ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ವಿವಿಧೆಡೆ ‘ಶ್ರೀರಾಮನವಮಿ ಸಂಗೀತೋತ್ಸವ’

Published 9 ಏಪ್ರಿಲ್ 2024, 7:57 IST
Last Updated 9 ಏಪ್ರಿಲ್ 2024, 7:57 IST
ಅಕ್ಷರ ಗಾತ್ರ

ಮೈಸೂರು: ನಗರದ ವಿವಿಧೆಡೆ ‘ಶ್ರೀರಾಮನವಮಿ ಸಂಗೀತೋತ್ಸವ’ ಆಯೋಜಿಸಲಾಗಿದೆ.

ಜಯಲಕ್ಷ್ಮಿಪುರಂ 2ನೇ ಕ್ರಾಸ್‌ನ ರಾಮಸೇವಾ ಮಂಡಳಿ ಚಾರಿಟಬಲ್‌ ಟ್ರಸ್ಟ್‌ ಮೈಸೂರು ಉತ್ತರ ವತಿಯಿಂದ ವಿ.ವಿ. ಮೊಹಲ್ಲಾದ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ ‘30ನೇ ಶ್ರೀರಾಮನವಮಿ ಸಂಗೀತೋತ್ಸವ’ವನ್ನು ಏ.10ರಿಂದ 19ರವರೆಗೆ ಆಯೋಜಿಸಲಾಗಿದೆ. ಏ.1ರಂದು ಸಂಜೆ 6ಕ್ಕೆ ಉದ್ಘಾಟನೆ ಹಾಗೂ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಸ್ವಾಮಿ ಆದಿತ್ಯಾನಂದ ‘ವಸಂತ ನವರಾತ್ರಿ’ ಕುರಿತು ಪ್ರವಚನ ನೀಡುವರು.

ನಿತ್ಯ ಸಂಜೆ 6.15ಕ್ಕೆ ಸಂಗೀತ ಕಾರ್ಯಕ್ರಮ ನಡೆಯಲಿದೆ. 14ರಂದು ಬೆಳಿಗ್ಗೆ 10.30ಕ್ಕೆ ಶ್ರೀರಾಮ ತಾರಕ ಹೋಮ ನೆರವೇರಲಿದೆ. 19ರಂದು ಬೆಳಿಗ್ಗೆ 10ಕ್ಕೆ ‘ಸೀತಾ ಸಹಸ್ರನಾಮ ಮತ್ತು ಶ್ರೀರಾಮ ಪಟ್ಟಾಭಿಷೇಕ’ ನಡೆಯಲಿದೆ. ಸಂಜೆ 6.15ಕ್ಕೆ ವಿದ್ವಾನ್‌ ಡಿ.ಬಾಲಕೃಷ್ಣ ಅವರಿಗೆ ‘ಸಂಗೀತ ಕಲಾರಾಧಕ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 94482 82501 ಸಂಪರ್ಕಿಸಬಹುದು ಎಂದು ಕಾರ್ಯದರ್ಶಿ ಕೆ.ಎಸ್.ಎನ್. ಪ್ರಸಾದ್ ತಿಳಿಸಿದ್ದಾರೆ.

ರಾಮಕೃಷ್ಣನಗರದ ‘ಐ’ ಬ್ಲಾಕ್‌ನ ಗಣಪತಿ ಸೇವಾ ಮಂಡಳಿ ಟ್ರಸ್ಟ್‌ನಿಂದ ಗಣಪತಿ ದೇವಸ್ಥಾನದಲ್ಲಿ ಏ.9ರಿಂದ 18ರವರೆಗೆ 5ನೇ ರಾಮೋತ್ಸವ ಕಾರ್ಯಕ್ರಮಗಳನ್ನು ನಿತ್ಯ ಸಂಜೆ 6ಕ್ಕೆ ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 99860 37311 ಸಂಪರ್ಕಿಸಬಹುದು ಎಂದು ಆಡಳಿತ ಮಂಡಳಿ ಸದಸ್ಯ ಪಿ.ಕೃಷ್ಣಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT