ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆ: ಸೋಮಶೇಖರ್ ಅಧ್ಯಕ್ಷ

Published 11 ಜುಲೈ 2024, 15:06 IST
Last Updated 11 ಜುಲೈ 2024, 15:06 IST
ಅಕ್ಷರ ಗಾತ್ರ

ಹುಣಸೂರು: ‘ಅಖಿಲ ಭಾರತ ವೀರಶೈವ ಮಹಾಸಭಾ ಹುಣಸೂರು ಘಟಕದ ನೂತನ ಅಧ್ಯಕ್ಷರಾಗಿ ಹಂದನಹಳ್ಳಿ ಸೋಮಶೇಖರ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ’ ಎಂದು ಚುನಾವಣಾಧಿಕಾರಿ ಮೋದೂರು ಮಹೇಶಾರಾಧ್ಯ ತಿಳಿಸಿದ್ದಾರೆ.

ನಗರದ ಬೂದಿಮಠದಲ್ಲಿ ನಡೆದ ಮಹಾಸಭಾದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಪ್ರತಿಸ್ಪರ್ಧಿ ಇಲ್ಲದ ಕಾರಣ ಅವಿರೋಧ ಆಯ್ಕೆ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಮಹಾಸಭಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಾಬಗೆರೆ ರಮೇಶ್ ಕುಮಾರ್, ಭಾಗ್ಯಕುಮಾರ್, ದೇವರಾಜು, ಜಯಣ್ಣ, ಎಂ.ಆರ್.ಜಗದೀಶ್, ಸೋಮಣ್ಣ, ಕೆ.ಸಿ.ಮಹದೇವಪ್ಪ, ಪರಮೇಶ್, ಎಚ್.ಬಿ.ಶೇಖರ್, ಚಂದ್ರಶೇಖರ್, ಲೋಕೇಶ್, ಬಿ.ಎಚ್. ಪುಟ್ಟನಿಂಗಪ್ಪ, ಮಹಿಳಾ ನಿರ್ದೇಶಕರಾಗಿ ಬಸಮಣ್ಣಿ, ಸುಮಿತ್ರಾ ವಿನೋದಾ, ಭಾಗ್ಯ, ವಿ.ರಾಣಿ, ಗೌರಮ್ಮ, ಎಸ್.ಆರ್.ಮಂಜುಳ ಅವಿರೋಧ ಆಯ್ಕೆಗೊಂಡಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೂತನ ಪದಾಧಿಕಾರಿಗಳ ತಂಡಕ್ಕೆ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT