ ಉದ್ದೇಶದಲ್ಲಿ ನಗರೋತ್ತಾನದಲ್ಲಿ ₹ 1.30 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಪೂರ್ಣಗೊಳ್ಳದೆ ಸಾರ್ವಜನಿಕ ಶೌಚಾಲಯ ಮತ್ತು ಅನೈತಿಕ ತಾಣವಾಗಿದೆ ಎಂದು ನಗರಸಭೆ ಸದಸ್ಯ ಕೃಷ್ಣರಾಜ ಗುಪ್ತ ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಕಟ್ಟಡ ಪರಿಶೀಲಿಸಿ ತರಕಾರಿ ಮಾರುಕಟ್ಟೆ ಮತ್ತು ಸೆಲ್ಲರ್ ಪಾರ್ಕಿಂಗ್ ವ್ಯವಸ್ಥೆ ಉದ್ದೇಶದಿಂದ ನಿರ್ಮಿಸಿದ ಕಟ್ಟಡ ಅವೈಜ್ಞಾನಿಕವಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ತನಿಖೆ ನಡೆಸಲಾಗುವುದು’ ಎಂದು ತಿಳಿಸಿದರು.

ತರಾಟೆ: ‘ನಗರ ಮಧ್ಯೆ ಬೃಹತ್ ಕಟ್ಟಡದ ನೆಲಮಾಳಿಗೆ ಸಾರ್ವಜನಿಕ ಶೌಚಾಲಯವಾಗಿದೆ. ಮಳೆ ನೀರು ಸಂಗ್ರಹವಾಗುತ್ತಿದ್ದರೂ ನಗರಸಭೆ ನೀರು ತೆರವುಗೊಳಿಸುವ ಕ್ರಮಕ್ಕೆ ಮುಂದಾಗದಿರುವುದು ದುರಂತ. ಊರಿನ ಮಧ್ಯೆ ಸಾಂಕ್ರಾಮಿಕ ರೋಗ ಹರಡುವ ಕೇಂದ್ರವಾಗಿದೆ’ ಎಂದು ಗುಡುಗಿದರು.

‘ನಗರಸಭೆ ಸಕ್ಕಿಂಗ್ ಯಂತ್ರ ಖರೀದಿಸಲು ₹ 2 ಲಕ್ಷ ಮಂಜೂರು ಮಾಡುತ್ತೇನೆ. ಒಂದು ವಾರದೊಳಗೆ ನೆಲಮಾಳಿಗೆ ಸಂಪೂರ್ಣ ಶುಚಿಗೊಳಿಸಬೇಕು. ನಗರ ‍ಪೋಲಿಸ್ ಸಹಕಾರದಲ್ಲಿ ಖಾಸಗಿ ವಾಹನ ನಿಲ್ಲಿಸಲು ಕನಿಷ್ಠ ದರ ನಿಗದಿಗೊಳಿಸಲು ನರಗಸಭೆ ಕ್ರಮವಹಿಸಿ ವರದಿ ನೀಡಬೇಕು’ ಎಂದು ನಗರಸಭೆ ಎಇಇ ಶರ್ಮಿಳಾ ಅವರಿಗೆ ಆದೇಶಿಸಿದರು.

ತನಿಖೆ: ‘ನಗರೋತ್ಥಾನ ಯೋಜನೆಯಲ್ಲಿ ನಿರ್ಮಿಸಿರುವ ಈ ಕಟ್ಟಡಕ್ಕೆ 2011–12ರಲ್ಲಿ ₹ 1.30 ಕೋಟಿ ವೆಚ್ಚವಾಗಿದೆ ಎಂದು ನಂಬಲಾಗದು. ಈ ಬಗ್ಗೆ ಪ್ರತ್ಯೇಕ ತನಿಖೆ ನಡೆಸಿ ಕ್ರಮವಹಿಸಲಿದ್ದೇನೆ. ಅತಿ ಶೀಘ್ರದಲ್ಲೇ ಸಾಮಾನ್ಯ ಸಭೆ ಕರೆದು ಚರ್ಚಿಸುತ್ತೇನೆ’ ಎಂದರು.

ನಗರಸಭೆ ಪೌರಾಯುಕ್ತೆ ಮಾನಸ, ಪರಿಸರ ಎಂಜಿನಿಯರ್ ರೂಪಾ, ಎಇಇ ಶರ್ಮಿಳಾ, ನಗರಸಭೆ ಸದಸ್ಯರಾದ ಸತೀಶ್ ಕುಮಾರ್, ಕೃಷ್ಣರಾಜ ಗುಪ್ತ, ಸಾಯಿನಾಥ್, ಇಂಟೆಕ್ ರಾಜು ಇದ್ದರು.

Cut-off box - ಪೂರಕ ಬದಲು ಮಾರಕ ‘ನಗರಸಭೆ ಕಾರ್ಯವೈಖರಿ ಹೇಗೆ ನಡೆಯುತ್ತಿದೆ ಎಂದು ಸಂತೆ ಮಾಳದ ಕಟ್ಟಡ ದುಸ್ಥಿತಿ ನೋಡುತ್ತಿದ್ದರೆ ಅಂದಾಜಿಸಬಹುದು. ಕಟ್ಟಡ ಅರ್ಧಕ್ಕೆ ನಿಂತು ವರ್ಷಗಳು ಉರುಳಿದರೂ ಪೂರ್ಣಗೊಳಿಸುವ ಜವಾಬ್ದಾರಿ ಹೊರುವ ಮನಸ್ಥಿತಿ ಇಲ್ಲದೆ ನಗರ ವಾಸಿಗರಿಗೆ ಕಟ್ಟಡ ಪೂರಕವಾಗುವ ಬದಲಿಗೆ ಮಾರಕವಾಗಿದೆ’ ಎಂದು ಡಾ.ರಾಜೇಂದ್ರ ಜಿಲ್ಲಾಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT