ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಿಕ್ ಬಾಕ್ಸಿಂಗ್: ಬೀಬಿ ಫಾತಿಮಾ ಸಾಧನೆ

Published 20 ಆಗಸ್ಟ್ 2024, 14:15 IST
Last Updated 20 ಆಗಸ್ಟ್ 2024, 14:15 IST
ಅಕ್ಷರ ಗಾತ್ರ

ಮೈಸೂರು: ‘ಕರ್ನಾಟಕ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್‌ನಿಂದ ಯುವರಾಜ ಕಾಲೇಜಿನಲ್ಲಿ ಈಚೆಗೆ ನಡೆದ 16ನೇ ಕರ್ನಾಟಕ ರಾಜ್ಯ ಮಕ್ಕಳ, ಕೆಡೆಟ್, ಜ್ಯೂನಿಯರ್, ಸೀನಿಯರ್ ಮತ್ತು ಮಾಸ್ಟರ್ಸ್ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎಸ್.ಬೀಬಿ ಫಾತಿಮಾ ಅವರು ಮಹಿಳೆಯರ ಲೈಟ್ ಕಾಂಟಾಕ್ಟ್ (46 ಕೆ.ಜಿ) ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಿಕ್ ಲೈಟ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ’ ಎಂದು ಸ್ಪಂದನಾ ತಂಗುದಾಣ ಸಂಸ್ಥೆಯ ಜಿಲ್ಲಾ ಸಂಚಾಲಕಿ ಪ್ರಣತಿ ಪ್ರಕಾಶ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಅಕ್ರಂ ಪಾಷಾ ಅವರು ಬೀಬಿ ಫಾತಿಮಾ ಅವರನ್ನು ಸಾಕುತ್ತಿದ್ದಾರೆ. ಸಮಾಜದಲ್ಲಿ ಎದರಾಗುವ ಹಲವು ಕಷ್ಟಗಳ ನಡುವೆಯೂ ಮಗಳ ಸಾಧನೆಗೆ ಪ್ರೇರೇಪಿಸುತ್ತಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರೂ ಮಕ್ಕಳನ್ನು ಉತ್ತಮವಾಗಿ ಸಲುಹಬಲ್ಲರು ಎಂಬುದಕ್ಕೆ ಇದು ನಿದರ್ಶ‌ನ’ ಎಂದರು.

‘ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಫಾತಿಮಾ ಸಿದ್ಧತೆ ನಡೆಸುತ್ತಿದ್ದು, ಆಸಕ್ತರು ಮೊ.ಸಂ. 97405 34739 ಸಂಪರ್ಕಿಸಿ ಆರ್ಥಿಕ ಸಹಕಾರ ನೀಡಬಹುದು’ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬೀಬಿ ಫಾತಿಮಾ, ಅಕ್ರಂ ಪಾಷಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT