ಕುಪ್ಪಣ್ಣ ಉದ್ಯಾನದಲ್ಲಿ ಪುಷ್ಪ ಪ್ರದರ್ಶನಕ್ಕಾಗಿ ಕಾರ್ಮಿಕರು ಸಿದ್ಧತೆ ನಡೆಸಿದರು
ಬಂದ ವ್ಯಾಪಾರಿಗಳು...
ದಸರಾ ಉತ್ಸವ ಒಂದಷ್ಟು ಮಂದಿಗೆ ತುತ್ತಿನ ವಿಷಯವೂ ಹೌದು. ಇಲ್ಲಿ ಒಂದಷ್ಟು ವ್ಯಾಪಾರ ಮಾಡುವ ಆಸೆಯಿಂದ ಬೇರೆ ಬೇರೆ ಕಡೆಗಳಿಂದ ಬೀದಿಬದಿ ವ್ಯಾಪಾರಿಗಳು ಮಕ್ಕಳು ಕುಟುಂಬದೊಂದಿಗೆ ಈಗಾಗಲೇ ಮೈಸೂರಿಗೆ ಬಂದಿದ್ದಾರೆ. ಕೆ.ಆರ್. ವೃತ್ತ ಅರಮನೆ ಬಳಿ ಹಾಗೂ ಆವರಣದಲ್ಲಿ ದೇವರಾಜ ಅರಸು ರಸ್ತೆ ಚಾಮುಂಡಿಬೆಟ್ಟ ಮೊದಲಾದ ಕಡೆಗಳಲ್ಲಿ ಮುಖವಾಡಗಳು ಬಲೂನುಗಳು ಆಟಿಕೆಗಳು ಮೊದಲಾದವುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂತು.