ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ.ರಾಗೌಗೆ ‘ಪ್ರೊ.ಮಳಲಿ ವಸಂತಕುಮಾರ್ ದತ್ತಿ’ ಪ್ರಶಸ್ತಿ

Published : 11 ಆಗಸ್ಟ್ 2024, 16:17 IST
Last Updated : 11 ಆಗಸ್ಟ್ 2024, 16:17 IST
ಫಾಲೋ ಮಾಡಿ
Comments

ಮೈಸೂರು: ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದಿಂದ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ರಾಮೇಗೌಡ (ರಾಗೌ) ಅವರಿಗೆ ಪ್ರೊ.ಮಳಲಿ ವಸಂತಕುಮಾರ್ ದತ್ತಿ ಪ್ರಶಸ್ತಿಯನ್ನು ಮುಖಂಡ ಡಿ.ಮಾದೇಗೌಡ ಪ್ರದಾನ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಮಾತನಾಡಿ, ‘ಕನ್ನಡ ಕಟ್ಟಲು ದುಡಿದ ಜನಪ್ರಿಯ ಲೇಖಕರ ಕೊಡುಗೆಯನ್ನು ಸದಾ ಸ್ಮರಿಸಬೇಕು’ ಎಂದರು. 

‘ಮಳಲಿ ವಸಂತಕುಮಾರ್ ಸಾಧನೆ ಕನ್ನಡ ಸಾಹಿತ್ಯ ಸಂಪತ್ತಿನ ಭಾಗವಾಗಿದೆ. ಅವರ ನೆನಪನ್ನು ಸದಾ ಹಸಿರಾಗಿರಿಸುವ ನಿಟ್ಟಿನಲ್ಲಿ ದತ್ತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ’ ಎಂದು ಹೇಳಿದರು.

‘ಪ್ರೊ.ರಾಮೇಗೌಡ ಅವರು ಮಂಡ್ಯ ಜಿಲ್ಲೆಯ ಈರೇಗೌಡನ ದೊಡ್ಡಿಯವರು. 37 ವರ್ಷಗಳ ಕಾಲ ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕವಿತೆ, ಮಕ್ಕಳ ಸಾಹಿತ್ಯ, ನಾಟಕ, ವಿಮರ್ಶೆ, ಜಾನಪದ, ಗ್ರಂಥ ಸಂಪಾದನೆ ಮೊದಲಾದ ಕ್ಷೇತ್ರಗಳಲ್ಲಿ 80ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ’ ಎಂದು ತಿಳಿಸಿದರು.

ಶಾಂತಾ ಮಳಲಿ ವಸಂತಕುಮಾರ್, ಪ್ರೊ.ಎಚ್.ಪಿ.ಗೀತಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಗೌರವ ಕಾರ್ಯದರ್ಶಿ ಲತಾ ಮೋಹನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT