ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು| ಮಿದುಳು ನಿಷ್ಕ್ರಿಯಗೊಂಡಿದ್ದ ಬಾಲಕನ ದೇಹ, ಅಂಗಾಂಗ ದಾನ

Last Updated 3 ಮಾರ್ಚ್ 2023, 11:49 IST
ಅಕ್ಷರ ಗಾತ್ರ

ಮೈಸೂರು: ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದು ಅಪೋಲೊ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದ, ಆಕಾಶ್ (17) ಎಂಬಾತನ ಮಿದುಳು ನಿಷ್ಕ್ರಿಯವಾಗಿದ್ದು, ದೇಹ, ಅಂಗಾಂಗ ದಾನ ಮಾಡಲಾಗಿದೆ.

ಈ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿದವರ ಪೈಕಿ ಅತಿ ಕಿರಿಯ ದಾನಿ ಎಂಬ ಕೀರ್ತಿಗೂ ಪಾತ್ರನಾಗಿದ್ದಾನೆ.

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕಾಶ್‌ನ ಮಿದುಳು ಫೆ.28ರಂದು ನಿಷ್ಕ್ರಿಯಗೊಂಡಿತ್ತು. ದೇಹ ಹಾಗೂ ಅಂಗಾಂಗ ದಾನ ಮಾಡಲು ಆತನ ಕುಟುಂಬದ ಸದಸ್ಯರು ಸಮ್ಮತಿಸಿದ್ದರು. ‘ಸೊಟ್ಟೊ’ ಅಧಿಕಾರಿಗಳ ಸಮ್ಮುಖದಲ್ಲಿ ಎರಡು ಮೂತ್ರಪಿಂಡ, ಒಂದು ಯಕೃತ್‌, ಹೃದಯ ಕವಾಟಗಳು ಮತ್ತು ಕಣ್ಣಿನ ಕಾರ್ನಿಯಾಗಳನ್ನು ದಾನ ಮಾಡಲಾಗಿದೆ. ಅರ್ಹರಿಗೆ ಕಸಿ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಆಸ್ಪತ್ರೆಯ ಉಪಾಧ್ಯಕ್ಷ ಎನ್‌.ಜಿ.ಭಾರತೀಶ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT