ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ‘ಮಾದರಿ ಮೈಸೂರು ಚಾಮರಾಜರ ದೂರದೃಷ್ಟಿ’

ರಾಜ್ಯ ಒಕ್ಕಗಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಎಚ್‌.ಎಲ್‌.ಯಮುನಾ ಅಭಿಮತ
Last Updated 23 ಫೆಬ್ರುವರಿ 2023, 4:45 IST
ಅಕ್ಷರ ಗಾತ್ರ

ಮೈಸೂರು: ‘ಹತ್ತನೇ ಚಾಮರಾಜ ಒಡೆಯರ್‌ ದೂರದೃಷ್ಟಿ ಯೋಜನೆಗಳ ಮೂಲಕ ಮೈಸೂರು ಮಾದರಿ ಸಂಸ್ಥಾನವಾಗಲು ಅಡಿಪಾಯವನ್ನು ಹಾಕಿದವರು’ ಎಂದು ರಾಜ್ಯ ಒಕ್ಕಗಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಎಚ್‌.ಎಲ್‌.ಯಮುನಾ ಹೇಳಿದರು.

ನಗರದ ಚಾಮರಾಜ ವೃತ್ತದಲ್ಲಿ ಬುಧವಾರ ವೇದಿಕೆ ವತಿಯಿಂದ ಆಯೋಜಿಸಿದ್ದ ಹತ್ತನೇ ಚಾಮರಾಜ ಒಡೆಯರ್‌ ಅವರ 160ನೇ ಜಯಂತಿಯಲ್ಲಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

‘ಸಂಸ್ಥಾನದಲ್ಲಿ ಹಾಕಿದ ರೈಲ್ವೆ ಮಾರ್ಗಗಳು ಈಗಲೂ ಬಳಕೆಯಾಗುತ್ತಿವೆ. ಪ್ರಜಾಪ್ರತಿನಿಧಿ ಸಭೆ ಸ್ಥಾಪಿಸಿದರು. ರೈಲ್ವೆ, ಮೃಗಾಲಯ ಸೇರಿದಂತೆ ಕೈಗೊಂಡ ಹತ್ತಾರು ಯೋಜನೆಗಳು ಸಂಸ್ಥಾನವು ಪ್ರಗತಿಯ ಹಾದಿ ತೋರಿದವು’ ಎಂದು ಅಭಿಪ್ರಾಯಪಟ್ಟರು.

‘31ನೇ ವಯಸ್ಸಿಗೆ ನಿಧನರಾದ ಬಳಿಕ ಪತ್ನಿ ಕೆಂಪನಂಜಮ್ಮಣ್ಣಿ, ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಾರ್ಗದಲ್ಲಿಯೇ ಸಂಸ್ಥಾನದ ಜನರ ಕಲ್ಯಾಣಕ್ಕೆ ಶ್ರಮಿಸಿದರು’ ಎಂದು ಸ್ಮರಿಸಿದರು.

‘ಚಾಮರಾಜರ ಜಯಂತಿಯನ್ನು ವೇದಿಕೆ ವತಿಯಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಎಲ್‌ಐಸಿ ವೃತ್ತದಲ್ಲಿ ಕೆಂಪನಂಜಮ್ಮಣ್ಣಿ ಪ್ರತಿಮೆ ಸ್ಥಾಪಿಸಬೇಕು’ ಎಂದರು.

ಇತಿಹಾಸ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು ಅವರನ್ನು ವೇದಿಕೆಯು ಸನ್ಮಾನಿಸಿತು.

ಮೇಯರ್ ಶಿವಕುಮಾರ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮುಖಂಡರಾದ ಎಚ್.ಕೆ.ರಾಮು, ಸುನಿಲ್, ರವಿ, ದ್ಯಾವಪ್ಪನಾಯಕ, ಎಂ.ಚಂದ್ರಶೇಖರ್, ಲೋಕೇಶ್ ಕುಮಾರ್ ಮಾದಾಪುರ, ಸೋಸಲೆ ಸಿದ್ದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT