ಬುಧವಾರ, ಡಿಸೆಂಬರ್ 7, 2022
22 °C

ಮೈಸೂರಿನಲ್ಲಿ ಬಾಡಿಗೆ ರೂಂನಲ್ಲಿದ್ದ ಮಂಗಳೂರು ಸ್ಫೋಟದ ಆರೋಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಂಗಳೂರಿನಲ್ಲಿ ಬಾಂಬ್ ಸ್ಫೋಟ ಮಾಡಿದ್ದ‌‌ ವ್ಯಕ್ತಿ ಮೈಸೂರಿನಲ್ಲಿ ನಕಲಿ ವಿಳಾಸ ನೀಡಿ, ಮನೆಯ ಕೊಠಡಿ‌ಯೊಂದನ್ನು‌ ಬಾಡಿಗೆ‌ ಪಡೆದಿದ್ದ ವಿಷಯ ಹೊರಬಿದ್ದಿದೆ.

ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ‌ತನಿಖೆ ತೀವ್ರಗೊಳಿಸಿರುವ ಪೊಲೀಸರು,‌ ಆತ‌ ನಗರದಲ್ಲಿ‌ ತಂಗಿದ್ದ ಮನೆಯನ್ನು ಪತ್ತೆ ಹಚ್ಚಿದ್ದಾರೆ. ಮೇಟಗಳ್ಳಿಯಲ್ಲಿರುವ ಲೋಕನಾಯಕ‌ ನಗರದ ಮೋಹನ್‌ ಕುಮಾರ್‌ ಎಂಬುವರಿಗೆ ಸೇರಿದ ಮನೆಯಲ್ಲಿ ವಾಸವಿದ್ದ. ‘ಆರೋಪಿಯ ಭಾವಚಿತ್ರ ತೋರಿಸಿದ ವೇಳೆ, ಆತ ತಮ್ಮ ಮನೆಯಲ್ಲಿ ಬಾಡಿಗೆಗಿದ್ದ ಎಂಬುದನ್ನು ಮಾಲೀಕರು ಖಚಿತಪಡಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಗಳು‌ ಮಾಹಿತಿ‌ ನೀಡಿದರು.

‘ಆತ ಬಾಡಿಗೆ ಪಡೆಯವ ವೇಳೆ ಹುಬ್ಬಳ್ಳಿಯ ಮಾರುತಿಯ ಮಗ ಪ್ರೇಮರಾಜ್ ಎಂಬ ವಿಳಾಸ‌ ನೀಡಿದ್ದ. ತಿಂಗಳಿಗೆ ₹1,800 ಬಾಡಿಗೆ ಪಾವತಿಸುತ್ತಿದ್ದ. ಈತನ ಕೊಠಡಿಯಲ್ಲಿ ತನಿಖಾ ತಂಡ ಪರಿಶೀಲಿಸಿದಾಗ, ಒಂದು ಮೊಬೈಲ್ ಮೊಬೈಲ್ ಫೋನ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್, ಒಂದು ಡೆಬಿಟ್ ಕಾರ್ಡ್, ಬಳಕೆಯಾಗದ ಸಿಮ್ ಮತ್ತು ನೋಟ್ ಬುಕ್, ಸರ್ಕ್ಯೂಟ್ ಡ್ರಾಯಿಂಗ್‌ಗಳು ಪತ್ತೆಯಾಗಿವೆ’ ಎಂದು ತಿಳಿಸಿದ್ದಾರೆ.

‘ಇದಲ್ಲದೇ, ಸ್ಫೋಟಕ ವಸ್ತುಗಳು, ಸರ್ಕ್ಯೂಟ್ ಬೋರ್ಡ್‌ಗಳು, ಸಲ್ಫ್ಯೂರಿಕ್ ಆ್ಯಸಿಡ್, ಕೆಲವು ರಾಸಾಯನಿಕಗಳು, ಸಣ್ಣ ಬೋಲ್ಟ್‌ಗಳು, ಬ್ಯಾಟರಿಗಳು, ಮೊಬೈಲ್ ಡಿಸ್ಪ್ಲೇಗಳು, ಮರದ ಪುಡಿ, ಅಲ್ಯೂಮಿನಿಯಂ ಫಾಯಿಲ್, ಮಲ್ಟಿಮೀಟರ್, ವೈರ್‌ಗಳು, ಮಿಕ್ಸರ್ ಜಾರ್‌ಗಳು, ಪ್ರೆಶರ್ ಕುಕ್ಕರ್ ಸೀಟಿಗಳು ಪತ್ತೆಯಾಗಿವೆ’ ಎಂದು ಮೂಲಗಳು ತಿಳಿದುಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು