ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸಿಂಗ್ | ಸಹಾನುಭೂತಿ ಅಗತ್ಯ; ಡಾ.ಕೆ.ಎಂ.ಮಾದಪ್ಪ

Published 28 ಏಪ್ರಿಲ್ 2024, 4:54 IST
Last Updated 28 ಏಪ್ರಿಲ್ 2024, 4:54 IST
ಅಕ್ಷರ ಗಾತ್ರ

ಮೈಸೂರು: ‘ನರ್ಸಿಂಗ್ ವೃತ್ತಿಯ ಸಹಾನುಭೂತಿ ಮತ್ತು ಮಾನವೀಯ ಗುಣಗಳಿಲ್ಲದೆ ಮುಂದುವರೆಯುವುದು ಅಸಾಧ್ಯ. ಅಲ್ಲಿನ ಸವಾಲುಗಳನ್ನು ಎದುರಿಸಿ ಮುಂದುವರೆಯಬೇಕು’ ಎಂದು ಸಿಗ್ಮಾ ಫೌಂಡೇಷನ್‌ ಟ್ರಸ್ಟಿ ಡಾ.ಕೆ.ಎಂ.ಮಾದಪ್ಪ ತಿಳಿಸಿದರು.

ಸಿಗ್ಮಾ ನರ್ಸಿಂಗ್ ಹಾಗೂ ಅಲೈಡ್ ಆರೋಗ್ಯ ವಿಜ್ಞಾನ ಕಾಲೇಜು ಆಯೋಜಿಸಿದ್ದ ಪದವಿ ದಿನ ಮತ್ತು ಜ್ಯೋತಿ ಬೆಳಗಿಸುವ ಹಾಗೂ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು

‘ಆರೋಗ್ಯ ರಕ್ಷಣೆಯಲ್ಲಿ ಶುಶ್ರೂಷಕಿಯರ ಪಾತ್ರ ಪ್ರಮುಖವಾದದ್ದು. ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಕೆಲಸಗಳೇ ಎದ್ದು ಕಾಣುತ್ತವೆ. ಜನರಿಗೆ ನೇರವಾಗಿ ಸಿಗುವುದರಿಂದ ನಿಮ್ಮ ಸೇವೆ ಹಾಗೂ ಪ್ರಾಮಾಣಿಕ ಕೆಲಸದಿಂದ ಅವರಲ್ಲಿ ಹೊಸ ಹುರುಪು ತರಬಹುದು. ಇತರೆ ವೃತ್ತಿಗಳಿಗಿಂತ ಭಿನ್ನವಾಗಿರುವ ನರ್ಸಿಂಗ್‌ ವೃತ್ತಿಯಲ್ಲಿ ಜನರಿಗೆ ಸೇವೆ ನೀಡಲು ಮುಂದಾಗಬೇಕು’ ಎಂದರು.

‘ಕಲಿಕೆ ಮುಗಿದರೆ ಜವಾಬ್ದಾರಿ ಮುಗಿಯುತ್ತದೆಂಬ ಭಾವನೆ ಬೇಡ. ಆ ಬಳಿಕವೇ ನಿಜವಾದ ಸವಾಲು ಆರಂಭವಾಗುವುದು. ವೃತ್ತಿಯ ಬಗ್ಗೆ ಬದ್ಧತೆ ಇರಿಸಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದಾಗ ಸಂಬಂಧಿಸಿದ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ನಗುಮುಖದ ಸೇವೆಯು ಈ ವೃತ್ತಿಯ ಪ್ರಮುಖ ಲಕ್ಷಣಗಳಲ್ಲಿ ಒಂದು. ನಿಮ್ಮ ಮಾತಿನ ಶೈಲಿ ಹಾಗೂ ಸೇವಾ ಕಾರ್ಯವು ಅವರ ಆರೋಗ್ಯ ಸುಧಾರಿಸುವಂತೆ ಮಾಡುತ್ತದೆ’ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಆರ್‌.ಮಂಜುನಾಥ್ ಮಾತನಾಡಿ, ‘ಇಲ್ಲಿ ಶಿಕ್ಷಣದೊಂದಿಗೆ ಶಿಸ್ತಿಗೂ ಮಹತ್ವ ನೀಡಲಾಗುತ್ತದೆ. ಅವರು ಸ್ವೀಕರಿಸುವ ಪ‍್ರತಿಜ್ಞಾ ವಿಧಿಯ ಆಶಯವನ್ನು ಪಾಲಿಸಿದರೆ ವೃತ್ತಿಪರತೆ ಎತ್ತಿ ಹಿಡಿಯಲು ಸಾಧ್ಯ. ನರ್ಸಿಂಗ್‌ ಉದ್ಯೋಗದಲ್ಲಿ ನೀವು ಬದುಕು ರೂಪಿಸಿಕೊಳ್ಳುವುದಲ್ಲದೆ ಇತರರ ಜೀವ ಕಾಪಾಡುವ ಕಾರ್ಯವನ್ನೂ ಮಾಡಬಹುದು’ ಎಂದು ಹೇಳಿದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ರಮೇಶ್‌, ಮಂಡ್ಯ ಜಿಲ್ಲೆಯ ಶ್ರೀನಿವಾಸಪುರದ ಸ್ಯಾಂಜೋ ಆಸ್ಪತ್ರೆಯ ಆಡಳಿತಾಧಿಕಾರಿ ಜಾಸ್ಮಿನ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT