ಎಚ್.ಡಿ. ಕೋಟೆ: ಪಟ್ಟಣದಲ್ಲಿ ಸಣ್ಣ ಜಾಗದಲ್ಲಿ ಸಹಕಾರ ಸಂಘವು ಆರಂಭವಾಯಿತು, ಹಲವು ಮುಖಂಡರ ಸಹಕಾರದಿಂದ ಇಂದು ಉತ್ತಮ ಕಟ್ಟಡ ನಿರ್ಮಾಣವಾಗಿದೆ ಎಂದು ಮುಖಂಡ ವೈ.ಟಿ. ಮಹೇಶ್ ತಿಳಿಸಿದರು.

ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಮತ್ತು ಮಳಿಗೆಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ನಮ್ಮ ಸಹಕಾರ ಸಂಘದ ಮೂಲಕ ಹಲವು ನೂರಾರು ರೈತರಿಗೆ ಕೊಟ್ಯಂತರ ರೂಪಾಯಿ ಕೃಷಿ ಸಾಲ ನೀಡಲಾಗಿದ್ದು, ಸಂಘದಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.

ಪಟ್ಟಣದ ಎಂಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ವೆಂಕಟಾಚಲ ಮಾತನಾಡಿ, ಸಹಕಾರ ಸಂಘಗಳು ರೈತರ ಬೆನ್ನುಲುಬಾಗಿ ನಿಂತಿವೆ, ಸಹಕಾರ ಸಂಘಗಳು ನಮ್ಮ ಬ್ಯಾಂಕ್ಗಳಿಗೆ ಬೆನ್ನುಲುಬಾಗಿ ನಿಂತಿವೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಹಕಾರ ಸಂಘದ ಮೂಲಕ ರೈತರಿಗೆ ಸಾಲ ನೀಡುವ ಬೇಡಿಕೆ ಇಡಲಾಗಿದೆ. ಬ್ಯಾಂಕಿನ ಮೇಲ್ಪಟ್ಟದ ಅಧಿಕಾರಿಗಳ ಬಳಿ ಮಾತನಾಡಿ ಹೆಚ್ಚಿನ ಸಾಲ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಶರಥ ಮಾತನಾಡಿ, ನಾನು ಕಳೆದ ಹತ್ತು ವರ್ಷದಿಂದ ಅಧ್ಯಕ್ಷನಾಗಿದ್ದು, ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ₹60 ಲಕ್ಷ ಸಾಲ ನೀಡಲಾಗಿತ್ತು. ಪ್ರಸ್ತುತ ₹3.50 ಕೋಟಿ ಸಾಲವನ್ನು ರೈತರಿಗೆ ನೀಡಲಾಗಿದೆ ಎಂದರು.

ಎಂಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಚಂದ್ರು, ಉಪಾಧ್ಯಕ್ಷ ಕುಮಾರ್, ಎಚ್.ಆರ್. ಶ್ರೀನಿವಾಸರಾಜು, ಬಿ.ಎಂ.ಶಂಕರಲಿಂಗೇಗೌಡ, ಕೆ.ಜೆ.ರಾಮಕೃಷ್ಣೇಗೌಡ, ವಿರೇಂದ್ರಕುಮಾರ್, ಮಂಚನಾಯಕ, ಚಲುವರಾಜು, ಚೆನ್ನಾಜಮ್ಮ, ಶಂಭೂಗೌಡ, ಪುನೀತ್, ಶಫೀವುಲ್ಲಾ, ಲಕ್ಷ್ಮಮ್ಮ, ಮಹೇಶ್, ಶಿವರಾಜು, ರಂಗಸ್ವಾಮಿ, ಆನಂದ, ಈಶ್ವರೇಗೌಡ, ಸೊಮೇಗೌಡ, ಮಹದೇವೆಗೌಡ, ನಾಗರಾಜು, ನಾಗನಹಳ್ಳಿ ಪ್ರದೀಪ್, ರಾಜೇಂದ್ರ, ಪುಟ್ಟಸ್ವಾಮಪ್ಪ, ಸಿದ್ದೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.