ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪತ್ರಾಗಾರ ಇಲಾಖೆಯಿಂದ ರಾಜ್ಯಮಟ್ಟದ ವಿಚಾರ ಸಂಕಿರಣ

Published 17 ಮೇ 2024, 8:57 IST
Last Updated 17 ಮೇ 2024, 8:57 IST
ಅಕ್ಷರ ಗಾತ್ರ

ನಂಜನಗೂಡು: ‘ನೈಜತೆ ಪರಿಶೀಲನೆಗಾಗಿ ಚಾರಿತ್ರಿಕ ಮತ್ತು ಸಾರ್ವಜನಿಕ ದಾಖಲೆಗಳ ಸಂರಕ್ಷಣೆ ಅವಶ್ಯಕವಾಗಿದೆ, ಚಾರಿತ್ರಿಕ ದಾಖಲೆಗಳನ್ನ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ, ದಾಖಲೆಗಳು ರಾಷ್ಟ್ರದ ಪರಂಪರೆಯ ಅಮೂಲ್ಯ ಭಾಗವಾಗಿದೆ’ ಎಂದು ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ನಿದೇರ್ಶಕ ಎಚ್.ಎಲ್.‌ ಮಂಜುನಾಥ ತಿಳಿಸಿದರು.

ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ರಾಜ್ಯ ಪತ್ರಾಗಾರ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ 1973 ರಲ್ಲಿ ಪ್ರಾರಂಭವಾಗಿದೆ ಸುಮಾರು 160ವರ್ಷಕ್ಕೂ ಹಳೆಯ ನಿರ್ದಿಷ್ಟ ಮತ್ತು ಅಧಿಕೃತ ದಾಖಲೆಗಳನ್ನು ಸಂಗ್ರಹ ಮಾಡಿ, ಸಾರ್ವಜನಿಕರ ಸಂಶೋಧಕರ ಸರ್ಕಾರಿ ಇಲಾಖೆಗಳಿಗೆ ಉಪಯೋಗಕ್ಕಾಗಿ ಮಾಹಿತಿ ಒದಗಿಸುವ ಕೆಲಸ ಮಾಡುತ್ತಿದೆ’ ಎಂದರು.

‘ಕಡತಗಳು, ನಡವಳಿಗಳು, ಆದೇಶಗಳು, ವಾರ್ಷಿಕ ವರದಿಗಳು, ಭಾಷಣಗಳು, ನಕ್ಷೆಗಳು, ಪತ್ರಗಳು, ಛಾಯಾಚಿತ್ರಗಳು, ದಿನಪತ್ರಿಕೆಗಳು, ಧ್ವನಿ ಸಂಗ್ರಹ, ದಾಖಲೆಗಳ ರೂಪದಲ್ಲಿ ದಾಖಲೆಗಳಿರುತ್ತವೆ. ಸುಮಾರು 1860ರಿಂದ 2019ರವರೆಗಿನ ಅವಧಿಯಲ್ಲಿನ ದಾಖಲೆಗಳನ್ನು ಸಂರಕ್ಷಿಸಲಾಗಿದೆ’ ಎಂದು ಹೇಳಿದರು.

‘ದಾಖಲೆಗಳ ಸಂರಕ್ಷಣೆ ಮತ್ತು ನಿರ್ವಹಣೆ ಬಹಳ ಅತ್ಯಮೂಲ್ಯವಾಗಿರುವುದರಿಂದ, ದಾಖಲೆಗಳ ಮೌಲ್ಯ ಗಳನ್ನು ನಿರ್ಧರಿಸಿ ದಾಖಲೆಗಳನ್ನು ಎ.ಬಿ.ಸಿ.ಡಿ ಎಂಬ ನಾಲ್ಕು ವರ್ಗಗಳಾಗಿ ವಿಂಗಡಿಸಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ದಾಖಲೆಗಳ ನಿರ್ವಹಣೆ ಮಾಡಲಾಗುತ್ತದೆ’ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ರೇಣುಕಾಬಾಯಿ ಮಾತನಾಡಿ, ‘ದಾಖಲೆಗಳಿಂದ ನಮ್ಮ ಪೂರ್ವಜರ ಸಾಧನೆ ಮತ್ತು ಶ್ರಮದ ಬಗ್ಗೆ ತಿಳಿಯಬಹುದು. ಮುಖ್ಯವಾಗಿ ನಮ್ಮ ನಂಜನಗೂಡಿನ ಭವ್ಯ ಸಂಸ್ಕೃತಿ ಮತ್ತು ಕಲೆ ಮತ್ತು ವಾಸ್ತು ಶಿಲ್ಪದ ಬಗ್ಗೆ ತಿಳಿಯಬಹುದು. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಪತ್ರಾಗಾರದಲ್ಲಿನ ಮಾಹಿತಿಗಳ ಬಗ್ಗೆ ಕಲಿಕಾ ಆಸಕ್ತಿ ಹೆಚ್ಚಾಗಬೇಕು’ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಪ್ರೊ.ಬಿ.ಎಂ.ನಾಗರಾಜ್, ಸಹಾಯಕ ನಿರ್ದೇಶಕ ನಾಗೇಂದ್ರ ಪ್ರಸಾದ್ , ಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲ ರೇವಣ್ಣ ,ಉಪನ್ಯಾಸಕ ಎಚ್ಎಂ ಚಂದ್ರಶೇಖರ್ ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT