ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಂಜನಗೂಡು | ಕಳಪೆ ಔಷಧಿ ಸಿಂಪರಣೆ: ಶುಂಠಿ ಬೆಳೆ ನಾಶ

Published 27 ಆಗಸ್ಟ್ 2024, 15:22 IST
Last Updated 27 ಆಗಸ್ಟ್ 2024, 15:22 IST
ಅಕ್ಷರ ಗಾತ್ರ

ನಂಜನಗೂಡು: ತರಗನಹಳ್ಳಿ ಗ್ರಾಮದಲ್ಲಿ ಶಿವಣ್ಣ ಅವರ ಜಮೀನಿನಲ್ಲಿ ಬೆಳೆದ ಶುಂಠಿ ಬೆಳೆಗೆ ಆರ್ಗನಿಕ್ ಪ್ರಾಡಕ್ಟ್ ಎಂಬ ಕಂಪನಿ ನೀಡಿದ ಔಷಧಿ ಸಿಂಪರಣೆ ಮಾಡಿದ್ದರಿಂದ ಶುಂಠಿ ಬೆಳೆ ಸಂಪೂರ್ಣ ನಾಶವಾಗಿದೆ.

ಶಿವಣ್ಣನ ಶುಂಠಿ ಬೆಳೆಯ ಜಮೀನಿಗೆ ಭೇಟಿ ನೀಡಿದ ಆರ್ಗನಿಕ್ ಪ್ರಾಡಕ್ಟ್ ಕಂಪನಿ ಪ್ರತಿನಿಧಿ ನಮ್ಮ ಕಂಪನಿ ಔಷಧ ಶುಂಠಿ ಬೆಳೆಗೆ ಉಪಯೋಗಿಸಿದರೆ ಉತ್ತಮ ಇಳುವರಿ ಬರುತ್ತದೆ ಎಂದು ನಂಬಿಸಿ, ಬೆಳೆಗೆ ಔಷಧಿ ಸಿಂಪಡಿಸಿದ್ದರು.

ಔಷಧಿ ಸಿಂಪಡಿಸಿದ 15ದಿನಗಳ ನಂತರ ಶುಂಠಿ ಬೆಳೆ ಒಣಗಿ ಸಂಪೂರ್ಣ ನಾಶವಾಗಿದೆ, ಇದರಿಂದ ₹7 ಲಕ್ಷ ನಷ್ಟ ಉಂಟಾಗಿದೆ ಎಂದು ಶಿವಣ್ಣ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಶಿವಣ್ಣ ಅದೇ ಗ್ರಾಮದ ಚಿನ್ನಸ್ವಾಮಿ ಆಚಾರ್ ಅವರ ಜಮೀನನ್ನು ಶುಂಠಿ ಬೆಳೆಯಲು ₹1.30 ಲಕ್ಷಕ್ಕೆ ಗುತ್ತಿಗೆಗೆ ಪಡೆದಿದ್ದರು. ನಷ್ಟವನ್ನು ಕಂಪನಿಯವರು ತುಂಬಿಕೊಡಬೇಕು ಇಲ್ಲದಿದ್ದರೆ ಸಂಬಂಧಪಟ್ಟ ಕಂಪನಿ ಮುಂದೆ ಕುಟುಂಬ ಸಮೇತರಾಗಿ ಧರಣಿ ಕೂರುತ್ತೇವೆ ಎಂದು ಶಿವಣ್ಣ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT