ಮೈಸೂರು: ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಅವರ ಪತ್ನಿ ಮೀರಾಬಾಯಿ (75) ಅನಾರೋಗ್ಯದಿಂದ ಸೋಮವಾರ ಮಧ್ಯಾಹ್ನ ಇಲ್ಲಿನ ಬಿಜಿಎಸ್–ಅಪೋಲೊ ಆಸ್ಪತ್ರೆಯಲ್ಲಿ ನಿಧನರಾದರು.
ರಾಮಕೃಷ್ಣನಗರದ ಆರ್ಕಿಡ್ ಶಾಲೆ ಎದುರಿನ ನಿವಾಸಿಯಾದ ಅವರಿಗೆ ಪತಿ ಡಾ.ತಿಮ್ಮಯ್ಯ, ಪುತ್ರ ಅರುಣ್ ಕುಮಾರ್, ಪುತ್ರಿಯರಾದ ಸವಿತಾ ಹಾಗೂ ಡಾ.ಸಹನಾ ಇದ್ದಾರೆ.
ಪುತ್ರಿ ಸವಿತಾ ಬಹ್ರೈನ್ನಲ್ಲಿ ನೆಲೆಸಿದ್ದು, ಮಧ್ಯರಾತ್ರಿ ವೇಳೆಗೆ ಮೈಸೂರಿಗೆ ಬರುವ ನಿರೀಕ್ಷೆ ಇದೆ. ಮಂಗಳವಾರ ಬೆಳಿಗ್ಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.