‘ಕೆಲಸ ಮುಗಿಸಿಕೊಂಡು ಶನಿವಾರ ರಾತ್ರಿ ಮನೆಗೆ ಬಂದ ವಿದ್ಯಾಧರೆ, ಮಕ್ಕಳೊಂದಿಗೆ ಕೋಣೆಯಲ್ಲಿ ಮಲಗಿದ್ದಾರೆ. ಭಾನುವಾರ ಬೆಳಿಗ್ಗೆ 9 ಗಂಟೆಗೆ ಹೊರ ಬಾರದ್ದರಿಂದ ಅನುಮಾನಗೊಂಡು ಡಾ.ಷಣ್ಮುಖ ಅವರು ಹೋಗಿ ಪರೀಕ್ಷಿಸಿದ್ದು, ಮೃತಪಟ್ಟಿರುವುದು ಗೊತ್ತಾಗಿದೆ. ಅವರ ಸಾವಿನ ಬಗ್ಗೆ ಅನುಮಾನವಿದೆ’ ಎಂದು ಮೃತರ ಸಹೋದರ ಶ್ರೀಕಾಂತ್ ದೂರು ನೀಡಿದ್ದಾರೆ.