ಅ.2ರ ವಿಜಯದಶಮಿಯಂದು ಪಟ್ಟದ ಆನೆ ಕುದುರೆ ಮತ್ತು ಹಸು ಆನೆಬಾಗಿಲಿಗೆ ಬರಲಿದ್ದು ಬೆಳಿಗ್ಗೆ 10.50ರಿಂದ 11.10ರೊಳಗೆ ಖಾಸಾ ಆಯುಧಗಳೊಂದಿಗೆ ಯದುವೀರ್ ವಿಜಯ ಯಾತ್ರೆಗೆ ಹೊರಡುವರು. ಭುವನೇಶ್ವರಿ ದೇಗುಲದಲ್ಲಿ ಶಮಿ ಪೂಜೆ ನಡೆಯಲಿದೆ. ಚಾಮುಂಡೇಶ್ವರಿ ದೇವಿಯ ಮೂರ್ತಿ ಹಾಗೂ ಆಯುಧಗಳೊಂದಿಗೆ ಕನ್ನಡಿ ತೊಟ್ಟಿಗೆ ತರುವರು. ಪಟ್ಟದ ಆನೆಯಾಗಿ ‘ಶ್ರೀಕಂಠ’ ಹಾಗೂ ನಿಶಾನೆ ಆನೆಯಾಗಿ ‘ಏಕಲವ್ಯ’ ಜವಾಬ್ದಾರಿ ನಿರ್ವಹಿಸಲಿವೆ.