‘ಕಲಬುರಗಿಯಲ್ಲಿ ರೈತ ಸಮಾವೇಶ’
‘ಕಲಬುರಗಿಯಲ್ಲಿ ಡಿ.23ರಂದು ವಿಶ್ವ ರೈತ ದಿನಾಚರಣೆ ಪ್ರಯುಕ್ತ ರಾಜ್ಯ ರೈತ ಸಮಾವೇಶ ಆಯೋಜಿಸಲಾಗುವುದು. ವಿವಿಧ ಜಿಲ್ಲೆಗಳ 5 ಸಾವಿರ ರೈತರು ಪಾಲ್ಗೊಳ್ಳುವರು’ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.
‘ಮೂರು ವರ್ಷದ ಹಿಂದೆ ಮೈಸೂರಿನಲ್ಲಿ ಕಿಸಾನ್ ಸ್ವರಾಜ್ ಸಮ್ಮೇಳನ ಆಯೋಜಿಸಲಾಗಿತ್ತು. ದೇಶದ ವಿವಿಧೆಡೆಯಿಂದ ಸಮಾವೇಶಕ್ಕೆ ರೈತರು ಬಂದಿದ್ದರು. ಈ ಬಾರಿಯೂ ವಿಶಿಷ್ಟವಾಗಿ ಆಚರಿಸಲಾಗುವುದು. 10 ಸಾಧಕ ರೈತರನ್ನು ಪುರಸ್ಕರಿಸಲಾಗುವುದು’ ಎಂದು ಮಾಹಿತಿ ನೀಡಿದರು.