ಮೈಸೂರು: ಚಾಮುಂಡಿಬೆಟ್ಟದಲ್ಲಿನ ಮಹಾಬಲೇಶ್ವರ ರಥದ ಚಕ್ರದ ಮೇಲಿನ ಚಿತ್ರಕಲಾ ವಿನ್ಯಾಸಕ್ಕೆ ಆಕ್ಷೇಪ ವ್ಯಕ್ತವಾದ 24 ಗಂಟೆಯಲ್ಲಿ, ಆ ವಿನ್ಯಾಸವನ್ನು ಬದಲಾಯಿಸಲಾಗಿದೆ.

ರಥಕ್ಕೆ ಹೊಸದಾಗಿ ಚಕ್ರ ನಿರ್ಮಿಸಿ ಪೇಂಟಿಂಗ್ ಮಾಡುವ ಗುತ್ತಿಗೆಯನ್ನು ನೀಡಲಾಗಿತ್ತು. ಗುತ್ತಿಗೆದಾರರು ಸೋಮವಾರ ಚಕ್ರದ ಮೇಲೆ ಚಂದ್ರ ಹಾಗೂ ನಕ್ಷತ್ರ ಆಕಾರದ ಚಿತ್ರವನ್ನು ವಿನ್ಯಾಸಗೊಳಿಸಿದ್ದಾರೆ. ಇದಕ್ಕೆ ಕೆಲ ಭಕ್ತರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆಯೇ ಮುಜರಾಯಿ ಇಲಾಖೆಯು ಮಂಗಳವಾರ ವಿನ್ಯಾಸ ಬದಲಾಯಿಸಿದೆ.

ಚಕ್ರದ ಮೊದಲ ವಿನ್ಯಾಸಕ್ಕೆ ಫೇಸ್‌ಬುಕ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ಪ್ರತಾಪಸಿಂಹ, ‘ನೋಡಿ... ಇಂಥದ್ದನ್ನು ಸಹಿಸಬೇಕಾ? ನಿಮ್ಮ ಗಮನಕ್ಕೆ ಇರಲಿ ಎಂದು ಫೋಟೊ ಹಾಕಿದ್ದೇನೆ. ಪಾಠ ಕಲಿಸದೇ ಬಿಡುವುದಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.