ನಂಜನಗೂಡು: ನಗರದ ಬಜಾರ್ ರಸ್ತೆಯಲ್ಲಿ ಪಾದಚಾರಿ ಮಾರ್ಗದ ಅತಿಕ್ರಮಣವನ್ನು ಸೋಮವಾರ ಸಂಚಾರ ವಿಭಾಗದ ಪೊಲೀಸರು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವ್ಯಾಪಾರಿಗಳು, ತಳ್ಳುಗಾಡಿಯವರು ಅತಿಕ್ರಮಿಸಿಕೊಂಡು ಸಂಚಾರ ವ್ಯವಸ್ಥೆಗೆ ಅಡ್ಡಿ ಉಂಟುಮಾಡಿರುವ ಬಗ್ಗೆ ಫೆ.6 ರಂದು ಶುಕ್ರವಾರದ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವರಸದಿ ಪ್ರಕಟಿಸಲಾಗಿತ್ತು.

ನಗರದ ಬಜಾರ್ ರಸ್ತೆಯ ನೆಹರು ವೃತ್ತದಿಂದ ಹಳೇ ಪೊಲೀಸ್ ಠಾಣೆವರೆಗಿನ ಬಜಾರ್ ರಸ್ತೆಯ ಪಾದಚಾರಿ ಮಾರ್ಗವನ್ನು ವ್ಯಾಪಾರಿಗಳು ಅತಿಕ್ರಮಸಿಕೊಂಡು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಪಿಎಸ್ಐ ಕೃಷ್ಣಕಾಂತ್ ಕೋಳಿ ನೇತೃತ್ವದಲ್ಲಿ ಪಾದಚಾರಿ ಮಾರ್ಗದ ಅತಿಕ್ರಮಣವನ್ನು ತೆರವುಗೊಳಿಸಿದರು.

‘ಅತಿಕ್ರಮಣ ಮಾಡಿದ್ದ ಪಾದಚಾರಿ ಮಾರ್ಗ ತೆರವುಗೊಳಿಸಲಾಗಿದೆ. ಅಂಗಡಿ ಮಾಲೀಕರು, ತಳ್ಳುಗಾಡಿ ಹಣ್ಣು ವ್ಯಾಪಾರಿಗಳಿಗೆ ಸಂಚಾರಕ್ಕೆ ಅಡ್ಡಿಪಡಿಸದಂತೆ ಎಚ್ಚರಿಕೆ ನೀಡಲಾಗಿದೆ. 15 ಮಂದಿ ವ್ಯಾಪಾರಿಗಳ ಮೇಲೆ ಕೆ.ಪಿ ಆಕ್ಟ್ 92(ಡಿ) ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಮತ್ತೆ ಅತಿಕ್ರಮಣ ಮಾಡಿದರೆ ದಂಡದ ಜೊತೆಗೆ ಪಾದಚಾರಿ ಮಾರ್ಗದಲ್ಲಿ ಇರಿಸಿದ ವಸ್ತುಗಳನ್ನು ಜಪ್ತಿ ಮಾಡಲಾಗುವುದು. ಬಜಾರ್ ರಸ್ತೆಯಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಬ್ಬಂದಿ ನೇಮಿಸಲಾಗಿದೆ’ ಎಂದು ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಕಾಂತ್ ಕೋಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.