ಮೈಸೂರು: ಮಾವಿನಹಣ್ಣುಗಳನ್ನು ಮಾಗಿಸುವಾಗ ಕ್ಯಾಲ್ಸಿಯಂ ಕಾರ್ಬೈಡ್‌ನ್ನು ಬಳಸಲೇಬಾರದು ಎಂದು ಆಹಾರ ಸುರಕ್ಷತಾ ಅಂಕಿತ ಅಧಿಕಾರಿ (ಪ್ರಭಾರ) ಡಾ.ಚಿದಂಬರ ಕಿವಿಮಾತು ಹೇಳಿದರು.

ತೋಟಗಾರಿಕಾ ಇಲಾಖೆ ವತಿಯಿಂದ ಇಲ್ಲಿ ಸೋಮವಾರ ಏರ್ಪಡಿಸಿದ್ದ ‘ಕಾರ್ಬೈಡ್ ಮುಕ್ತ ಮಾವು’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಹಣ್ಣುಗಳನ್ನು ಮಾಗಿಸಲು ಕೃತಕ ವಿಧಾನಗಳ ಮೊರೆ ಹೋಗಬಾರದು. ನೈಸರ್ಗಿಕವಾಗಿಯೇ ಹಣ್ಣು ಮಾಡಬೇಕು. ಒಂದು ವೇಳೆ ಕೃತಕವಾಗಿ ಹಣ್ಣು ಮಾಡುವಂತಹ ಪ್ರಮೇಯ ಬಂದಲ್ಲಿ ಯಾವುದೇ ಕಾರಣಕ್ಕೂ ಕ್ಯಾಲ್ಸಿಯಂ ಕಾರ್ಬೈಡ್‌ನ್ನು ಬಳಸಲೇಬಾರದು ಎಂದು ಹೇಳಿದರು.

ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಮಾಗಿಸಿದ ಹಣ್ಣುಗಳನ್ನು ಪದೇ ಪದೇ ನಿರಂತರವಾಗಿ ತಿನ್ನುತ್ತಾ ಹೋದರೆ ಕ್ಯಾನ್ಸರ್ ಉಂಟಾಗುವ ಅಪಾಯ ಇದೆ. ಹೀಗಾಗಿ, ಇದನ್ನು ಬಳಸದೇ ಎಥಿಲಿನ್ ಆಕ್ಸೈಡ್ ಎಂಬ ಸುರಕ್ಷಿತ ರಾಸಾಯನಿಕ ಬಳಸುವಂತೆ ಅವರು ಸೂಚಿಸಿದರು.

ತೋಟಗಾರಿಕಾ ವಿಜ್ಞಾನಿ ಡಾ.ವೆಂಕಟರಾವ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಅಬೀಬಾ ನಿಶಾದ್, ದಿನೇಶ್‌ಕುಮಾರ್, ಎಪಿಎಂಸಿ ಕಾರ್ಯದರ್ಶಿ ಗಿರೀಶ್ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.