ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರಿಗೆ ನೀಡುವ ಹಾಲಿನ ದರ ಶೀಘ್ರ ಹೆಚ್ಚಳ: ಸಚಿವ ವೆಂಕಟೇಶ್ ಭರವಸೆ

Published : 30 ಸೆಪ್ಟೆಂಬರ್ 2024, 16:07 IST
Last Updated : 30 ಸೆಪ್ಟೆಂಬರ್ 2024, 16:07 IST
ಫಾಲೋ ಮಾಡಿ
Comments

ಬೆಟ್ಟದಪುರ: ‘ಕಾಂಗ್ರೆಸ್ ಸರ್ಕಾರ ಈ ಹಿಂದೆ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ₹ 3 ಹಾಲಿನ ದರವನ್ನು ಹೆಚ್ಚಿಸಿತ್ತು. ಮುಂದಿನ ದಿನಗಳಲ್ಲಿ ₹ 5 ಹಾಲಿನ ದರವನ್ನು ಹೆಚ್ಚುವರಿಯಾಗಿ ರೈತರಿಗೆ ನೀಡಬೇಕೆಂದು ಚಿಂತನೆ ಇದೆ’ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಭರವಸೆ ನೀಡಿದರು.

ಸಮೀಪದ ಮೇಗಳಕೊಪ್ಪಲು ಗ್ರಾಮದಲ್ಲಿ ಸೋಮವಾರ ಹಾಲು ಉತ್ಪಾದಕ ಸಹಕಾರ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದಸರಾ ಮುಗಿದ ಬಳಿಕ ನಿಗದಿತ ಮೊತ್ತವನ್ನು ಘೋಷಣೆ ಮಾಡಲಾಗುವುದು’ ಎಂದರು

‘ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ನಂದಿನಿ ಹಾಲು ಮತ್ತು ತುಪ್ಪ ಬಳಕೆ ಮಾಡಬೇಕೆಂದು ತಿರುಮಲ ಸಮಿತಿಯವರು, ನಮ್ಮೊಂದಿಗೆ ಕೈಜೋಡಿಸಿರುವುದು ಸಂತೋಷದ ವಿಚಾರ. ಮೈಮುಲ್ ಒಕ್ಕೂಟವು ಈ ಬಾರಿ ಸಾಕಷ್ಟು ನಷ್ಟ ಅನುಭವಿಸಿದೆ ಎಂದು ಸರ್ಕಾರಕ್ಕೆ ಗಮನಕ್ಕೆ ಬಂದಿದೆ. ಹಲವಾರು ಲೋಪಗಳು, ನ್ಯೂನತೆಗಳಿಂದ ನಷ್ಟ ಎದುರಿಸುತ್ತಿದ್ದೇವೆ. ಆದ್ದರಿಂದ ಈ ಬಾರಿ ನಂದಿನಿ ಉತ್ಪನ್ನಗಳ ಬೇಡಿಕೆಗೆ ಅನುಗುಣವಾಗಿ ಉತ್ಪಾದಿಸಲು ಕ್ರಮ ವಹಿಸುತ್ತಿದ್ದೇವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಎಲ್ಲೆಲ್ಲಿ ಆದಾಯ ಹೆಚ್ಚಿರುವ ದೇವಾಲಯಗಳಲ್ಲಿ ನಂದಿನಿ ಹಾಲು ಮತ್ತು ತುಪ್ಪವನ್ನು ಬಳಕೆ ಮಾಡಲು ಸರ್ಕಾರ ಈಗಾಗಲೇ ಆದೇಶ ನೀಡಿದೆ. ಹೀಗಾಗಿ ಭಕ್ತರಿಗೆ ಗುಣಮಟ್ಟದ ಪ್ರಸಾದ ಲಭ್ಯವಾಗುವುದರ ಜೊತೆಗೆ ನಂದಿನಿ ಉತ್ಪನ್ನಗಳಿಗೂ ಬೇಡಿಕೆ, ಮಾರಾಟ ಹೆಚ್ಚಲಿದೆ’ ಎಂದರು.

ಮೈಮುಲ್ ನಿರ್ದೇಶಕ ಪ್ರಕಾಶ್ ಮಾತನಾಡಿ, ‘ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಮಾತ್ರ ನಷ್ಟವಿರುವ ಒಕ್ಕೂಟವನ್ನು ಲಾಭದ ಕಡೆ ಮುಖ ಮಾಡಿಸಲು ಸಾಧ್ಯ. ಹಾಲು ಉತ್ಪಾದನೆ ದಿನೇ ದಿನೇ ಹೆಚ್ಚಾಗುತ್ತಿದೆ, ಆದರೆ ಅಷ್ಟೇ ಹಾಲು ಮಾರಾಟವಾಗದಿರುವುದು ನಷ್ಟಕ್ಕೆ ಮತ್ತೊಂದು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಒಟ್ಟಾಗಿ ಒಕ್ಕೂಟ ಆದಾಯ ಗಳಿಸುವ ಮೂಲಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತದೆ’ ಎಂದು ತಿಳಿಸಿದರು.

ಮನವಿ: ಇದೆ ವೇಳೆ ಗ್ರಾಮಸ್ಥರಿಂದ ಸಚಿವರಿಗೆ ಬೆಟ್ಟದತುಂಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯಾಧಿಕಾರಿ ನೇಮಕ ಮಾಡುವಂತೆ  ಹಾಗೂ ಬೆಟ್ಟಕ್ಕೆ ರಸ್ತೆ, ನೀರಿನ ಟ್ಯಾಂಕ್, ನೂತನ ಪಡಿತರ ಕೇಂದ್ರ ಮತ್ತು ರಸ್ತೆಗಳ ಅಭಿವೃದ್ಧಿ ಮಾಡಿಸಿಕೊಡಬೇಕೆಂದು ಮನವಿ ಪತ್ರ ಸಲ್ಲಿಸಿದರು.

ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಸಂಘದ ಅಧ್ಯಕ್ಷ ಚಿಕ್ಕೇಗೌಡ, ಮುಖಂಡರಾದ ಡಿ.ಟಿ ಸ್ವಾಮಿ, ರಹಮದ್ ಜಾನ್ ಬಾಬು, ಲೋಕೇಶ್, ಕೃಷ್ಣೇಗೌಡ, ಯಶೋಧರ, ಪುಟ್ಟರಾಜು, ನಂದೀಶ್, ಮಲ್ಲಿಕಾರ್ಜುನ, ಸರಸ್ವತಿ, ಅನಿತಾ, ತಹಶೀಲ್ದಾರ್ ನಿಸರ್ಗಪ್ರಿಯ, ಸಿಪಿಐ ದೀಪಕ್, ಇ.ಒ ಸುನಿಲ್, ಪಿಎಸ್ಐ ಶಿವಶಂಕರ್, ಸಹಾಯಕ ವ್ಯವಸ್ಥಾಪಕ ಡಾ.ಸತೀಶ್, ವಿಸ್ತರಣಾಧಿಕಾರಿ ನಿಶ್ಚಿತ್, ಸಂಘದ ನಿರ್ದೇಶಕ ಜಯರಾಮೇಗೌಡ, ಸ್ವಾಮಿಗೌಡ, ಸಾವಿತ್ರಮ್ಮ, ಸರೋಜಮ್ಮ, ಬಸವರಾಜು, ಹೊನ್ನೇಗೌಡ, ಭಾಗವಹಿಸಿದ್ದರು.

ಬೆಟ್ಟದಪುರ ಸಮೀಪದ ಮೇಗಳಕೊಪ್ಪಲು ಗ್ರಾಮದಲ್ಲಿ ಸೋಮವಾರ  ಸಚಿವ ಕೆ.ವೆಂಕಟೇಶ್ ಹಾಲು ಉತ್ಪಾದಕ ಸಹಕಾರ ಸಂಘ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿದರು. ಪ್ರಕಾಶ್ ನಿತಿನ್ ವೆಂಕಟೇಶ್ ಚಿಕ್ಕೇಗೌಡ ಕೃಷ್ಣೇಗೌಡ ಯಶೋಧರ ಪಾಲ್ಗೊಂಡಿದ್ದರು
ಬೆಟ್ಟದಪುರ ಸಮೀಪದ ಮೇಗಳಕೊಪ್ಪಲು ಗ್ರಾಮದಲ್ಲಿ ಸೋಮವಾರ  ಸಚಿವ ಕೆ.ವೆಂಕಟೇಶ್ ಹಾಲು ಉತ್ಪಾದಕ ಸಹಕಾರ ಸಂಘ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿದರು. ಪ್ರಕಾಶ್ ನಿತಿನ್ ವೆಂಕಟೇಶ್ ಚಿಕ್ಕೇಗೌಡ ಕೃಷ್ಣೇಗೌಡ ಯಶೋಧರ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT