ಮೈಸೂರು: ‘ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಂಧುವಳ್ಳಿಯ ಕೆಲವರು ಫೆ. 17ರಂದು ಟಿವಿಎಸ್ ಕಾರ್ಖಾನೆ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಗೆ ನಮ್ಮ ಬೆಂಬಲವಿಲ್ಲ’ ಎಂದು ಸಿಂಧುವಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಂಗನಾಯಕ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಆ ಕಾರ್ಖಾನೆ ಆಡಳಿತ ಮಂಡಳಿಯು ಜಮೀನು ನೀಡಿದ್ದ ಶೇ. 95ರಷ್ಟು ರೈತರ ಮಕ್ಕಳಿಗೆ ಕೆಲಸ ಕೊಟ್ಟಿದೆ. ಅದರಿಂದ ನಮ್ಮ ಭಾಗದ ಸ್ಥಳೀಯರಿಗೆ ಅನುಕೂಲವಾಗಿದೆ. ಕೌಟುಂಬಿಕ ದಾಖಲಾತಿ ನೀಡದ ಶೇ. 5ರಷ್ಟು ಮಂದಿಗೆ ಉದ್ಯೋಗ ಸಿಕ್ಕಿಲ್ಲ. ಇದನ್ನು ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಬಗೆಹರಿಸಲು ಭರವಸೆ ನೀಡಿದ್ದರೂ ಕೆಲವರು ಪ್ರತಿಭಟನೆಗೆ ಮುಂದಾಗಿದ್ದಾರೆ. ಅದನ್ನು ನಾವು ಬೆಂಬಲಿಸುವುದಿಲ್ಲ’ ಎಂದು ಹೇಳಿದರು.

‘ಶಾಸಕ ಜಿ.ಟಿ. ದೇವೇಗೌಡ ಅವರು ಕಂಪನಿಯ ಮುಖ್ಯಸ್ಥರೊಡನೆ ಚರ್ಚಿಸಿ ಜಮೀನಿನ ಮಾಲೀಕರಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ’ ಎಂದರು.

ಇಂಟ್ಯಾಕ್ ಜಿಲ್ಲಾಧ್ಯಕ್ಷ ಎನ್. ಪುಟ್ಟಯ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಮಾರ, ಸದಸ್ಯರಾದ ಎಂ. ಮಹೇಶ್, ಬಿ.ಎಂ. ಮಹದೇವ, ಶಿವಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.