ಮೈಸೂರು: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಏ.23ರಿಂದ ಮೈಸೂರಿನ ಚಿತ್ರಮಂದಿರಗಳನ್ನು (ಸಿಂಗಲ್ ಸ್ಕ್ರೀನ್) ಬಂದ್ ಮಾಡಲು, ಚಿತ್ರಮಂದಿರಗಳ ಮಾಲೀಕರು ನಿರ್ಧರಿಸಿದ್ದಾರೆ.

‘ಮೈಸೂರು ನಗರದ ಎಲ್ಲಾ 11 ಥಿಯೇಟರ್‌ಗಳನ್ನು ಬಂದ್ ಮಾಡಲಾಗುತ್ತಿದೆ. ಕೆ.ಆರ್.ನಗರ, ನಂಜನಗೂಡು ನಗರದ ಥಿಯೇಟರ್‌ಗಳ ಮಾಲೀಕರು ಕೂಡ ಬಂದ್ ಮಾಡಲು ಮುಂದಾಗಿದ್ದಾರೆ’ ಎಂದು ಮೈಸೂರು ನಗರ ಚಲನಚಿತ್ರ ಪ್ರದರ್ಶಕರ ಸಂಘದ ಕಾರ್ಯದರ್ಶಿ ಹಾಗೂ ಗಾಯತ್ರಿ ಚಿತ್ರಮಂದಿರದ ಮಾಲೀಕ ಎಂ.ಆರ್.ರಾಜರಾಂ ತಿಳಿಸಿದರು.

‘ಈಗಾಗಲೇ ಭಾರಿ ನಷ್ಟ ಅನುಭವಿಸಿದ್ದೇವೆ. ಆದಾಗ್ಯೂ ಸಾರ್ವಜನಿಕರು ಹಾಗೂ ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಸ್ವಯಂಪ‍್ರೇರಣೆಯಿಂದ ಸಿನಿಮಾ ಥಿಯೇಟರ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.