ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ವಿ.ವಿ. ಕೊಕ್ಕೊ: ಲೀಗ್ ಸುತ್ತಿನಲ್ಲಿ ಮೈಸೂರು ವಿ.ವಿ ಶುಭಾರಂಭ

Last Updated 5 ಜುಲೈ 2022, 7:27 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ಫೋರ್ಟ್ಸ್‌ ಪೆವಿಲಿಯನ್‌ನಲ್ಲಿ ಮಂಗಳವಾರದಿಂದ ಆರಂಭವಾಗಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಕೊಕ್ಕೊ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಮೈಸೂರು ತಂಡವು ಪಾಣಿಪತ್‌ನ ಕುರುಕ್ಷೇತ್ರ ವಿಶ್ವವಿದ್ಯಾಲಯವನ್ನು 10–5ರಿಂದ ಮಣಿಸಿ ಶುಭಾರಂಭ ಮಾಡಿತು.

ಪಂದ್ಯದ ಮೊದಲೆರಡು ಸುತ್ತುಗಳಲ್ಲಿ ಮೈಸೂರು 10–2ರ ಮುನ್ನಡೆಯನ್ನು ಪಡೆಯಿತು. ಚೇಸಿಂಗ್‌ನಲ್ಲಿ ಮೈಸೂರಿನ ಮೋನಿಕಾ, ಪಾಣಿಪತ್‌ನ ಐವರನ್ನು ಔಟ್‌ ಮಾಡಿದರಲ್ಲದೆ, ಅಂಕ ಗಳಿಕೆಯನ್ನು ಹೆಚ್ಚಿಸಿಕೊಟ್ಟರು. ಮೂರನೇ ಸುತ್ತಿನಲ್ಲಿ ಕೆ.ಆರ್.ತೇಜಸ್ವಿನಿ ಉತ್ತಮ ಡಿಫೆಂಡಿಂಗ್‌ ಮಾಡಿ ಎದುರಾಳಿಗಳನ್ನು ಕಾಡಿದರು. ಅವರಿಗೆ ಚೈತ್ರಾ ಸಾಥ್‌ ನೀಡಿದರು.

ನಾಲ್ಕನೇ ಸುತ್ತಿನಲ್ಲೂ ವಿನುತಾ, ಮಂಜುಳಾ ಐದು ನಿಮಿಷಗಳ ವರೆಗೆ ಚೇಸರ್‌ಗಳಿಗೆ ಸಿಗದೇ ಕಾಡಿದರು. ವಿನುತಾ 2 ನಿಮಿಷ 40 ಸೆಕೆಂಡ್‌ ಔಟಾಗದೇ ಕಣದಲ್ಲಿದ್ದರೆ, ತೇಜಸ್ವಿನಿ 4 ನಿಮಿಷ 40 ಸೆಕೆಂಡ್‌ ಆಟವಾಡಿದರು. ಮಂಜುಳಾ ಕೊನೆಯವರೆಗೂ ಔಟಾಗಲಿಲ್ಲ. 7 ನಿಮಿಷಗಳ ಕೊನೆಯ ಸುತ್ತಿನಲ್ಲಿ 2 ಪಾಯಿಂಟ್‌ಗಳಷ್ಟೇ ಪಾಣಿಪತ್ ಸಿಕ್ಕಿದವು.

ಕಾಡಿದ ಮಳೆ: ಪಂದ್ಯಾವಳಿಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಚಾಲನೆ ನೀಡಿದರು. ‌ತುಂತುರು ಮಳೆ ಆರಂಭವಾದ್ದರಿಂದ ಹೊರಾಂಗಣದ ಎರಡು ಅಂಕಣಗಳು ತೇವಗೊಂಡವು. ಒಳಂಗಾಣದಲ್ಲಿ ಉದ್ಘಾಟನಾ ಪಂದ್ಯ ನಡೆಯಿತು. ಉಳಿದ ಪಂದ್ಯಗಳು ಇಲ್ಲಿಯೇ ನಡೆಯಲಿವೆ.

ಪಂದ್ಯಾವಳಿಯಲ್ಲಿ ದೇಶದ 4 ವಲಯಗಳಿಂದ ತಲಾ 4ರಂತೆ 16 ತಂಡಗಳು ಪಾಲ್ಗೊಳ್ಳಲಿವೆ. ದಕ್ಷಿಣ ವಲಯದಿಂದ ರಾಜ್ಯದ ಮೈಸೂರು, ಆಂಧ್ರ ಪ್ರದೇಶದ ಕಾಕತೀಯ ವಿಶ್ವವಿದ್ಯಾಲಯ, ಕೇರಳದ ಕ್ಯಾಲಿಕಟ್‌ ಹಾಗೂ ಕೇರಳ ವಿಶ್ವವಿದ್ಯಾಲಯಗಳು ಕಣದಲ್ಲಿವೆ. ಲೀಗ್‌ ಹಂತದಲ್ಲಿ ಒಟ್ಟು 16 ಪಂದ್ಯಗಳಿದ್ದು, ಜುಲೈ 6ರಂದು ನಾಕೌಟ್‌, ಸೆಮಿಫೈನಲ್‌– ಫೈನಲ್‌ ಪಂದ್ಯಗಳು 7ರಂದು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT